ಸರ್ಕಾರಿ ಶಾಲೆಗಳ ಬಗ್ಗೆ ನಿರ್ಲಕ್ಷೃ ಸರಿಯಲ್ಲ

ಮೂಡಿಗೆರೆ: ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಸಾಧನೆ ಮಾಡಿದಾಗ ಕಲಿಸಿದ ಗುರುಗಳು ಹಾಗೂ ಕಾಲೇಜಿಗೆ ಗೌರವ ಸಿಗಲಿದೆ ಎಂದು ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರಾಚಾರ್ಯ ಪೂರ್ಣೇಶ್ ತಿಳಿಸಿದರು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಿಗೆ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸರ್ಕಾರಿ ಶಾಲೆ-ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸುವುದರಿಂದ ಪಾಲಕರ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎಂಬ ಭಾವನೆ ಸರಿಯಲ್ಲ. ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಪಡೆದವರು ದೇಶದ ಮಹಾತ್ಮರ ಸಾಲಿನಲ್ಲಿದ್ದಾರೆ. ಉದ್ಯೋಗದಲ್ಲಿ ಅತ್ಯುನ್ನತ ಹುದ್ದೆಗಳಿಗೂ ಹೋಗಿದ್ದಾರೆ. ಸರ್ಕಾರಿ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಕಾಳಜಿ ಹೊಂದಿರುತ್ತದೆ. ಕಲಿಕೆಯಲ್ಲಿ ವಿದ್ಯಾರ್ಥಿಗಳನ್ನು ಹಿಂದೆ ಬೀಳಲು ಅವಕಾಶ ನೀಡದೆ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರು ಶ್ರಮವಹಿಸುತ್ತಾರೆ. ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹೆಚ್ಚು ಆಸಕ್ತಿ ತೋರಿದ್ದರಿಂದ ನಮ್ಮ ಕಾಲೇಜು ಉನ್ನತಮಟ್ಟದ ಸಾಧನೆ ಮಾಡಿದೆ ಎಂದು ತಿಳಿಸಿದರು.
ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯಶಿಕ್ಷಕ ಶಿವರಾಮೇಗೌಡ ಮಾತನಾಡಿ, ಜೀವನದಲ್ಲಿ ಹೆಚ್ಚು ಬಳಕೆಗೆ ಬರುವಂತಹದಿದ್ದರೆ ಅದು ಶಿಕ್ಷಣ ಮಾತ್ರ. ಪಾಲಕರು ತಮ್ಮ ಮಕ್ಕಳು ಮಾತ್ರ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಪ್ರತಿದಿನ ಶಾಲೆ-ಕಾಲೇಜಿಗೆ ಕಳುಹಿಸುತ್ತಾರೆ. ಕಷ್ಟದಲ್ಲೂ ತಮ್ಮ ಮಕ್ಕಳ ಶಿಕ್ಷಣದ ಬಗೆಗಿನ ಕಾಳಜಿ ವಹಿಸುತ್ತಾರೆ. ಮಕ್ಕಳು ವಿದ್ಯಾಭ್ಯಾಸ ಪಡೆದ ತಮ್ಮ ಗುರಿಯಂತೆ ಮುನ್ನುಗ್ಗಿ ಉದ್ಯೋಗಕ್ಕೆ ಸೇರುವ ಪ್ರಯತ್ನ ನಡೆಸಬೇಕು. ಅದಕ್ಕಾಗಿ ಈಗಿನಿಂದಲೇ ವಿದ್ಯಾರ್ಥಿಗಳು ತಯಾರಿ ನಡೆಸಬೇಕಾಗಿದೆ. ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗ ಕೈ ಬೀಸಿ ಕರೆಯುತ್ತದೆ ಎಂದು ತಿಳಿಸಿದರು.
ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರಾದ ತಸ್ಮೀಯಾ, ಮಿಸ್ಬಾ ಫಾತೀಮ, ಆಯಿಷಾ ನಿಯಾನ ಅವರನ್ನು ಗೌರವಿಸಲಾಯಿತು. ಉಪನ್ಯಾಸಕರಾದ ಸವಿತಾ, ವಿಶ್ವನಾಥ್, ರಾಜಪ್ಪ, ವನಜಾಕ್ಷಿ, ಪೂರ್ಣಿಮಾ, ದೈವಿಕ, ಶ್ರುತಿ, ವರ್ಷಿತ ಮುಖಂಡ ಗೋಣಿಗದ್ದೆ ಯಾಕೂಬ್ ಇತರರಿದ್ದರು.

Share This Article

ಕರಗಿದ ಮೇಣದಬತ್ತಿಯಿಂದ ಏನೆಲ್ಲಾ ಉಪಯೋಗ; ಬಿಸಾಡುವ ಬದಲು ಮರುಬಳಕೆ ಮಾಡಿ..

ಮನೆಯಲ್ಲಿ ಉಪಯೋಗಿಸುವ ಎಷ್ಟೋ ವಸ್ತುಗಳು ಕೆಲಕಾಲದ ನಂತರ ಹಳೆಯದಾಗುತ್ತದೆ. ಮತ್ತೆ ಕೆಲವು ಬಳಸಿದ ನಂತರ ನಾಶವಾಗುತ್ತದೆ.…

ಈರುಳ್ಳಿ ಸಿಪ್ಪೆಯನ್ನು ಎಸೆಯುವ ತಪ್ಪನ್ನು ಮಾಡಬೇಡಿ! ಸಿಪ್ಪೆ ವೇಸ್ಟ್​ ಎಂದು ಬಿಸಾಡೋ ಬದಲು ಹೀಗೆ ಮಾಡಿ

ಯಾವುದೇ ಅಡುಗೆ ಮಾಡಿದ್ರು ಈರುಳ್ಳಿ ಬೇಕೆ... ಬೇಕು. ಈರುಳ್ಳಿಯು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಆದರೆ…

ನಿಮ್ಮ ಅಂಗೈನಲ್ಲಿ ತ್ರಿಶೂಲ ಗುರುತು ಇದೆಯಾ ನೋಡಿ… ಇದರರ್ಥ ತಿಳಿದ್ರೆ ನಿಮ್ಮ ಹುಬ್ಬೇರೋದು ಖಚಿತ!

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…