VIDEO | ಪಾಕ್ ಸ್ಪರ್ಧಿ ಜಾವೆಲಿನ್ ಬಳಸಿದ ವಿವಾದಕ್ಕೆ ನೀರಜ್ ಚೋಪ್ರಾ ಸ್ಪಷ್ಟನೆ

blank

ನವದೆಹಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಪದಕ ಬೇಟೆಗೆ ಮುನ್ನ ತಮ್ಮ ಜಾವೆಲಿನ್‌ಅನ್ನು ಪಾಕಿಸ್ತಾನದ ಅರ್ಷದ್ ನದೀಂ ಬಳಸಿರುವ ಬಗ್ಗೆ ನೀಡಿರುವ ಹೇಳಿಕೆಯ ಸುತ್ತ ಹರಡಿರುವ ವಿವಾದದಿಂದ ಬೇಸರವಾಗಿದೆ ನೀರಜ್ ಚೋಪ್ರಾ ಹೇಳಿದ್ದಾರೆ. ಅಲ್ಲದೆ ಅರ್ಷದ್ ನದೀಂ ತಮ್ಮ ಜಾವೆಲಿನ್ ಉಪಯೋಗಿಸಿರುವುದು ನಿಯಮಬದ್ಧವಾಗಿಯೇ ಇದೆ ಎಂದು ಸ್ಪಷ್ಟನೆ ನೀಡಿರುವ ನೀರಜ್, ‘ಪ್ರಚಾರ ಮತ್ತು ಕೀಳು ಅಜೆಂಡಾ’ಗಳಿಗೆ ನನ್ನ ಹೆಸರು ಬಳಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

‘ನಿಮ್ಮ ಪಟ್ಟಭದ್ರ ಹಿತಾಸಕ್ತಿ ಮತ್ತು ಪ್ರಚಾರಗಳಿಗೆ ನನ್ನನ್ನು ಮತ್ತು ನನ್ನ ಹೇಳಿಕೆಯನ್ನು ಬಳಸಬೇಡಿ ಎಂದು ಎಲ್ಲರಿಗೂ ಮನವಿ ಮಾಡಿಕೊಳ್ಳುವೆ. ಕ್ರೀಡೆಯು ನಮಗೆ ಒಗ್ಗಟ್ಟನ್ನು ಕಲಿಸುತ್ತದೆ. ನನ್ನ ಇತ್ತೀಚೆಗಿನ ಹೇಳಿಕೆಯ ಬಗ್ಗೆ ಸಾರ್ವಜನಿಕರಿಂದ ಬಂದಿರುವ ಕೆಲ ಪ್ರತಿಕ್ರಿಯೆಗಳು ಭಾರಿ ಬೇಸರ ತಂದಿವೆ. ಅರ್ಷದ್ ನದೀಂ ಸಿದ್ಧತೆಗಾಗಿ ನನ್ನ ಜಾವೆಲಿನ್ ಬಳಸಿರುವುದರಲ್ಲಿ ಯಾವುದೇ ತಪ್ಪಿಲ್ಲ. ಅದು ನಿಯಮಬದ್ಧವಾಗಿಯೇ ಇದೆ. ದಯವಿಟ್ಟು ಕೀಳು ಅಜೆಂಡಾವನ್ನು ಸಾಧಿಸಲು ನನ್ನ ಹೆಸರು ಬಳಸಬೇಡಿ’ ಎಂದು 23 ವರ್ಷದ ಸೈನಿಕ ನೀರಜ್ ಟ್ವಿಟರ್‌ನಲ್ಲಿ ಪ್ರಕಟಿಸಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: ಪ್ಯಾರಾಲಿಂಪಿಕ್ಸ್ ಸ್ಫೂರ್ತಿ; ಕೈಗಳಿಲ್ಲದ ಈ ಟೇಬಲ್ ಟೆನಿಸ್ ಆಟಗಾರ ಬಾಯಲ್ಲೇ ರ‌್ಯಾಕೆಟ್ ಹಿಡಿದು ಆಡ್ತಿದ್ದಾರೆ!

ಏನಿದು ವಿವಾದ?
ಆಗಸ್ಟ್ 7ರಂದು ಟೋಕಿಯೊದ ಒಲಿಂಪಿಕ್ಸ್ ಕ್ರೀಡಾಂಗಣದಲ್ಲಿ ನಡೆದ ಜಾವೆಲಿನ್ ಥ್ರೋ ಸ್ಪರ್ಧೆಯ ಫೈನಲ್‌ನ ಮೊದಲ ಎಸೆತಕ್ಕೆ ಮುನ್ನ ನನ್ನ ವೈಯಕ್ತಿಕ ಜಾವೆಲಿನ್ ಕಾಣೆಯಾಗಿತ್ತು. ಅದಕ್ಕಾಗಿ ನಾನು ಹುಡುಕಾಡಿದಾಗ ಅದು ಅರ್ಷದ್ ನದೀಂ ಬಳಿ ಇರುವುದು ಕಂಡುಬಂದಿತು. ಬಳಿಕ ಅವರಿಂದ ಅದನ್ನು ಪಡೆದು ಗಡಿಬಿಡಿಯಲ್ಲೇ ಥ್ರೋ ಮಾಡಿದ್ದೆ ಎಂದು ನೀರಜ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಇದರ ಬೆನ್ನಲ್ಲೇ ಅರ್ಷದ್ ನದೀಂ, ನೀರಜ್‌ರ ಜಾವೆಲಿನ್ ತೆಗೆದುಕೊಂಡಿದ್ದು ಯಾಕೆ? ಇದರ ಹಿಂದೆ ದುರುದ್ದೇಶವಿತ್ತೇ? ಜಾವೆಲಿನ್‌ಗೆ ಹಾನಿ ಮಾಡಲು ಪ್ರಯತ್ನಿಸಿದ್ದರೇ ಮುಂತಾದ ಪ್ರಶ್ನೆಗಳನ್ನು ಹಲವರು ಎತ್ತಿದ್ದರು. ಇನ್ನು ಕೆಲವರು, ನೀರಜ್ ಹೇಳಿಕೆಯನ್ನು ತಪ್ಪಾಗಿ ದಾಖಲಿಸಲಾಗಿದೆ. ಅರ್ಷದ್ ನದೀಂ ಅವರ ಜಾವೆಲಿನ್ ಅನ್ನು ನೀರಜ್ ಪಡೆದುಕೊಂಡು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು ಎಂದೂ ಸಾಮಾಜಿಕ ಜಾಲತಾಣಗಳಲ್ಲಿ ವಾದ ಮಂಡಿಸಿದ್ದರು. ಇನ್ನು ಕೆಲವರು ಅರ್ಷದ್​ ನದೀಂ ಅವರ ಜಾವೆಲಿನ್​ ಕೂಡ ನೀರಜ್​ ಜಾವೆಲಿನ್​ ರೀತಿಯದ್ದೇ ಬಣ್ಣ ಹೊಂದಿದೆ. ಹೀಗಾಗಿ ಗೊಂದಲದಿಂದ ಅವರು ಅದನ್ನು ತೆಗೆದುಕೊಂಡಿರಬಹುದು ಎಂದಿದ್ದಾರೆ.

ನಿಯಮಬದ್ಧ, ಬಳಕೆಗೆ ನಿರ್ಬಂಧವಿಲ್ಲ
‘ಫೈನಲ್‌ನಲ್ಲಿ ಮೊದಲ ಥ್ರೋಗೆ ಮುನ್ನ ಪಾಕಿಸ್ತಾನದ ಅರ್ಷದ್ ನದೀಂ ಅವರಿಂದ ನಾನು ಜಾವೆಲಿನ್ ಪಡೆದುಕೊಂಡ ಬಗ್ಗೆ ವಿವಾದ ಎದ್ದಿದೆ. ಇದನ್ನು ಅನಗತ್ಯವಾಗಿ ದೊಡ್ಡ ವಿವಾದ ಮಾಡಲಾಗುತ್ತಿದೆ. ಇದು ಅತ್ಯಂತ ಸರಳ ಸಂಗತಿ. ನಾವೆಲ್ಲರೂ ಸ್ಪರ್ಧೆಗೆ ಮುನ್ನ ವೈಯಕ್ತಿಕ ಜಾವೆಲಿನ್ ಅನ್ನು ರ‌್ಯಾಕ್‌ನಲ್ಲಿ ಇಟ್ಟ ಬಳಿಕ ಅದನ್ನು ಯಾರು ಬೇಕಾದರೂ ಬಳಸಬಹುದು. ಅದು ನಿಯಮದಲ್ಲಿದೆ. ಅದರಲ್ಲಿ ಯಾವುದೇ ತಪ್ಪಿಲ್ಲ. ನದೀಂ ಜಾವೆಲಿನ್ ತೆಗೆದುಕೊಂಡು ತಮ್ಮ ಎಸೆತಕ್ಕೆ ಸಿದ್ಧರಾಗುತ್ತಿದ್ದರು. ಆಗ ನಾನು ನನ್ನ ಎಸೆತಕ್ಕಾಗಿ ಅದನ್ನು ಕೇಳಿ ಪಡೆದುಕೊಂಡೆ. ನಾವು ಎಲ್ಲ ಜಾವೆಲಿನ್ ಎಸೆತಗಾರರು ಉತ್ತಮ ಬಾಂಧವ್ಯ ಹೊಂದಿದ್ದೇವೆ ಮತ್ತು ಒಬ್ಬರಿಗೊಬ್ಬರು ಚೆನ್ನಾಗಿಯೇ ಮಾತನಾಡುತ್ತೇವೆ’ ಎಂದು ನೀರಜ್ ವಿವರಿಸಿದ್ದಾರೆ.

ನೀರಜ್ ಚೋಪ್ರಾ ಜಾವೆಲಿನ್ ಥ್ರೋನಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಅಥ್ಲೆಟಿಕ್ಸ್‌ನಲ್ಲಿ ಪದಕ ಜಯಿಸಿದ ಮೊದಲ ಭಾರತೀಯರೆಂಬ ಇತಿಹಾಸ ನಿರ್ಮಿಸಿದ್ದರು. ಜಾವೆಲಿನ್ ಎಸೆತ ಸ್ಪರ್ಧೆಯ ವೇಳೆ ಯಾವುದೇ ಸ್ಪರ್ಧಿಯ ವೈಯಕ್ತಿಕ ಜಾವೆಲಿನ್ ಅನ್ನು ಬೇರೆ ಸ್ಪರ್ಧಿ ಬಳಸಬಾರದು ಎಂಬ ನಿಬಂಧನೆಯಿಲ್ಲ. ಸ್ಪರ್ಧಿಗಳು ಕ್ರೀಡಾಂಗಣದ ರ‌್ಯಾಕ್‌ನಲ್ಲಿಟ್ಟಿರುವ ಯಾವುದೇ ಜಾವೆಲಿನ್ ಬೇಕಾದರೂ ತೆಗೆದುಕೊಂಡು ಉಪಯೋಗಿಸಬಹುದು ಎಂದು ಮಾಜಿ ಕೋಚ್ ಒಬ್ಬರು ಕೂಡ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಕೋಚ್ ಮಿಸ್ಬಾ ಉಲ್ ಹಕ್‌ಗೆ ಕರೊನಾ ಸೋಂಕು

Share This Article

ಋತುಸ್ರಾವದ ಸಮಯದಲ್ಲಿ ಮೊಸರು ಸೇವಸಬಹುದೇ.. ಬೇಡವೇ; ಗೊಂದಲಕ್ಕೆ ಇಲ್ಲಿದೆ ಪರಿಹಾರ | Health Tips

ಮೊಸರು ಅಥವಾ ಉಪ್ಪಿನಕಾಯಿ ತಿನ್ನುವುದರಿಂದ ಋತುಸ್ರಾವದ ಸಮಯದಲ್ಲಿ ಸಮಸ್ಯೆಯಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಯಾವುದೇ ಆಹಾರವು…

ಉಸಿರಾಟದ ವ್ಯಾಯಾಮ ಗೊರಕೆ ಸಮಸ್ಯೆಗೆ ಪರಿಹಾರ; ಇದು ಸುಳ್ಳೋ-ಸತ್ಯವೋ.. ವೈದ್ಯರು ಹೇಳೋದೇನು? | Health Tips

ನಿದ್ರಿಸುವಾಗ ಗೊರಕೆ ಹೊಡೆಯುವ ವ್ಯಕ್ತಿಗೆ ಮಾತ್ರವಲ್ಲದೆ ಸುತ್ತಮುತ್ತಲಿನವರಿಗೂ ತೊಂದರೆಯ ಅನುಭವವಾಗುತ್ತದೆ. ಸಾಮಾನ್ಯವಾಗಿ ಇದನ್ನು ಲಘುವಾಗಿ ತೆಗೆದುಕೊಳ್ಳಲಾಗುತ್ತದೆ.…

Vastu Tips : ರಾತ್ರಿ ಮಲಗುವ ಮುನ್ನ ಈ ತಪ್ಪುಗಳನ್ನು ಮಾಡಬೇಡಿ!ಸಾಲದ ಸುಳಿಗೆ ಸಿಲುಕುತ್ತೀರಿ..!

Vastu Tips: ದೃಷ್ಟ ಚೆನ್ನಾಗಿದ್ದರೆ ಕೆಲವರು ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುತ್ತಾರೆ. ಕೆಲವರು  ಐಷಾರಾಮಿ ಜೀವನ ನಡೆಸಲು ಕಷ್ಟಪಡುತ್ತಾರೆ. ಅವರು…