ಹುಬ್ಬಳ್ಳಿ: ಇಲ್ಲಿಯ ನವನಗರದ ಶಾರದೀಯ ನವರಾತ್ರಿ ಮಹೋತ್ಸವ ಅಂಗವಾಗಿ ಗಂಗಾಧರನಗರ ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನವರಾತ್ರೋತ್ಸವದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಭಾನುವಾರ ಸಂಜೆ ದೇವಸ್ಥಾನದಲ್ಲಿ ಘಟಸ್ಥಾಪನೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ನಿತ್ಯ ಬೆಳಗ್ಗೆ 7ರಿಂದ ಅಭಿಷೇಕ, ಪಂಚಾಮೃತ ಮಹಾಪೂಜೆ, ಆರತಿ, ಪ್ರಸಾದ, ರಾತ್ರಿ ಮಹಾಮಂಗಳಾರತಿ, ಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಅ. 16ರಂದು ಸಂಜೆ ಭಾವಸಾರ ಕ್ಷತ್ರಿಯ ಮಹಿಳಾ ಮಂಡಳ, ಮಾಲತಿ ವಾದೋನೆ ಹಾಗೂ ಸಂಗಡಿಗರಿಂದ ಭಕ್ತೀಗಿತೆ ಆಯೋಜಿಸಲಾಗಿದೆ. ಇದೇ ರೀತಿ ನಿತ್ಯ ಸಂಜೆ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಸಂಗೀತ ಕಾರ್ಯಕ್ರಮ ನಡೆಯಲಿವೆ.
ಅ. 22ರಂದು ಬೆಳಗ್ಗೆ 11ಕ್ಕೆ ಕುಮಾರಿಕಾ ಪೂಜಾ, ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ.
ಅ. 24ರಂದು ಬೆಳಗ್ಗೆ ಪೂಜಾರಾಧನೆ, ಸಂಜೆ ಪಲ್ಲಕ್ಕಿಯೊಂದಿಗೆ ಉತ್ಸವ ಮೂತಿರ್ ಸಮೇತ ಬನ್ನಿ ಮಂಟಪದಲ್ಲಿ ಶಮಿ ಪೂಜನ ಹಾಗೂ ದೇವಸ್ಥಾನದಲ್ಲಿ ದಸರಾ ಉತ್ಸವ, ಮಧ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಸಂಜೆ 7ಕ್ಕೆ ನವನಗರ ತುಳಜಾಭವಾನಿ ಮಹಿಳಾ ಮಂಡಳದಿಂದ ದಾಂಡಿಯಾ ಹಾಗೂ ಸಾಂಸತಿಕ ಕಾರ್ಯಕ್ರಮ, ಮಕ್ಕಳಿಂದ ವೇಷಭೂಷಣ ಸ್ಪರ್ಧೆ ನಡೆಯಲಿದೆ ಎಂದು ಭಾವಸಾರ ಕ್ಷತ್ರೀಯ ನವರಾತ್ರಿ ಮಹೋತ್ಸವ ಸಮಿತಿ ಪ್ರಕಟಣೆ ತಿಳಿಸಿದೆ.