ಅಭಿಮಾನಕ್ಕೆ ಸಿದ್ದಿಕಿ ಕೈ ಮೂಳೆ ಮುರಿತ!

ಬಾಲಿವುಡ್​ನಲ್ಲಿ ವಿಭಿನ್ನ ಪಾತ್ರಗಳ ಮೂಲಕವೇ ಎಲ್ಲರ ಮನಸೂರೆಗೊಂಡ ನಟ ನವಾಜುದ್ದೀನ್ ಸಿದ್ದಿಕಿ. ಇದೀಗ ಈ ನಟನ ಕೈ ಮೂಳೆ ಮುರಿದಿದೆ.

ಅರೇ ಏನಾದರೂ ಅಪಘಾತವಾಯಿತೇ? ಹಾಗೇನೂ ಇಲ್ಲ. ಇದು ಅಭಿಮಾನದಿಂದಾಗಿ ಸೆಲ್ಪಿ ಅಪಘಾತ! ಹೌದು, ಉತ್ತರ ಪ್ರದೇಶದ ಕಾನ್ಪುರದಲ್ಲಿ ಸಿನಿಮಾವೊಂದರ ಶೂಟಿಂಗ್​ಗೆ ತೆರಳಿದ್ದಾಗ, ನೂರಾರು ಅಭಿಮಾನಿಗಳು ಅವರನ್ನು ಮುತ್ತಿಗೆ ಹಾಕಿದ್ದರು. ಸಿದ್ದಿಕಿ ಜತೆ ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಅನೇಕರು ಮುಗಿಬಿದ್ದಿದ್ದರು. ಅದರಲ್ಲಿ ಅಭಿಮಾನಿಯೊಬ್ಬ ಸಿದ್ಧಿಕಿ ಕೈ ಎಳೆದು ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಆ ಸ್ಥಳದಿಂದ ಬಂದ ಕೆಲ ಹೊತ್ತಿನ ಬಳಿಕ ನವಾಜುದ್ದೀನ್ ಕೈಯಲ್ಲಿ ನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ತೋರಿಸಿದಾಗ ಕೈ ಮೂಳೆ ಬಿರುಕು ಬಿಟ್ಟಿರುವುದು ಗೊತ್ತಾಯ್ತು.

ಅಂದಹಾಗೆ ಈ ಘಟನೆ ನಡೆದಿದ್ದು ನಿನ್ನೆ ಮೊನ್ನೆಯಲ್ಲ. ಫೆಬ್ರವರಿಯಲ್ಲಿ ನಡೆದಿದ್ದು. ಅಂದಿನ ಆ ಘಟನೆಯನ್ನು ಇತ್ತೀಚೆಗೆ ಸಂದರ್ಶನವೊಂದರಲ್ಲಿ ನವಾಜುದ್ದೀನ್ ಹೇಳಿಕೊಂಡಿದ್ದಾರೆ. ‘ಅಭಿಮಾನಿಗಳಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವಾಗ ನಾವು ಬೇಡ ಎನ್ನಲು ಬರುವುದಿಲ್ಲ. ಆ ಗದ್ದಲದಲ್ಲಿ ಚಿಕ್ಕದಾಗಿ ನನ್ನ ಕೈ ಮೂಳೆ ಮುರಿಯಿತು. ಪರವಾಗಿಲ್ಲ. ಅದಕ್ಕೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಅದು ಅಭಿಮಾನಿಗಳ ಪ್ರೀತಿ’ ಎಂದು ಹೇಳಿಕೊಂಡಿದ್ದಾರೆ. -ಏಜೆನ್ಸೀಸ್