ರಾಜನಹಳ್ಳಿಯಲ್ಲಿ ವಾಲ್ಮೀಕಿ ಜಾತ್ರೆ

ನಾಯಕನಹಟ್ಟಿ: ಹರಿಹರದ ರಾಜನಹಳ್ಳಿಯಲ್ಲಿ ಫೆ.8 ಮತ್ತು 9ರಂದು ನಡೆಯುವ ವಾಲ್ಮೀಕಿ ಜಾತ್ರೆಯಲ್ಲಿ ಹೋಬಳಿಯಿಂದ ಹೆಚ್ಚು ಜನರು ಭಾಗವಹಿಸಿ ಸಮುದಾಯದ ಒಗ್ಗಟ್ಟು ಪ್ರದರ್ಶಿಸಬೇಕೆಂದು ಮುಖಂಡ ಪಟೇಲ್ ಜಿ.ಎಂ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಸಮುದಾಯದ ಆರೋಗ್ಯ ಕೇಂದ್ರದ ಎದುರು ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಜಾತ್ರೆಗೆ ತೆರಳಲು 20 ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈಗಿರುವ ಶೇ.3.5 ಮೀಸಲಾತಿಯನ್ನು ಶೇ.7ಕ್ಕೇರಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕಿದೆ ಎಂದರು.

ತಾಪಂ ಸದಸ್ಯ ತಿಪ್ಪೇಸ್ವಾಮಿ, ಪಪಂ ಸದಸ್ಯ ಟಿ.ಬಸಣ್ಣ, ಮುಖಂಡರಾದ ಬಂಡೆಕಪಿಲೆ ಓಬಣ್ಣ, ಕಾಕಸೂರಯ್ಯ, ರಾಮಸಾಗರ ಮಂಜುನಾಥ, ಪಿ.ಶಿವಣ್ಣ ಮಾತನಾಡಿದರು.