ನವಬೃಂದಾವನ ಧ್ವಂಸಗೊಳಿಸಿದ ಪಾಪಿಗಳ ವಂಶ ಸರ್ವನಾಶವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್​ ಮಾಡಿದ ನಟ ಜಗ್ಗೇಶ್​

ಬೆಂಗಳೂರು: ಕೊಪ್ಪಳದ ಆನೆಗೊಂದಿ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ನವಬೃಂದಾವನವನ್ನು ಧ್ವಂಸಗೊಳಿಸಿದ ಕಿಡಿಗೇಡಿಗಳ ದುಷ್ಕೃತ್ಯವನ್ನು ನಟ ನವರಸನಾಯಕ ಜಗ್ಗೇಶ್​ ತೀವ್ರವಾಗಿ ಖಂಡಿಸಿದ್ದಾರೆ.

ಟ್ವೀಟ್​ ಮಾಡಿರುವ ಅವರು, ಅಯ್ಯೋ ಇದೆಂಥಾ ಹೀನ ಕೃತ್ಯ ಎಸಗಿದ್ದಾರೆ. ಇದನ್ನು ಮಾಡಿದವರ ವಂಶ ಸರ್ವನಾಶ ಆಗುತ್ತದೆ. ನಮ್ಮ ಶ್ರೇಷ್ಠವಾದ ಸನಾತನ ಗುರುಪರಂಪರೆಗೆ ಕೈ ಹಾಕಿದ್ದಾರೆ. ಇಂಥ ಪಾಪಿಗಳಿಗೆ ಕ್ಷಮೆಯೇ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.

ಅಲ್ಲದೆ, ಧ್ವಂಸ ಸ್ಥಳದ ಪುನರ್​ನಿರ್ಮಾಣಕ್ಕೆ ಹ್ಯಾಶ್​ಟ್ಯಾಗ್​ ಮಾಡಿ ಒತ್ತಾಯ ಮಾಡಿ. ಈ ನಿಟ್ಟಿನಲ್ಲಿ ಅಭಿಯಾನ ಶುರುವಾಗಲಿ ಎಂದು ಜಗ್ಗೇಶ್​ ಕರೆ ನೀಡಿದ್ದಾರೆ.

ತುಂಗಾನದಿ ತಟದಲ್ಲಿರುವ ವ್ಯಾಸರಾಯರ ಬೃಂದಾವನ ಸೇರಿ ಒಟ್ಟು ಒಂಭತ್ತು ಬೃಂದಾವನದ ಸ್ಥಳವನ್ನು ಕಿಡಿಗೇಡಿಗಳು ನಿಧಿಯ ಆಸೆಗಾಗಿ ಕಂಬಗಳನ್ನು ಕಿತ್ತು, ಗುಂಡಿ ತೋಡಿ ವಿರೂಪಗೊಳಿಸಿದ್ದಾರೆ. ಅಲ್ಲಿನ ಧ್ವಂಸವಾದ ಸ್ಥಳದ ಫೋಟೋಗಳು ಎಲ್ಲೆಡೆ ವೈರಲ್​ ಆಗಿವೆ. ವಿಜಯವಾಣಿ ಪ್ರಕಟಿಸಿದ ಸುದ್ದಿಯನ್ನು ರೀಟ್ವೀಟ್​ ಮಾಡಿರುವ ಜಗ್ಗೇಶ್​ ಕೃತ್ಯದ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

One Reply to “ನವಬೃಂದಾವನ ಧ್ವಂಸಗೊಳಿಸಿದ ಪಾಪಿಗಳ ವಂಶ ಸರ್ವನಾಶವಾಗಲಿ ಎಂದು ಆಕ್ರೋಶ ವ್ಯಕ್ತಪಡಿಸಿ ಟ್ವೀಟ್​ ಮಾಡಿದ ನಟ ಜಗ್ಗೇಶ್​”

Leave a Reply

Your email address will not be published. Required fields are marked *