
ಮುಂಬೈ: ಮಹಾರಾಷ್ಟ್ರ ಸಾರಿಗೆ ಸಂಸ್ಥೆಯ ಬೆಸ್ಟ್ ಬಸ್ಸುಗಳ ,ಮೇಲೆ ಹಾಕಿರುವ ‘ಕರ್ನಾಟಕ ನೋಡ ಬನ್ನಿ’ ಜಾಹೀರಾತಿನ ಬಗ್ಗೆ ಥಾಣೆ ವಿಧಾನಸಭಾ ಕ್ಷೇತ್ರದ ಎನ್ಸಿಪಿ ಶಾಸಕ ಜಿತೇಂದ್ರ ಅಹ್ವಾಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಜಿತೇಂದ್ರ ಕರ್ನಾಟಕ ಪ್ರವಾಸೋದ್ಯಮ ಇಲಾಖೆಯೂ ಮುಂಬೈ ನಗರ ಸಾರಿಗೆ ಬಸ್ಸುಗಳ ಮೇಲೆ ಇಂಗ್ಲೀಷ್ ಹಾಗೂ ಮರಾಠಿಯಲ್ಲಿ ಜಾಹೀರಾತು ಬರೆಸಿದೆ. ನೆರೆಯ ರಾಜ್ಯದ ಜಾಹೀರಾತನ್ನ ಮಹಾರಾಷ್ಟ್ರದ ಬಸ್ಸುಗಳ ಮೇಲೆ ಏಕೆ ಹಾಕಬೇಕು ಎಂದು ಪ್ರಶ್ನಿಸಿದ್ದಾರೆ.
ಮಹಾರಾಷ್ಟ್ರ ಸಾರಿಗೆ ಸಂಸ್ಥೆಯೂ ಈ ಜಾಹೀರಾತುಗಳನ್ನ ತೆಗೆಸಿಹಾಕದಿದ್ದಲ್ಲಿ ಬಸ್ಸುಗಳನ್ನ ಒಡೆದು ಹಾಕಲಾಗುವುದು. ಈ ಜಾಹೀರಾತನ್ನು ಹಾಕಿಸುವ ಮೂಲಕ ಮರಾಠಿಗರ ಗಾಯದ ಮೇಲೆ ಉಪ್ಪುಸವರಿದಂತಾಗಿದೆ ಎಂದು ಎನ್ಸಿಪಿ ಶಾಸಕ ಜಿತೇಂದ್ರ ಅಹ್ವಾಡ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕೋವಿಡ್ ವೇಳೆ ಬಿಡುಗಡೆಯಾಗಿದ್ದ ಕೈದಿಗಳಿಗೆ ಶರಣಾಗುವಂತೆ ಸುಪ್ರೀಂ ಕೋರ್ಟ್ ಸೂಚನೆ
ಇದನ್ನೂ ಓದಿ: ವಿಶ್ವಕರ್ಮ ಸಮುದಾಯ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಲು ಇದು ಸಕಾಲ: ಕಂಬಾರ