ಗಂಗಾವತಿ: ನಗರದ ಶ್ರೀ ನೀಲಕಂಠೇಶ್ವರ ದೇವಾಲಯದ ಜಾತ್ರಾಮಹೋತ್ಸವ ನಿಮಿತ್ತ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು.

ಕುರಹಿನಶೆಟ್ಟಿ ಸಮಾಜದ ನೇತೃತ್ವದಲ್ಲಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದ್ದು, ಬೆಳಗ್ಗೆ ಮೂರ್ತಿಗೆ ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಬಿಲ್ವಾರ್ಚನೆ, ಸಾಮೂಹಿಕ ವಿವಾಹ, ಭಜನೆ ಮತ್ತು ಪ್ರಸಾದ ವಿತರಣೆ ಜರುಗಿತು. ಎರಡು ಜೋಡಿಗಳು ದಾಂಪತ್ಯಕ್ಕೆ ಕಾಲಿಟ್ಟವು. ಸಂಜೆ ಸರ್ವಾಲಂಕೃತ ರಥೋತ್ಸವ ಪಾದಗಟ್ಟೆವರಿಗೂ ನೆರವೇರಿಸಲಾಯಿತು.
ದೇವಾಲಯದ ಕಾರ್ಯಚಟುವಟಿಕೆ ಮತ್ತು ಧಾರ್ಮಿಕ ಕಾರ್ಯಕ್ರಮ ಕುರಿತು ಸಮಾಜದ ಪ್ರತಿನಿಧಿ ಶ್ಯಾವಿ ತಿಪ್ಪಣ್ಣ ಮಾಹಿತಿ ನೀಡಿದರು. ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ, ಮುಖಂಡರಾದ ಏಳುಭಾವಿ ಕುಬೇರಪ್ಪ, ಕುರುಗೋಡು ಬಸವರಾಜ, ಚೇಗೂರು ಶ್ಯಾಮಣ್ಣ, ತಟ್ಟಿ ನಾಗಪ್ಪ, ದೇವಾಲಯ ಸಮಿತಿ ಗೌರವಾಧ್ಯಕ್ಷ ಎಂ.ರವೀಂದ್ರನಾಥ ನಾಗಪ್ಪ, ಸದಸ್ಯರಾದ ಮಾಂತಗೊಂಡ ಸರ್ವೇಶ, ಸಾತ್ವಿಕ್, ನಾಗರಾಜ ಹಲ್ಟಿ, ವಾಸುದೇವ ಮಾಚಾಲಿ, ಬಸವರಾಜ ಶಿಡ್ಲಗಟ್ಟಿ, ಬಸವರಾಜ ಐಲಿ ಇತರರಿದ್ದರು.