ನಕ್ಸಲರು ಶರಣಾಗಿ ಮುಖ್ಯವಾಹಿನಿಗೆ ಬನ್ನಿ! ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ನಮ್ಮದು: Amit Shah ಕರೆ

blank

ಛತ್ತೀಸಗಢ: ಮಾವೊವಾದಿಗಳು(ನಕ್ಸಲರು) ಶರಣಾಗಿ ಮುಖ್ಯವಾಹಿನಿಗೆ ಬನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ(Amit Shah) ಕರೆ ನೀಡಿದರು.

ಇಲ್ಲಿನ ರಾಯಪೂರ ಪೊಲೀಸ್​ ಮೈದಾನ ಕವಾಯುತು ಮೈದಾನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ಬಸ್ತರ್​ ಒಲಂಪಿಕ್’​ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಮಾತನಾಡಿದರು.

”ನಾನು ನಿಮ್ಮ ಬಳಿ ಮನವಿ ಮಾಡುವೆ, ನಕ್ಸಲರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಬನ್ನಿ, ನಿಮಗೆ ಪುನರ್ವಸತಿ ಕಲ್ಪಿಸುವ ಜವಾಬ್ದಾರಿ ನಮ್ಮದು. 2026ರ ಮಾರ್ಚ್​ ಹೊತ್ತಿಗೆ ನಕ್ಸಲಿಸಂ ಪೀಡುಗು ನಿರ್ಮೂಲನೆ ಮಾಡುವುದು ಕೇಂದ್ರ ಮತ್ತು ಇಲ್ಲಿ ರಾಜ್ಯ ಸರ್ಕಾರ ಗುರಿ ಹೊಂದಿದೆ. ಹೀಗಾಗಿ, ನಿಮ್ಮ ಒಳ್ಳೆಯು ಭವಿಷ್ಯ ಮುಂದಿದೆ. ಎಲ್ಲರೂ ಮುಖ್ಯವಾಹಿನಿ ಬನ್ನಿ ಎಂದ ಅವರು, ಮನವಿಗೆ ಕಿವಿಗೊಡದಿದ್ದರೇ ಭದ್ರತಾ ಪಡೆಗಳು ಕ್ರಮಗೊಳ್ಳಲಿವೆ” ಎಂದು ಶಾ ಎಚ್ಚರಿಕೆ ನೀಡಿದರು.

ಇದನ್ನೂ ಓದಿ:ನಗರ ಪಾಲಿಕೆ ಮಾಜಿ ಸದಸ್ಯ ಜೆ.ಎಸ್.ಜಗದೀಶ್ ಬಳಗದ ವತಿಯಿಂದ ಕ್ರೀಡಾ ಸಾಧಕರಿಗೆ ಸನ್ಮಾನ

ನಿಮಗಿಂತ ಮತ್ತು ನಿಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ನಾನು ಇಂದು ಅತ್ಯಂತ ಸಂತೋಷದಾಯಕ ವ್ಯಕ್ತಿಯಾಗಿದ್ದೇನೆ, ಏಕೆಂದರೆ ನಿಮ್ಮನ್ನು ಶರಣಾಗತಿ ಮತ್ತು ಮುಖ್ಯವಾಹಿನಿಗೆ ಸೇರುವಂತೆ ಮನವರಿಕೆ ಮಾಡುವ ನಮ್ಮ ಶ್ರಮದಾಯಕ ಪ್ರಯತ್ನಗಳು ಫಲ ನೀಡಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಾಜಿ ನಕ್ಸಲರ ಗುಂಪಿಗೆ ತಿಳಿಸಿದರು.

ಇದನ್ನೂ ಓದಿ: ಕುರುಕ್ಷೇತ್ರ ಯುದ್ಧ 18 ದಿನಗಳಲ್ಲಿ ಮುಗಿಯಲು ಕಾರಣ ಏನು?; ಅದರ ಹಿಂದಿನ ಮಹತ್ವದ ಮಾಹಿತಿ ಇಲ್ಲಿದೆ.. | Information

ಛತ್ತೀಸ್‌ಗಢ, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಅಸ್ಸಾಂನ ಆರು ರಾಜ್ಯಗಳಿಗೆ ಸೇರಿದ ಸುಮಾರು 30 ಶರಣಾದ ನಕ್ಸಲರು ಮತ್ತು ಬಂಡುಕೋರರು ಇಲ್ಲಿ ಪಾಲ್ಗೊಂಡಿದ್ದ ಕಾರ್ಯಕ್ರಮವು ಚಿಕ್ಕದಾಗಿರಬಹುದು ಆದರೆ ಬಹಳ ಮಹತ್ವದ್ದಾಗಿದೆ. ಹಿಂಸೆ ಮತ್ತು ಶರಣಾಗತಿಯ ನಿರರ್ಥಕತೆಯನ್ನು ಅರಿತು ದೇಶದ ಯುವಕರು ನಮ್ಮ ಮನವಿಗೆ ಸ್ಪಂದಿಸುತ್ತಿದ್ದಾರೆ ಎಂಬುದಕ್ಕೆ ನನಗೆ ಅಪಾರ ತೃಪ್ತಿ ಸಿಗುತ್ತಿದೆ ಎಂದರು,(ಏಜೆನ್ಸೀಸ್​).

ಪ್ರಣಬ್​ ಮುಖರ್ಜಿ ಪಿಎಂ ಆಗಿದ್ರೆ ಕಾಂಗ್ರೆಸ್ ಇಷ್ಟು ಹೀನಾಯವಾಗಿ ಸೋಲುತ್ತಿರಲಿಲ್ಲ; ಅಯ್ಯರ್​ | Congress

Share This Article

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti

ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…

ಬೊಜ್ಜು ಕರಗಿಸಿ ಫಿಟ್​ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…

ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips

ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…