ರೈತ ಸಂಪರ್ಕ ಕೇಂದ್ರಕ್ಕೆ ಬೀಗ ಜಡಿದ ರೈತರು

ನಾಯಕನಹಟ್ಟಿ: ಬಿತ್ತನೆ ಶೇಂಗಾ ಬೀಜದ ವಿತರಣೆ ಸ್ಥಗಿತ ವಿರೋಧಿಸಿ ಸ್ಥಳೀಯ ರೈತ ಸಂಪರ್ಕ ಕೇಂದ್ರಕ್ಕೆ ರೈತರು ಗುರುವಾರ ಬೀಗ ಜಡಿದು ಪ್ರತಿಭ ಟನೆ ನಡೆಸಿದರು.

ರೈತ ಮುಖಂಡ ಕಾಕಸೂರಯ್ಯ ಮಾತನಾಡಿ,ಬುಧವಾರದಿಂದ ದಿಢೀರ್ ಶೇಂಗಾ ವಿತರಣೆ ಸ್ಥಗಿತಗೊಳಿಸಲಾಗಿದೆ ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದರು.

ಭಾರತೀಯ ಕಿಸಾನ್ ಸಂಘದ ಪಂಚಾಕ್ಷರಯ್ಯ ಮಾತನಾಡಿ, ಇಳುವರಿ ಬರದಿದ್ದರೆ ರಾಸುಗಳಿಗೆ ಮೇವಾದರೂ ದೊರೆಯುತ್ತದೆ. ಹೀಗಾಗಿ ಶೇಂಗಾ ಬಿತ್ತನೆ ಬೀಜ ವಿತರಿಸಲು ಮನವಿ ಮಾಡಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಕೃಷಿ ಇಲಾಖೆ ಸಹ ನಿರ್ದೆಶಕ ಎನ್. ಮಾರುತಿ, ಶೇಂಗಾ ವಿತರಣೆ ಪುನಾರಂಭಕ್ಕೆ ಅನುಮತಿ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದಂತೆ ಕೃಷಿ ಇಲಾಖೆ ಸಭೆ ಕರೆದಿದೆ ಎಂದು ತಿಳಿಸಿದರು. ಸಹಾಯಕ ನಿರ್ದೆಶಕರ ಮನವೊಲಿಕೆ ನಂತರ ಪ್ರತಿಭಟನೆ ಹಿಂದಕ್ಕೆ ಪಡೆಯಲಾಯಿತು.

ಮುಖಂಡರಾದ ತಿಪ್ಪೇಸ್ವಾಮಿ, ಪ್ರಕಾಶ್, ನಾಗಣ್ಣ ಸೇರಿ ಸುತ್ತಲಿನ ಗ್ರಾಮಗಳು ನೂರಾರು ರೈತರು ಭಾಗವಹಿಸಿದ್ದರು.