More

    ದೊಡ್ಲ ಮಾರಿಕಾಂಬೆಗೆ ಬೀಳ್ಕೊಡುಗೆ

    ನಾಯಕನಹಟ್ಟಿ: ಹದಿಮೂರು ವರ್ಷಗಳ ನಂತರ ಪಟ್ಟಣಕ್ಕೆ ಆಗಮಿಸಿದ್ದ ಎನ್.ದೇವರಹಳ್ಳಿಯ ದೊಡ್ಲ ಮಾರಿಕಾಂಬೆಗೆ ಭಕ್ತರು ಗುರುವಾರ ಬೀಳ್ಕೊಟ್ಟರು.

    ಉತ್ಸವದ ಅಂಗವಾಗಿ ಗ್ರಾಮಕ್ಕೆ ಆಗಮಿಸಿದ್ದ ದೇವಿಗೆ ಭಕ್ತರು ಮೂರು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಅದ್ದೂರಿ ಜಾತ್ರೆ ಗುರುವಾರ ಸಂಪನ್ನಗೊಂಡಿತು. ಪೂಜಾ ವಿಧಾನಗಳು ಜರುಗಿದ ನಂತರ ಪಟ್ಟಣದ ದೊರೆ ಮನೆತನ, ಧೂಪದ ಸೇವೆಯವರು, ಗೊಂಚಿಕಾರರ ಮನೆಗೆ ತೆರಳಿ ಉಡಿತುಂಬಿಸುವ ಕಾರ್ಯ ನೆರವೇರಿಸಲಾಯಿತು. ನಂತರ ಹಟ್ಟಿ ಮಲ್ಲಪ್ಪನಾಯಕ ವೃತ್ತ, ತೇರುಬೀದಿ ನಾಯಕನಹಟ್ಟಿ- ಜಗಳೂರು ಮುಖ್ಯ ರಸ್ತೆಯ ಮೂಲಕ ಸಾಗಿ ಕೆಇಬಿ ಬಳಿ ಕೊನೆಯದಾಗಿ ಪೂಜೆ ಸಲ್ಲಿಸಲಾಯಿತು. ನಂತರ ಎನ್.ಮಹದೇವಪುರ, ಎನ್.ಗೌರೀಪುರದ ಮೂಲಕ ಎನ್.ದೇವರಹಳ್ಳಿಗೆ ಸಾಗಿತು.

    ದಾರಿಯುದ್ದಕ್ಕೂ ಮಹಿಳೆಯರು ರಸ್ತೆಗೆ ನೀರು ಹಾಕಿ ನಮಸ್ಕರಿಸುವ ದೃಶ್ಯ ಸಾಮಾನ್ಯವಾಗಿತ್ತು. ಮೆರವಣಿಗೆಯಲ್ಲಿ ಯುವಕರು, ಉರುಮೆ, ತಮಟೆಗಳ ನಾದಕ್ಕೆ ಕುಣಿದು ಕುಪ್ಪಳಿಸುತ್ತಿದ್ದರು. ಆಕರ್ಷಕ ಸಿಡಿಮದ್ದಿನ ಪ್ರದರ್ಶನ ಏರ್ಪಡಿಸಲಾಗಿತ್ತು. ದಾರಿಯ ಎರಡೂ ಬದಿ ಭಕ್ತ ಸಮೂಹ ಮನೆಯ ಮಗಳನ್ನು ಕಳುಹಿಸುವ ತೆರನಾಗಿ ಕಳುಹಿಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts