21, 000 ಕೋಟಿ ರೂ.ವೆಚ್ಚದಲ್ಲಿ 111 ನೇವಿ ಹೆಲಿಕಾಪ್ಟರ್​ ಖರೀದಿಗೆ ರಕ್ಷಣಾ ಸಚಿವಾಲಯ ಅನುಮೋದನೆ

ನವದೆಹಲಿ: ನೌಕಾಪಡೆಗೆ ಬಹುಪಯೋಗಿ 111 ಹೆಲಿಕಾಪ್ಟರ್​ಗಳನ್ನು 21,000 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿಸುವ ಮಹತ್ವದ ನಿರ್ಧಾರಕ್ಕೆ ಭಾರತ ರಕ್ಷಣಾ ಸಚಿವಾಲಯ ಅಸ್ತು ಎಂದಿದೆ.

ರಕ್ಷಣಾ ಖರೀದಿ ಮಂಡಳಿ (DAC) ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದ್ದು, ಒಟ್ಟಾರೆ 46,000 ಕೋಟಿ ರೂಪಾಯಿಯ ಬೇಡಿಕೆಗಳಿಗೆ ಒಪ್ಪಿಗೆ ಕೊಟ್ಟಿದ್ದು ಅದರಲ್ಲಿ 21,000 ಕೋಟಿ ರೂ.ವೆಚ್ಚದಲ್ಲಿ ನೇವಿ ಹೆಲಿಕಾಪ್ಟರ್​ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಹೆಲಿಕಾಪ್ಟರ್​ಗಳು ಶತ್ರುಗಳ ಮೇಲೆ ದಾಳಿ, ಕಣ್ಗಾವಲು ಅಪಾಯದಲ್ಲಿ ಸಿಲುಕಿದವರ ಹುಡುಕಾಟ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ಉಪಯೋಗವಾಗುತ್ತವೆ. ಅದನ್ನು ಹೊರತುಪಡಿಸಿ 3,364 ಕೋಟಿ ರೂ.ವೆಚ್ಚದಲ್ಲಿ 150 ದೇಶೀಯವಾಗಿ ಅ ಮತ್ತು 155 ಎಂಎಂ ಸಾಮರ್ಥ್ಯದ ಫಿರಂಗಿ ಗನ್​ ಇರುವ ವಾಹನಗಳನ್ನು ಸೇನೆಗೆ ನೀಡುವ ಬೇಡಿಕೆಯನ್ನೂ ಪುರಸ್ಕರಿಸಿದೆ. ಈ ಫಿರಂಗಿ ಗನ್​ ವಾಹನಗಳು ಡಿಆರ್​ಡಿಒಗಳಿಂದ ಅಭಿವೃದ್ಧಿ ಹೊಂದಿದವುಗಳಾಗಿವೆ.

24 ನೌಕಾ ಬಹುಪಯೋಗಿ ಹೆಲಿಕಾಪ್ಟರ್​ ಖರೀದಿಗೆ ಡಿಎಸಿ ಅನುಮೋದನೆ ನೀಡಿದ್ದು ಇವು ಜಲಾಂತರ್ಗಾಮಿ ಯುದ್ಧವನ್ನು ಎದುರಿಸುವ ಸಾಮರ್ಥ್ಯವನ್ನೂ ಹೊಂದಿವೆ. ಹಾಗೇ ಲಂಬವಾಗಿ ಚಿಮ್ಮುವ 14 ಸಣ್ಣ ಕ್ಷಿಪಣಿಗಳ ಸೇರ್ಪಡೆಗೂ ಸಮ್ಮತಿಸಿದ್ದು ಅದರಲ್ಲಿ 10 ದೇಶೀಯವಾಗಿ ನಿರ್ಮಿತವಾದವು ಎನ್ನಲಾಗಿದೆ.