ಕತ್ತು ಹಿಚುಕಿ ಮಹಿಳೆ ಕೊಲೆ

ಮಾಂಜರಿ: ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಮಹಿಳೆಯನ್ನು ಕತ್ತು ಹಿಸುಕಿ ತಲೆಯ ಮೇಲೆ ಕಲ್ಲು ಹಾಕಿ ಕೊಲೆ ಮಾಡಲಾಗಿದೆ. ಅಂಕಲಿ ಗ್ರಾಮದ ಲತಾ ಸುನೀಲ ಪರೀಟ (40) ಕೊಲೆಯಾದ ಮಹಿಳೆ.

ಅನಿಲ ಉರ್ಫ್ ಅಣ್ಣಪ್ಪ ಮಾರುತಿ ಕುನ್ನೂರೆ ಕೊಲೆ ಮಾಡಿದ ಆರೋಪಿ. ಆರೋಪಿಯು ತನ್ನ ಅಕ್ಕನನ್ನು ತನ್ನೊಂದಿಗೆ ಸಂಬಂಧ ಬೆಳೆಸುವಂತೆ ಸದಾ ಪೀಡಿಸುತ್ತಿದ್ದ. ಆಕೆ ಒಪ್ಪದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದಾನೆ ಎಂದು ಕೊಲೆಯಾದ ಮಹಿಳೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಸಿಪಿಐ, ಮಲ್ಲನಗೌಡ ನಾಯ್ಕರ್, ಅಂಕಲಿ ಪಿಎಸ್‌ಐ ವೀರಣ್ಣ ಲಟ್ಟಿ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.