PHOTOS| ಬಾಲಿವುಡ್​ ಬ್ಯೂಟಿ ‘ಡಿಪ್ಪಿ’ ಧರಿಸಿರುವ ಈ ಒಂದು ಪ್ಯಾಂಟಿನ ಬೆಲೆ ಕೇಳಿದರೆ ಶಾಕ್​ ಆಗುವುದಂತೂ ಖಂಡಿತ!

ಮುಂಬೈ: ಬಾಲಿವುಡ್​ನ ಮೋಸ್ಟ್​ ಸ್ಟೈಲಿಸ್ಟ್​ ನಾಯಕಿಯೆಂದರೆ ಅದು ದೀಪಿಕಾ ಪಡುಕೋಣೆ. ಮೆಟ್​ಗಾಲಾ ಕಾರ್ಯಕ್ರಮದಲ್ಲಿ ತಮ್ಮ ವಿಭಿನ್ನ ಉಡುಗೆಯಿಂದಲೇ ಸದ್ದು ಮಾಡಿದ್ದ ಡಿಪ್ಪಿ, ಸಾಕಷ್ಟು ಬಾರಿ ತಾವು ತೊಡುವ ಡ್ರೆಸ್​ ಬೆಲೆಯಿಂದಲೇ ಇನ್ನೊಬ್ಬರು ತಮ್ಮ ಬಾಯಿ ಮೇಲೆ ಬೆರಳುವಂತೆ ಮಾಡುತ್ತಾರೆ. ತುಂಬಾ ಫ್ಯಾಷನ್​ ಮೋಹ ಹೊಂದಿರುವ ಡಿಪ್ಪಿ ತಮ್ಮ ಡ್ರೆಸ್​ಗಳಿಗೆ ಸಾಕಷ್ಟು ಹಣ ವ್ಯಯಿಸುತ್ತಾರೆ ಎಂಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಸದ್ಯ ಬಾಲಿವುಡ್​ನಲ್ಲಿ ಬಹು ಬೇಡಿಕೆ ಹಾಗೂ ಹೆಚ್ಚಿಗೆ ಸಂಭಾವನೆ ಪಡೆಯುವ ನಟಿಯಾಗಿರುವ 33 ವರ್ಷದ ದೀಪಿಕಾ ಇತ್ತೀಚೆಗೆ ಸಿಲ್ವರ್​ ಬಣ್ಣದ ಪ್ಯಾಂಟ್​ ಮತ್ತು ಬಿಳಿ ಬಣ್ಣದ ಶರ್ಟ್​ ಹಾಗೂ ಮ್ಯಾಚಿಂಗ್​ ರಿಂಗ್ಸ್​ ಮತ್ತು ಹೈಹೀಲ್ಡ್​ ಚಪ್ಪಲಿಯನ್ನು ಹಾಕಿಕೊಂಡು ಕ್ಯಾಮರಾಗೆ ಪೋಸ್​ ನೀಡಿರುವ ಫೋಟೋವನ್ನು ತಮ್ಮ ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅಪ್​ಲೋಡ್​ ಮಾಡಿಕೊಂಡಿದ್ದು, ವೈರಲ್​ ಆಗಿದೆ.

ಆದರೆ, ಡಿಪ್ಪಿ ಧರಿಸಿರುವ ಪ್ಯಾಂಟ್​ನ ಬೆಲೆ ಕೇಳಿದರೆ ಒಂದು ಕ್ಷಣ ಶಾಕ್​ಗೆ ಒಳಗಾಗುವುದು ಖಂಡಿತ. ಒಂದು ಪ್ಯಾಂಟಿನ ಬೆಲೆ 816 ಯೂರೋಗಳಷ್ಟಿದ್ದು, ಭಾರತ ಕರೆನ್ಸಿ ಪ್ರಕಾರ ಒಂದು ಪ್ಯಾಂಟಿಗೆ ಬರೋಬ್ಬರಿ 64,400 ರೂಪಾಯಿಯಾಗಿದೆ.

ಸದ್ಯ ಡಿಪ್ಪಿ ಆ್ಯಸಿಡ್​ ದಾಳಿಗೊಳಗಾಗಿ ಬದುಕುಳಿದಿರುವ ಸಂತ್ರಸ್ತೆ ಲಕ್ಷ್ಮೀ ಅಗರ್​ವಾಲ್​ ಜೀವನ ಆಧಾರಿತ ಚಪಾಕ್​ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರೀಕರಣ ಮುಗಿಸಿದ್ದು, ಚಿತ್ರ ಬಿಡುಗಡೆಗೆ ಡಿಪ್ಪಿ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್​)

View this post on Instagram

there’s no such thing as too much bling!💥

A post shared by Deepika Padukone (@deepikapadukone) on