ಈ ನಿರ್ದೇಶಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾದರಾ ನಟಿ ನಯನತಾರಾ?

ಚೆನ್ನೈ: ಬಹುಭಾಷಾ ತಾರೆ, ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ನಿಶ್ಚಿತಾರ್ಥ ಸಧ್ಯದಲ್ಲೇ ನೆರವೇರಲಿದೆಯಂತೆ. ಹಾಗೇ 2020ರಲ್ಲಿ ಮದುವೆ ಮಾಡಿಕೊಳ್ಳಲಿದ್ದಾರಂತೆ. ಇಂತಹದೊಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

ಈ ಹಿಂದೆ ನಟರಾದ ಸಿಂಬು ಹಾಗೂ ಪ್ರಭುದೇವ್​ ಜತೆ ನಯನತಾರಾ ಹೆಸರು ತಳುಕು ಹಾಕಿಕೊಂಡಿತ್ತು. ಸಿಂಬು ಹಾಗೂ ನಯನತಾರಾ ಪ್ರೀತಿ, ಕೆಮಿಸ್ಟ್ರಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇವರಿಬ್ಬರ ಬೆಡ್​ ರೂಂ ಸೀನ್​ಗಳು ಹರಿದಾಡಿ ವಿವಾದ ಸೃಷ್ಟಿಯಾಗಿತ್ತು. ಬಳಿಕ ಇವರಿಬ್ಬರ ಲವ್​ ಮುರಿದು ಬಿದ್ದು, ನಯನತಾರಾ ನಟ ಪ್ರಭುದೇವ್​ ಜತೆ ಸಂಬಂಧ ಬೆಳೆಸಿದ್ದರು. ಕೆಲಕಾಲ ತುಂಬ ಆತ್ಮೀಯರಾಗಿದ್ದರು. ಆದರೆ ಪ್ರಭುದೇವ್​ ತಮ್ಮ ಪತ್ನಿ, ಮಕ್ಕಳನ್ನು ಮರೆಯುತ್ತಿಲ್ಲ ಎಂದು ಬೇಸರಿಸಿಕೊಂಡ ನಯನತಾರಾ ಅವರಿಂದಲೂ ದೂರವಾಗಿದ್ದರು.
ಇಷ್ಟೆಲ್ಲ ಆದ ಬಳಿಕ ಈಗ ನಾಲ್ಕು ವರ್ಷಗಳಿಂದ ನಯನತಾರಾ ತಮಿಳು ನಿರ್ದೇಶಕ ವಿಘ್ನೇಶ್ ಶಿವನ್​ ಪ್ರೀತಿಯಲ್ಲಿ ಇದ್ದಾರೆಂದು ಹಲವು ಬಾರಿ ಸುದ್ದಿ ಹರಡಿತ್ತು.

ವಿಘ್ನೇಶ್​ ಶಿವನ್​ ಹಾಗೂ ನಯನತಾರಾ 2015ರಿಂದಲೂ ಡೇಟಿಂಗ್​ ಮಾಡುತ್ತಿದ್ದರು. ಅಲ್ಲದೆ ಕಳೆದ ವರ್ಷ ಇಬ್ಬರೂ ಒಟ್ಟಿಗೆ ಯುಎಸ್​ಗೆ ಹೋಗಿದ್ದರು. ಲಾಸ್​ ವೆಗಾಸ್​ನಲ್ಲಿ ಹೊಸ ವರ್ಷಾಚರಣೆಯಲ್ಲೂ ಇಬ್ಬರು ಒಟ್ಟಾಗಿ ಪಾಲ್ಗೊಂಡಿದ್ದರು. ಅದಲ್ಲದೆ ಬೇರೆ ದೇಶಗಳಿಗೂ ಜತೆಯಾಗಿ ಹೋಗಿದ್ದರು ಎಂಬ ಸುದ್ದಿಗಳೂ ಹರಿದಾಡಿದ್ದವು. ಸಾರ್ವಜನಿಕ, ಖಾಸಗಿ ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದರು.

ಈಗ ಈ ಜೋಡಿ ವರ್ಷದ ಕೊನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡು 2020ರಲ್ಲಿ ವಿವಾಹವಾಗಲಿದ್ದಾರಂತೆ. ಇವರಿಬ್ಬರ ಕುಟುಂಬದವರೂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಇವರಿಬ್ಬರು ಮೊದಲು ಭೇಟಿಯಾಗಿದ್ದು 2015ರಲ್ಲಿ. ವಿಘ್ನೇಶ್​ ನಿರ್ದೇಶನದ ನಾನುಂ ರೌಡಿ ಧಾನ್​ ಚಿತ್ರದಲ್ಲಿ ನಯನತಾರಾ ಅಭಿನಯಿಸಿದ್ದರು. ಆ ಸಿನಿಮಾ ಸೆಟ್​ನಲ್ಲಿ ಪರಿಚಯವಾಗಿತ್ತು. ತಮ್ಮಿಬ್ಬರ ನಡುವಿನ ಪ್ರೀತಿಯನ್ನು ಈ ಮೊದಲು ನಯನತಾರಾ ನಿರಾಕರಿಸಿದ್ದರು.

ನಯನತಾರಾ ಸದ್ಯ ರಜನಿಕಾಂತ್ ಜತೆ ದರ್ಬಾರ್ ಹಾಗೂ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜತೆ ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.

One Reply to “ಈ ನಿರ್ದೇಶಕನೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧರಾದರಾ ನಟಿ ನಯನತಾರಾ?”

Comments are closed.