ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವ ಎನ್‌ಸಿಸಿ

ಗೋಣಿಕೊಪ್ಪ: ವಿದ್ಯಾಥಿ ಜೀವನದಲ್ಲಿ ಎನ್‌ಸಿಸಿ ಸೇರುವುದರಿಂದ ದೇಶ ಸೇವೆ ಮಾಡುವ ಮನೋಭಾವ ಬರುತ್ತದೆ ಎಂದು ಎನ್‌ಸಿಸಿ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ.ನಾಯಕ್ ಅಭಿಪ್ರಾಯಪಟ್ಟರು.

ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,ಎನ್‌ಸಿಸಿ ಸೇರುವುದರಿಂದ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಲ್ಲಿ ದೇಶಸೇವೆ, ಶಿಸ್ತು, ದೇಶಭಕ್ತಿ, ಒಗ್ಗಟ್ಟು, ಜಾತ್ಯತೀತ ಮನೋಭಾವನೆಯ ಅರಿವು ಉಂಟಾಗುತ್ತದೆ. ಕೆಡೆಟ್‌ಗಳು ಹೆಚ್ಚಾಗಿ ಸೈನ್ಯಕ್ಕೆ ಸೇರುವಂತಾಗಬೇಕು. ಜಿಲ್ಲೆ, ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಡೆಟ್‌ಗಳಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದರು.

ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ವಿ.ಕುಸುಮಾಧರ್ ಮಾತನಾಡಿ, ಎನ್‌ಸಿಸಿ ಘಟಕದಿಂದ ಆಯೋಜಿಸುವ ಶಿಬಿರ ಹಾಗೂ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉದ್ಯೋಗ ಮತ್ತು ಉನ್ನತ ವ್ಯಾಸಂಗಕ್ಕೆ ಮೀಸಲಾತಿ ನೀಡುತ್ತದೆ ಎಂದರು.

ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಸಣ್ಣುವಂಡ ಎಸ್.ಮಾದಯ್ಯ, ಎನ್‌ಸಿಸಿ ಅಧಿಕಾರಿಗಳಾದ ಎಂ.ಆರ್.ಅಕ್ರಂ, ಐ.ಡಿ. ಲೇಪಾಕ್ಷಿ, ಬೀಜು, ಸಹಾಯಕ ಸಬಿನ್ ಥಾಪ, ಶಿಜು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *