ಬಾಕಿ ವೇತನಕ್ಕಾಗಿ ನೌಕರರ ಪ್ರತಿಭಟನೆ

ನಾಯಕನಹಟ್ಟಿ: ಬಾಕಿ ವೇತನ ಮಂಜೂರಾತಿಗೆ ಆಗ್ರಹಿಸಿ ಪೌರ ಕಾರ್ಮಿಕರು ಶನಿವಾರ ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಪೌರಸೇವಾ ನೌಕಕರ ಮುಖಂಡ ಬಸಣ್ಣ ಮಾತನಾಡಿ, ಸರ್ಕಾರ ಎಲ್ಲ ನೌಕರರಿಗೆ ಕಾರ್ಮಿಕ ಇಲಾಖೆಯ ನಿಯಮದಂತೆ ಕನಿಷ್ಟ ವೇತನ ನೀಡುವಂತೆ ಆದೇಶ ನೀಡಿದೆ. ಹೊಸದಾಗಿ ಪಟ್ಟಣ ಪಂಚಾಯಿತಿ ಅಸ್ತಿತ್ವಕ್ಕೆ ಬಂದು ಎರಡು ವರ್ಷವಾದರೂ ಪೌರ ಕಾರ್ಮಿಕರನ್ನು ಕಾಯಂಗೊಳಿಸಿಲ್ಲ, ವೇತನ ನೀಡುತ್ತಿಲ್ಲ ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಪಪಂ ಮುಖ್ಯಾಧಿಕಾರಿ ಭೂತಪ್ಪ, ಸಿಬ್ಬಂದಿಗೆ ವೇತನ ಮಂಜೂರಾತಿಗೆ ಕೆಲವು ಸಮಸ್ಯೆಗಳಿವೆ. ಈ ಮೊದಲು ಜಿಲ್ಲಾ ಪಂಚಾಯಿತಿಯಲ್ಲಿ ನೌಕರರು ಈಗ ಪಪಂ ವ್ಯಾಪ್ತಿಗೆ ಬಂದಿದ್ದಾರೆ. ಮೇಲ್ದರ್ಜೆಗೇರಿದ ಪಂಚಾಯಿತಿಗಳಲ್ಲಿ ಇದೇ ಸ್ಥಿತಿ ಇದೆ. ಪೌರಸೇವಾ ನೌಕರರನ್ನು ಕಾಯಂ ಗೊಳಿಸಲಾಗುವುದು. ಈ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಾಗುವುದು. ಒಂದೆರಡು ತಿಂಗಳಲ್ಲಿ ವೇತನ ಮಂಜೂರು ಮಾಡಲಾಗುವುದು ಎಂದು ಹೇಳಿದರು.

ರಾಜಣ್ಣ, ಬೋರಣ್ಣ, ತಿಪ್ಪೇಸ್ವಾಮಿ, ಹರಳಯ್ಯ ಸೇರಿ 25ಕ್ಕೂ ಅಧಿಕ ಪೌರಸೇವಾ ಸಿಬ್ಬಂದಿ ಇದ್ದರು. ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಮಹಾಂತಣ್ಣ, ಸದಸ್ಯರಾದ ಮನ್ಸೂರ್, ಜೆ.ಟಿ.ಎಸ್.ತಿಪ್ಪೇಸ್ವಾಮಿ ಇತರರಿದ್ದರು.