ರಗಡ್​ ಸತೀಶ್;​ “ದ ರೈಸ್​ ಆಫ್​ ಅಶೋಕ’ ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ನಟ

blank

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ನೀನಾಸಂ ಸತೀಶ್​ ನಾಯಕನಾಗಿ ನಟಿಸುತ್ತಿರುವ “ಅಶೋಕ ಬ್ಲೇಡ್​’ ಚಿತ್ರ “ದ ರೈಸ್​ ಆ್ಫ್​ ಅಶೋಕ’ ಎಂಬ ಹೊಸ ಶೀರ್ಷಿಕೆಯಲ್ಲಿ ತೆರೆಗೆ ಬರಲಿರುವ ಬಗ್ಗೆ ಇತ್ತೀಚೆಗಷ್ಟೆ ಹೇಳಿದ್ದೆವು. ಇದೀಗ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆಯಾಗಿದ್ದು, ಹಿಂದೆಂದೂ ಕಾಣದ ಲುಕ್​ನಲ್ಲಿ ನೀನಾಸಂ ಸತೀಶ್​ ಮಿಂಚಿದ್ದಾರೆ. ಕಳೆದ ವರ್ಷ ನಿರ್ದೇಶಕ ವಿನೋದ್​ ಧೋಂಡಾಲೆ ನಿಧನದ ಬಳಿಕ ಸಿನಿಮಾ ಬರುವುದೇ ಅನುಮಾನ ಎನ್ನಲಾಗಿತ್ತು. ಈಗಾಗಲೇ ಚಿತ್ರದ ಶೇಕಡಾ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಹೊಸ ಶೀರ್ಷಿಕೆಯಲ್ಲಿ ನಾಯಕ ನೀನಾಸಂ ಸತೀಶ್​, ಚಿತ್ರಕ್ಕೆ ಮರುಚಾಲನೆ ನೀಡಿದ್ದಾರೆ.

ರಗಡ್​ ಸತೀಶ್;​ "ದ ರೈಸ್​ ಆಫ್​ ಅಶೋಕ' ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ನಟ

blank

“ಚಮಕ್​’, “ಕ್ಷೇತ್ರಪತಿ’, “ಅವತಾರ ಪುರುಷ’ ಸೇರಿ ಹಲವು ಸಿನಿಮಾಗಳಿಗೆ ಸಂಕಲನಕಾರನಾಗಿದ್ದ ಮನು ಶೇಡ್ಗಾರ್​ ನಿರ್ದೇಶನದಲ್ಲಿ ಚಿತ್ರದ ಉಳಿದ ಮಾತಿನ ಭಾಗ ಮತ್ತು ಹಾಡುಗಳ ಚಿತ್ರೀಕರಣ ನಡೆಯಲಿದೆ. ಸಿನಿಮಾದ ಸಂಕಲನದ ಜವಾಬ್ದಾರಿಯನ್ನೂ ಅವರೇ ವಹಿಸಿಕೊಂಡಿದ್ದಾರೆ. “”ದ ರೈಸ್​ ಆಫ್​​ ಅಶೋಕ’ ನನ್ನ ಕರಿಯರ್​ನ ಅತ್ಯುತ್ತಮ ಸಿನಿಮಾ ಆಗಲಿದೆ’ ಎಂದು ನಾಯಕ ಸತೀಶ್​ ಈ ಹಿಂದೆ ಹೇಳಿಕೊಂಡಿದ್ದರು. ಇದೀಗ ಬಿಡುಗಡೆಯಾಗಿರುವ ಮೋಷನ್​ ಪೋಸ್ಟರ್​ ಅದಕ್ಕೆ ಪೂರಕವಾಗಿ ಮೂಡಿಬಂದಿದೆ. ಮಚ್ಚು ಹಿಡಿದು ರಗಡ್​ ಲುಕ್​ನಲ್ಲಿ ಆ್ಯಕ್ಷನ್​ ಅವತಾರದಲ್ಲಿ ನೀನಾಸಂ ಸತೀಶ್​ ಕಾಣಿಸಿಕೊಂಡಿದ್ದು, ರೆಟ್ರೋ ಕಾಲದ ಬಂಡಾಯದ ಕಥೆ ಹೇಳುವ ಪ್ರಯತ್ನ ಚಿತ್ರತಂಡದ್ದು.

ರಗಡ್​ ಸತೀಶ್;​ "ದ ರೈಸ್​ ಆಫ್​ ಅಶೋಕ' ಚಿತ್ರದಲ್ಲಿ ವಿಭಿನ್ನ ಅವತಾರದಲ್ಲಿ ನಟ

blank

ಇದೇ ಫೆಬ್ರವರಿ 15ರಿಂದ ಚಿತ್ರದ ಶೂಟಿಂಗ್​ ಪ್ರಾರಂಭವಾಗಲಿದ್ದು, ಕನ್ನಡದ ಜತೆ ತೆಲುಗು ಮತ್ತು ತಮಿಳು ಭಾಷೆಗಳಲ್ಲೂ ತೆರೆಗೆ ಬರಲಿದೆ. ಸತೀಶ್​ ಜತೆ ಬಿ. ಸುರೇಶ್​, ಅಚ್ಯುತ್​ ಕುಮಾರ್​, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್​ ಮೈತ್ರೇಯ, ಯಶ್​ ಶೆಟ್ಟಿ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ “ದ ರೈಸ್​ ಆಫ್​ ಅಶೋಕ’ಗೆ ಲವಿತ್​ ಛಾಯಾಗ್ರಹಣ, ಪೂರ್ಣಚಂದ್ರ ತೇಜಸ್ವಿ ಸಂಗೀತವಿರಲಿದೆ. ವರ್ಧನ್​ ನರಹರಿ, ಜೈಷ್ಣವಿ ಜತೆ ನೀನಾಸಂ ಸತೀಶ್​ ಜಂಟಿಯಾಗಿ ಈ ಸಿನಿಮಾ ನಿರ್ಮಿಸುತ್ತಿದ್ದಾರೆ.

Share This Article

ಮಹಿಳೆಯರಲ್ಲಿ ಹೃದಯಾಘಾತದ ಲಕ್ಷಣಗಳ ಹೀಗಿವೆ..; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಹೃದಯಾಘಾತದ ಅಪಾಯವು ಪುರುಷರಲ್ಲಿ ಮಾತ್ರವಲ್ಲ ಮಹಿಳೆಯರಲ್ಲೂ ಹೆಚ್ಚಿನ ಪ್ರಕರಣಗಳಿವೆ. ಈ ಹೆಚ್ಚಳಕ್ಕೆ ಹಲವು ಕಾರಣಗಳಿವೆ. ಹೆಚ್ಚುತ್ತಿರುವ…

ದಾಲ್ಚಿನ್ನಿ ಪುರುಷರಿಗೆ ಎಷ್ಟು ಪ್ರಯೋಜನಕಾರಿ ಗೊತ್ತಾ? cinnamon benefits

cinnamon benefits: ದಾಲ್ಚಿನ್ನಿ ಸೇವನೆಯು ದೇಹಕ್ಕೆ ತುಂಬಾ ಪ್ರಯೋಜನಕಾರಿ. ದಾಲ್ಚಿನ್ನಿ ಸೇವನೆಯು ವಿಶೇಷವಾಗಿ ಪುರುಷರಿಗೆ ಒಳ್ಳೆಯದು…

ಈ ರಾಶಿಯ ಜನರು ಯಾರಿಗೋಸ್ಕರನೂ ತಮ್ಮ ಈ ಗುಣವನ್ನು ಎಂದಿಗೂ ಬಿಟ್ಟುಕೊಡಲ್ಲ! ನಿಮ್ಮ ಬಗ್ಗೆ ಹೇಗೆ? Zodiac Sign

Zodiac Sign : ಸಾಮಾನ್ಯವಾಗಿ ನಮ್ಮ ನಡುವೆ ಜಾತಕವನ್ನು ನಂಬುವಂತಹ ಅನೇಕ ಜನರಿದ್ದಾರೆ. ಅದೇ ರೀತಿ…