17.8 C
Bengaluru
Wednesday, January 22, 2020

ಸಂಕಷ್ಟದಲ್ಲಿ ಕಾಫಿ ಉದ್ದಿಮೆ

Latest News

ಊರೆಲ್ಲ ಕೊಳ್ಳೆ ಹೊಡೆದ ಮೇಲೆ…

ಲಕ್ಷ್ಮೇಶ್ವರ: ‘ಊರೆಲ್ಲ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಮುಚ್ಚಿದರು’ ಎಂಬಂತೆ ರೈತರೆಲ್ಲ ಮುಕ್ತ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಶೇಂಗಾ ಮಾರಾಟ ಮಾಡಿದ...

ಮುರುಘಾಮಠದ ಕಾರ್ಯ ನಾಡಿಗೆ ಮಾದರಿ

ಧಾರವಾಡ: ಜ್ಞಾನ, ದಾಸೋಹ ಸೇವೆಯಲ್ಲಿ ಮುರುಘಾಮಠದ ಮೃತ್ಯುಂಜಯ ಅಪ್ಪಗಳ ಹಾಗೂ ಮಹಾಂತಪ್ಪಗಳ ಕೊಡುಗೆ ಸ್ಮರಣೀಯ. ಅವರ ಆಶಯದಂತೆ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ಶ್ರೀಮಠವನ್ನು...

ಶರಣರಿಂದ ಸಾಮಾಜಿಕ ನ್ಯಾಯ

ಬ್ಯಾಡಗಿ: 12ನೇ ಶತಮಾನದಿಂದಲೂ ಶಿವಶರಣರು ಸಾಮಾಜಿಕ ಮೌಢ್ಯತೆ ಹಾಗೂ ಧೋರಣೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ವರಿಗೂ ಸಾಮಾಜಿಕ ನ್ಯಾಯ ಸಿಕ್ಕಿದೆ ಎಂದು...

ಗಾಳಿಪಟ ಉತ್ಸವಕ್ಕೆ ತೆರೆ

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪೋಷಿತ ಕ್ಷಮತಾ ಸೇವಾ ಸಂಸ್ಥೆ ಆಶ್ರಯದಲ್ಲಿ ನಗರದ ಕುಸುಗಲ್ಲ ರಸ್ತೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ...

ಎಲ್ಲರನ್ನೂ ಪ್ರೀತಿ, ಗೌರವದಿಂದ ಕಾಣಿ

ರಟ್ಟಿಹಳ್ಳಿ: ಸಮಾಜದಲ್ಲಿ ಎಲ್ಲರನ್ನೂ ಪ್ರೀತಿ ಮತ್ತು ಗೌರವದಿಂದ ಕಂಡರೆ ಎಲ್ಲರ ಮನಸ್ಸು ಗೆಲ್ಲಬಹುದು. ಯಾವುದೇ ವ್ಯಕ್ತಿ ಅಥವಾ ಸಮಾಜದ ವಿರುದ್ಧ ದ್ವೇಷ ಸಾಧಿಸಬಾರದು....

ಚಿಕ್ಕಮಗಳೂರು: ವಿದೇಶಗಳಿಗೆ ಉತ್ಪಾದನೆಯ ಶೇ.70 ರಷ್ಟು ರಫ್ತು ಮಾಡುವ ಮೂಲಕ ದೇಶಕ್ಕೆ ಐದು ಸಾವಿರ ಕೋಟಿ ರೂಪಾಯಿ ವಿದೇಶಿ ವಿನಿಮಯ ತಂದು ಕೊಡುವ ಕಾಫಿ ಉದ್ದಿಮೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ.

ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಬೆಳೆಗಾರರಲ್ಲಿ ಶೇ.98.8 ರಷ್ಟು ಮಂದಿ ಸಣ್ಣ ಬೆಳೆಗಾರರಾಗಿದ್ದರೆ, 1.92 ರಷ್ಟು ಮಂದಿ ದೊಡ್ಡ ಬೆಳೆಗಾರರು ಎನ್ನುವುದು ಗಮನಾರ್ಹ.

ಅನಾವೃಷ್ಟಿಯಿಂದ 160ಕ್ಕೂ ಅಧಿಕ ದಿನ ಕಾಡಿದ ಬರಗಾಲ, ಅತಿವೃಷ್ಟಿಯಿಂದ 152 ವರ್ಷದ ಬಳಿಕ ದಾಖಲೆಯ ಮಳೆ, ಫಸಲು ನಾಶ, ಭೂಮಿ ನಷ್ಟ, ಸಾಲದ ಬಾಧೆ, ಆತ್ಮಹತ್ಯೆ, ಹೆಚ್ಚಿದ ಉತ್ಪಾದನಾ ವೆಚ್ಚ, ದರ ಕುಸಿತ, ಕಾರ್ವಿುಕರ ಕೊರತೆ, ಇವೆಲ್ಲದರ ಜತೆಗೆ ಅರೇಬಿಕಾಗೆ ವೈಟ್ ಸ್ಟೆಮ್ ಬೋರರ್ (ಬಿಳಿಕಾಂಡ ಕೊರಕ) ಹಾಗೂ ರೋಬಸ್ಟಾಗೆ ಬೆರ್ರಿ ಬೋರರ್ (ಕಾಯಿ ಕೊರಕ) ಬಾಧೆ. ಹೀಗೆ ಹಲವು ಅಪರಿಹಾರ್ಯ ಸಮಸ್ಯೆಗಳು ಬೆಳೆಗಾರರ ಬದುಕಿಗೆ ಬರೆ ಎಳೆದಿದ್ದು, ಬೆಳೆಗಾರರು ಭವಿಷ್ಯದಲ್ಲಿ ಕತ್ತಲು ಕವಿಯುವ ಆತಂಕದಲ್ಲಿದ್ದಾರೆ.

ಹೇಳಿಕೇಳಿ ಕಾಫಿ ವಾಣಿಜ್ಯ ಬೆಳೆ. ಬೆಳೆಗಾರರೆಲ್ಲ ಶ್ರೀಮಂತರು ಎನ್ನುವ ಕಾರಣ ಮುಂದಿಟ್ಟು ಪರಿಹಾರ ಒದಗಿಸುವ ವಿಚಾರದಲ್ಲಿ ಆಳುವ ಸರ್ಕಾರಗಳು ಮೀನಮೇಷ ಎಣಿಸುತ್ತ ಕೈಚೆಲ್ಲುತ್ತಿವೆ. ಬೆಳೆಗಾರರು ಭವಿಷ್ಯದ ಮೇಲೆ ಭರವಸೆ ಕಳೆದುಕೊಳ್ಳಲು ಕಾರಣವೇ ಇದು. ಒಂದು ರೀತಿಯಲ್ಲಿ ಮೇಕ್ ಇನ್ ಇಂಡಿಯಾ ಆಗಿರುವ ಕಾಫಿ ಉತ್ಪಾದನಾ ಕ್ಷೇತ್ರ ಹಳ್ಳ ಹಿಡಿಯುವ ಹಂತ ತಲುಪಿದೆ. ಬೆಳೆಗಾರರ ಅಳಿವು-ಉಳಿವಿನ ಪ್ರಶ್ನೆ ಎದ್ದಿದೆ.

ಬರ-ತಾಪಮಾನದ ಹೊಡೆತ: ಕಳೆದೆರಡು ವರ್ಷಗಳಲ್ಲಿ ಬರ, ತಾಪಮಾನ ಹೆಚ್ಚಳದ ಪರಿಣಾಮವಾಗಿ ತುಂತುರು ನೀರಾವರಿ ಮೂಲಕ ಅರಳಿದ ಕಾಫಿ ಹೂವುಗಳು ಕಾಯಿ ಕಟ್ಟುವ ಸಂದರ್ಭ ಕೂಡಿ ಬರದೆ ಅಲ್ಪಸ್ವಲ್ಪ ಫಸಲು ಮಾತ್ರ ಬೆಳೆಗಾರರ ಕೈಸೇರಿತು. ಪರಿಸ್ಥಿತಿ ಹೀಗಿದ್ದರೂ ಮಾಲೀಕರನ್ನೇ ನಂಬಿಕೊಂಡಿರುವ ಕಾರ್ವಿುಕರಿಗೆ ಕೆಲಸ ಕೊಡಬೇಕು. ತೋಟದ ನಿರ್ವಹಣೆ ಕಾರ್ಯವನ್ನೂ ಕೈಬಿಡುವಂತಿಲ್ಲ ಎನ್ನುವ ಸವಾಲು ಬೆಳೆಗಾರರ ಮುಂದಿದೆ. ಇದೀಗ ಅತಿವೃಷ್ಟಿಯಿಂದ ಕಾಫಿ ಕೃಷಿ ಕ್ಷೇತ್ರ ತತ್ತರಿಸಿದೆ. ಜತೆಗೆ ಕಾಫಿಯ ಒಳಸುರಿವು (ಉತ್ಪಾದನಾ ವೆಚ್ಚ) ವರ್ಷದಿಂದ ವರ್ಷಕ್ಕೆ ಏರುತ್ತ ಹೋಗುತ್ತಿದ್ದರೆ ದರ ಪಾತಾಳಕ್ಕೆ ಕುಸಿಯುತ್ತಲೇ ಹೋಗುತ್ತಿದೆ.

ದಾಖಲೆ ಪ್ರಮಾಣದ ಮಳೆ: 152 ವರ್ಷಗಳಲ್ಲಿ ಆಗದೆ ಇರುವ ಮಳೆ ಈ ಬಾರಿ ಆಗಿದೆ. ಕೃಷಿ ಹಾಗೂ ತೋಟಗಾರಿಕೆ ಕ್ಷೇತ್ರದ ಮೇಲೆ ಇನ್ನಿಲ್ಲದಷ್ಟು ಹೊಡೆತ ಬಿದ್ದಿದ್ದರೂ ಸರ್ಕಾರಗಳು ರಾಷ್ಟ್ರೀಯ ವಿಪತ್ತು ಎಂದು ಘೊಷಿಸಲು ಸಿದ್ಧವಿಲ್ಲ. ಹಾಗೊಂದು ವೇಳೆ ಘೊಷಣೆ ಮಾಡಿದರೆ ಸರ್ಕಾರ ಸಂಪೂರ್ಣ ದೃಷ್ಟಿಯನ್ನು ಕೇಂದ್ರೀಕರಿಸಿ ಸೂಕ್ತ ಪರಿಹಾರ ಕಾರ್ಯಗಳ ಜತೆಗೆ ಎಲ್ಲ ರೀತಿಯ ನೆರವಿನ ಮಹಾಪೂರವನ್ನೇ ಹರಿಸಬೇಕಾಗುತ್ತದೆ.

26 ವರ್ಷಗಳ ಹಿಂದೆ ಕಾಫಿ ಬೆಲೆ ಕುಸಿದಿದ್ದು, ಇತ್ತೀಚಿನ ಎರಡು ವರ್ಷಗಳಿಂದಂತೂ ಪೂರ್ಣ ಪ್ರಮಾಣದಲ್ಲಿ ನೆಲಕಚ್ಚಿ ನಿಂತ ನೀರಾಗಿದೆ. ಲಭ್ಯ ಮಾಹಿತಿ ಪ್ರಕಾರ ಕಳೆದ ಐದು ವರ್ಷಗಳಲ್ಲಿ ಸರಾಸರಿ ದರ ಅರೇಬಿಕಾ ಶೇ.38ರಷ್ಟು ಹಾಗೂ ರೋಬಸ್ಟಾ ಶೇ.8ರಷ್ಟು ಕುಸಿದಿದೆ.

ಕೆಲವು ಬೆಳೆಗಾರರ ಪ್ರಕಾರ ಮಳೆಯ ಸತತ ಹೊಡೆತಕ್ಕೆ ಕಾಫಿ ತೋಟಗಳಲ್ಲಿ ಶೇ.50ರಿಂದ 60ರಷ್ಟು ಫಸಲು ಉದುರಿದೆ. ಬೆಳೆಗಾರರಿಗೆ ಆರ್ಥಿಕ ಆಸರೆಯಾದ ಕಾಳುಮೆಣಸು ಸಹ ಅತಿವೃಷ್ಟಿಗೆ ತುತ್ತಾಗಿದೆ. ಪ್ರಕೃತಿಯ ವೈಪರೀತ್ಯದ ನಡುವೆ ಕಾಫಿ ಬೆಳೆಯುವುದೆಂದರೆ ಬೆಳೆಗಾರರನ್ನು ಬಲವಂತದ ಜೂಜಿಗೆ ತಳ್ಳಿದಂತಾಗಿದೆ. ಸಾಲ ಮಾಡಿ ಹಣ ಹೂಡಿ ತೋಟದ ಅಭಿವೃದ್ಧಿಗೆ ಪಟ್ಟ ಪ್ರಯತ್ನವೆಲ್ಲ ನಿರರ್ಥಕವಾಗುತ್ತಿದೆ.

ವಿಡಿಯೋ ನ್ಯೂಸ್

VIDEO| ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ...

ಲಖನೌ: ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಗಾದೆ ಮಾತಿಗೆ ಪೂರಕವಾದ ಘಟನೆ ಇದಾಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ನಡೆದ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನೋಯ್ಡಾದಲ್ಲಿ ಅಂಗಡಿ ಹೊರಭಾಗದಲ್ಲಿ ಇಟ್ಟಿದ್ದ ಬಾಕ್ಸ್​ನಿಂದ...

VIDEO| ನಟಿಯಾಗಿರೋ ಆಲಿಯಾ ಇದೀಗ ಶೆಫ್​: ಬಾಲಿವುಡ್​ ಬ್ಯೂಟಿಯ ಅಡುಗೆ...

ಮುಂಬೈ: ಬಾಲಿವುಡ್​ ಬ್ಯೂಟಿ ಆಲಿಯಾ ಭಟ್ ನಟನೆ ಜತೆಗೆ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ನಟಿಯಾಗಿರುವ ಆಲಿಯಾ ಇದೀಗ ಶೆಫ್ ಆಗಿದ್ದು, ಹೊಸ ಬಗೆಯ ಅಡುಗೆ ಪರಿಚಯಿಸಲು ಮುಂದಾಗಿದ್ದಾರೆ. ಯೂಟ್ಯೂಬ್​ನಲ್ಲಿ ಆಲಿಯಾ ಭಟ್...

VIDEO| ಅತಿವೇಗದ ಎಸೆತ, ಮಥೀಶಾ ಪಥಿರಣ ವಿಶ್ವದಾಖಲೆ!

ಬ್ಲೂಮ್​ಫಾಂಟೆನ್: ಶ್ರೀಲಂಕಾ ವಿರುದ್ಧ ಭಾನುವಾರ ನಡೆದ 19 ವಯೋಮಿತಿ ಏಕದಿನ ವಿಶ್ವಕಪ್ ಟೂರ್ನಿಯ ಮುಖಾಮುಖಿಯಲ್ಲಿ ಭಾರತ ತಂಡ 90 ರನ್​ಗಳಿಂದ ಗೆಲುವು ಸಾಧಿಸಿತು. ಆದರೆ, ಲಂಕಾ ಕಡೆಯಿಂದಲೂ ಸ್ಮರಣೀಯ ದಾಖಲೆಯೊಂದು...

VIDEO| ತಮಿಳಿನ ಕೌನ್​ ಬನೇಗಾ ಕರೋಡ್​ಪತಿ ಶೋನಲ್ಲಿ 1 ಕೋಟಿ...

ಚೆನ್ನೈ: ತಮಿಳು ಆವೃತ್ತಿಯ ಕೌನ್​ ಬನೇಗಾ ಕರೋಡ್​ಪತಿ(ಕೊಡೀಶ್ವರಿ) ರಿಯಾಲಿಟಿ ಶೋನಲ್ಲಿ ವಿಕಲಾಂಗ ಮಹಿಳೆಯೊಬ್ಬಳು ಬರೋಬ್ಬರಿ 1 ಕೋಟಿ ರೂ. ಬಹುಮಾನ ಮೊತ್ತವನ್ನು ಗೆದ್ದು ಎಲ್ಲರ ಗಮನ ಸೆಳೆದಿದ್ದಾಳೆ.ಮದುರೈ ನಿವಾಸಿಯಾಗಿರುವ ಕೌಶಲ್ಯ...

VIDEO| ಮಂಗಳೂರು ವಿಮಾನ ನಿಲ್ದಾಣ ಬಾಂಬ್​ ಪತ್ತೆ ಪ್ರಕರಣ: ಬಾಂಬ್​...

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಜೀವ ಬಾಂಬ್​ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಂಜಾರು ಮೈದಾನದಲ್ಲಿ ಬಾಂಬ್​ ನಿಷ್ಕ್ರಿಯೆ ದಳದಿಂದ ನಡೆದ ಬಾಂಬ್​ ಸ್ಫೋಟ ಪ್ರಕ್ರಿಯೆ ಯಶಸ್ವಿಯಾಗಿದೆ. ಇಂದು ಬೆಳಗ್ಗೆ ಮಂಗಳೂರು ವಿಮಾನ...

VIDEO| ಮಂಡ್ಯದಲ್ಲಿ ಮತ್ತೆ ಜೋಡೆತ್ತು ಸದ್ದು: ಚುನಾವಣೆ ಮುಗಿದ ನಂತರ...

ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ರಾಜಕೀಯವಾಗಿ ಸದ್ದು ಮಾಡಿದ್ದ ಜೋಡೆತ್ತು ಎಂದು ಕರೆಸಿಕೊಂಡಿದ್ದ ನಟರಾದ ದರ್ಶನ್​ ಮತ್ತು ಯಶ್​ ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಮಾನವೀಯತೆ ಮೆರೆದ ಅವರು, ಚೈತ್ರಾ ಗೋಶಾಲೆಗೆ ಬೆಳಕಾಗಿದ್ದಾರೆ. ಗೋಮಾತೆ ಸೇವೆಗೆ ರಾಕಿಂಗ್...