ದೇವರ ರಾಸುಗಳಿಗೆ ಉಚಿತ ಮೇವು ವಿತರಣೆ

ನಾಯಕನಹಟ್ಟಿ: ಸರ್ಕಾರ ಗೋಶಾಲೆ ಆರಂಭಿಸುವವರೆಗೂ ಈ ಭಾಗದ ದೇವರ ರಾಸುಗಳಿಗೆ ಉಚಿತವಾಗಿ ಮೇವು ವಿತರಿಸಲಾಗುವುದು ಎಂದು ಪಾವಗಡದ ಶ್ರೀರಾಮಕೃಷ್ಣ ಸೇವಾಶ್ರಮದ ಜಪಾನಂದ ಸ್ವಾಮೀಜಿ ತಿಳಿಸಿದರು.

ಸಮೀಪದ ಹಿರೇಕೆರೆ ಕಾವಲು ಪ್ರದೇಶದಲ್ಲಿ ಹಸಿವಿನಿಂದ ಪರದಾಡುತ್ತಿವೆ ರಾಸುಗಳಿಗೆ ಮೇವು ವಿತರಿಸಿ ಮಾತನಾಡಿದರು.

ನಾಯಕನಹಟ್ಟಿ ಪ್ರದೇಶದಲ್ಲಿ ಭೀಕರ ಬರಗಾಲ ಎದುರಾಗಿದೆ. ಇಲ್ಲಿನ ಜಾನುವಾರಗಳು ಮೇವಿಲ್ಲದೆ ಪರದಾಡುವ ಸ್ಥಿತಿ ಚಿಂತಾಜನಕವಾಗಿದೆ. ಗೋಶಾಲೆಗೆ ಆಗ್ರಹಿಸಿ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಮೇವು ವಿತರಣೆಗೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕು ಎಂದರು.

ಪ್ರಸ್ತುತ ಎರಡು ಲೋಡ್ ಮೇವು ತಂದಿದ್ದೇವೆ. ಹಿರೇಕೆರೆ ಕಾವಲು, ಜೋಗಿಹಟ್ಟಿ, ಜಾಗನೂರಹಟ್ಟಿ ಸೇರಿ ಚಳ್ಳಕೆರೆ ತಾಲೂಕಿನ ಕುರುಡಿಹಳ್ಳಿ, ಬೊಮ್ಮದೇವರಹಟ್ಟಿ ದೇವರ ಎತ್ತುಗಳಿಗೆ ಉಚಿತವಾಗಿ ಮೇವು ವಿತರಿಸಲಾಗಿದೆ. ಸರ್ಕಾರ ಕೂಡಲೇ ಗೋಶಾಲೆ ಆರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ರಾಷ್ಟ್ರೀಯ ಕಿಸಾನ್ ಸಂಘದ ಹೋಬಳಿ ಅಧ್ಯಕ್ಷ ಬಿ.ಟಿ.ಪ್ರಕಾಶ್, ಪೂಜಾರಿ ಬೋರಯ್ಯ, ಮುಖಂಡ ಜಿ.ಟಿ. ಕುಮಾರಸ್ವಾಮಿ ಇತರರಿದ್ದರು.