ಆಂಧ್ರಪ್ರದೇಶ: ನಟ ವಿಜಯ್ ಸೇತುಪತಿ ಅಭಿನಯದ ಹಾಗೂ ನಿಥಿಲನ್ ಸ್ವಾಮಿನಾಥನ್ ನಿರ್ದೇಶನದ ಬ್ಲಾಕ್ಬಸ್ಟರ್ ‘ಮಹಾರಾಜ’ ಸಿನಿಮಾ ಚಿತ್ರಮಂದಿರಗಳಲ್ಲಿ ಅಬ್ಬರಿಸುವುದರ ಜತೆಗೆ ಒಟಿಟಿಯಲ್ಲಿ ಸಖತ್ ಸದ್ದು ಮಾಡಿತು. ಒಂದೊಳ್ಳೆ ಕಥೆಯನ್ನು ಬಹಳ ಅಚ್ಚುಕಟ್ಟಾಗಿ, ಸರಳವಾಗಿ ಪರದೆಯ ಮೇಲೆ ತೋರಿಸಿದ ನಿರ್ದೇಶಕನಿಗೆ ಸಿನಿಪ್ರಿಯರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಯಿತು. ‘ಮಹಾರಾಜ’ನ ಮೂಲಕ ಸಕ್ಸಸ್ ನೋಡಿದ ನಿಥಿಲನ್ ಇದೀಗ ತೆಲುಗು, ತಮಿಳು ಚಿತ್ರರಂಗದಲ್ಲಿ ತನ್ನದೇ ವಿಶೇಷ ಛಾಪು ಮೂಡಿಸಿರುವ ನಟಿ ನಯನತಾರ ಅವರೊಂದಿಗೆ ಹೊಸ ಚಿತ್ರಕ್ಕಾಗಿ ಕೈಜೋಡಿಸಿದ್ದಾರೆ.
ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಭದ್ರತಾ ಪಡೆಗಳಿಂದ ಭರ್ಜರಿ ಕಾರ್ಯಾಚರಣೆ; 8 ನಕ್ಸಲರ ಬಂಧನ
ಒಂದಷ್ಟು ದಿನಗಳ ಮಾತುಕತೆಗಳ ನಂತರ ಇದೀಗ ಸಿನಿಮಾದ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದ್ದು, ‘ಮಹಾರಾಣಿ’ ಎಂದು ಹೆಸರಿಡಲಾದ ಚಿತ್ರಕ್ಕೆ ನಯನತಾರ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮ್ಮ ಪಾತ್ರಕ್ಕೆ ಸಂಬಂಧಿಸಿದಂತೆ ನಿರ್ದೇಶಕರೊಂದಿಗೆ ಚರ್ಚಿಸಿದ ನಯನತಾರ, ತಾವು ನಟಿಸುವುದಾಗಿ ಒಪ್ಪಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಪ್ಯಾಶನ್ ಸ್ಟುಡಿಯೋಸ್ ಬ್ಯಾನರ್ನಡಿ ಸುದಾನ್ ಚಿತ್ರವನ್ನು ನಿರ್ಮಿಸುತ್ತಿದ್ದು, ಪ್ರತಿಭಾವಂತ ಟೆಕ್ನಿಷಿಯನ್ಗಳು ‘ಮಹಾರಾಣಿ’ಗಾಗಿ ಕೆಲಸ ಮಾಡಲಿದ್ದಾರೆ.
ಮಹಿಳಾ ಪ್ರಧಾನ ಚಿತ್ರ ಇದಾಗಿದ್ದು, ನಾಯಕ ಹಾಗೂ ನಾಯಕಿ ಎಲ್ಲವೂ ನಯನತಾರ ಅವರ ಪಾತ್ರವೇ ನಿಭಾಯಿಸಲಿದೆ ಎಂಬುದು ವಿಶೇಷ. ಸದ್ಯ ‘ಮಹಾರಾಜ’ ಚಿತ್ರದ ಮೂಲಕ ತಮಿಳು ಚಿತ್ರರಂಗದಲ್ಲಿ ಅಪಾರ ಮೆಚ್ಚುಗೆ ಗಳಿಸಿರುವ ನಿರ್ದೇಶಕ ನಿಥಿಲನ್, ಇದೀಗ ‘ಮಹಾರಾಣಿ’ ಸಿನಿಮಾ ಮೂಲಕ ಮತ್ತೊಮ್ಮೆ ತಮ್ಮ ಕೈಚಳಕ, ಕೆಲಸದ ಬಗ್ಗೆ ಇರುವ ತುಡಿತವನ್ನು ಪರಿಚಯಿಸಲು ಮುಂದಾಗುತ್ತಿದ್ದಾರೆ. ಈ ಸಿನಿಮಾ ಹೇಗೆ ಮೂಡಿಬರಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).
ಆ ದೃಶ್ಯ ಕಂಡು ಮಾಹಿಯಿಂದ ದೂರ ಇದ್ದೆವು! ಕ್ಯಾಪ್ಟನ್ ‘ಕೂಲ್’ ಅಲ್ಲವೇ ಅಲ್ಲ ಎಂದ ಸುಬ್ರಮಣ್ಯಂ ಬದ್ರಿನಾಥ್