ಮಳೆಗೆ ಮೈದುಂಬಿದ ಕೃಷಿ ಹೊಂಡಗಳು

ನಾಯಕನಹಟ್ಟಿ: ಗುಡುಗು, ಸಿಡಿಲು, ಬಿರುಗಾಳಿಯೊಂದಿಗೆ ಆರಂಭವಾದ ಮಳೆ ಸತತ ನಾಲ್ಕು ಗಂಟೆ ಸುರಿದ ಕಾರಣ ಹೋಬಳಿಯ ಬಹುತೇಕ ಕೃಷಿ ಹೊಂಡಗಳು ಭರ್ತಿಯಾಗಿವೆ.

ಹೋಬಳಿಯಾದ್ಯಂತ 2018-19ನೇ ಸಾಲಿನಲ್ಲಿ ಕೃಷಿ ಇಲಾಖೆಯ ಸಬ್ಸಿಡಿಯಡಿ ನಿರ್ಮಿಸಿದ್ದ 172 ಕೃಷಿ ಹೊಂಡಗಳಲ್ಲಿ 113ಕ್ಕೆ ನೀರು ಬಂದಿರುವುದು ರೈತರಲ್ಲಿ ಖುಷಿ ತಂದಿದೆ. ನಾಯಕನಹಟ್ಟಿಯಲ್ಲಿ 13.2 ಮಿ.ಮೀ ಮಳೆಯಾದ ವರದಿಯಾಗಿದೆ.

Leave a Reply

Your email address will not be published. Required fields are marked *