ವಾಣಿಜ್ಯ ಬ್ಯಾಂಕ್ ಸಾಲ ಮನ್ನಾಕ್ಕೆ ಷರತ್ತು

ವಿಜಯವಾಣಿ ಸುದ್ದಿಜಾಲ ಬೀದರ್
ಕರ್ನಾಟಕ ಸರ್ಕಾರ ವಾಣಿಜ್ಯ ಬ್ಯಾಂಕುಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾಕ್ಕೆ ತಂತ್ರಾಂಶ ರೂಪಿಸಿದ್ದು, ಬೀದರ್ ಜಿಲ್ಲೆಯಲ್ಲಿ ಜಾರಿಗೊಳಿಸಲು ಕೆಲ ನಿರ್ದೇ ಶನ ನೀಡಿದೆ. ಜಿಲ್ಲೆಯ ಎಲ್ಲ ರೈತ ಬಾಂಧವರು ಈ ಕೆಳಗೆ ನೀಡಿರುವ ಸೂಚನೆ ಪಾಲಿಸಿ ಬೆಳೆ ಸಾಲ ಮನ್ನಾ ಯೋಜನೆ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಚ್.ಆರ್.ಮಹಾದೇವ ತಿಳಿಸಿದ್ದಾರೆ.
ಬೆಳೆ ಸಾಲ ಮನ್ನಾ ಯೋಜನೆಯಡಿ 2017ರ ಡಿ.31ರೊಳಗೆ ತಾವು ಸಾಲ ಪಡೆದ ವಾಣಿಜ್ಯ ಬ್ಯಾಂಕ್ಗಳಿಗೆ ಬಂದು ಡಿ.13ರಿಂದ ರೈತರು ಹೆಸರು ನೋಂದಾಯಿಸಬಹುದು. ಇದಕ್ಕೆ ಡಿ.13ರಿಂದ ಜನವರಿ 10ರವರೆಗೆ ಅವಕಾಶವಿದೆ. ಬೆಳೆ ಸಾಲ ಪಡೆದ ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಕಾರ್ಡ್​, ಪಡಿತರ ಚೀಟಿ ನಕಲು ಪ್ರತಿ ಮತ್ತು ತಾವು ಸಾಲ ಪಡೆದ ಸರ್ವೇ ನಂಬರ್​ನ  ಮಾಹಿತಿ ತಪ್ಪದೆ ಸಲ್ಲಿಸಬೇಕು (ಪಹಣಿ ಪತ್ರಿಕೆ ಸಲ್ಲಿಸುವ ಅಗತ್ಯವಿಲ್ಲ). ಒಂದು ಬ್ಯಾಂಕ್ ಶಾಖೆಯಲ್ಲಿ ಪ್ರತಿದಿನ ಕನಿಷ್ಠ 40 ರೈತರ ಹೆಸರು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದ್ದು, ಬಳಿಕ ರೈತರಿಗೆ ಕ್ರಮಬದ್ಧವಾಗಿ ಸಂಖ್ಯೆ ಮತ್ತು ದಿನಾಂಕ ನಮೂದಿಸಿ ಟೋಕನ್ ನೀಡಿದ ದಿನದಂದು ಬ್ಯಾಂಕ್ ಶಾಖೆಗೆ ತೆರಳಿ ಸ್ವಯಂ ದೃಢೀಕರಣ ಪತ್ರದೊಂದಿಗೆ ಆಧಾರ್ ಕಾರ್ಡ್​, ಪಡಿತರ ಚೀಟಿ ನಕಲು ಮತ್ತು ಭೂಮಿಯ ಸರ್ವೇ ನಂಬರ್ ವಿವರ ಒದಗಿಸಬೇಕು ಎಂದು ತಿಳಿಸಿದ್ದಾರೆ.
ಬೆಳೆಸಾಲ ಮನ್ನಾ ಯೋಜನೆ ಲಾಭ ಪಡೆಯಲು ಈ ಕೆಳಕಂಡ ಅರ್ಹತೆಗಳನ್ನು ಸರ್ಕಾರ ನಿಗದಿಪಡಿಸಿದೆ. 1-4-2009ರಂದು ಮತ್ತು ನಂತರದ ದಿನಗಳಲ್ಲಿ ಮಂಜೂರಾದ ಬೆಳೆ ಸಾಲಗಳು ಮತ್ತು 31-12-2017ರವರೆಗೆ ಬಾಕಿ ಇರುವ ಬೆಳೆಸಾಲ(ಅಂದರೆ ಸುಸ್ತಿ ಸಾಲ, ಪುನರಾವಸ್ತಿ ಸಾಲ, ಎನ್ಪಿಎ (ನಾನ್ ಪರ್ಫಾ ಮಿಂಗ್ ಅಸ್ಸೆಟ್) ಸಾಲಗಳು ಅರ್ಹವಾಗಿರುತ್ತವೆ.) ಕೇವಲ ವೈಯಕ್ತಿಕ ಬೆಳೆಸಾಲ ಪಡೆದ ರೈತರು ಮಾತ್ರ ಅರ್ಹರಿರುತ್ತಾರೆ. ಒಂದು ಕುಟುಂಬವು (ಅಂದರೆ ಗಂಡ+ಹೆಂಡತಿ+ಅವಲಂಬಿತ ಮಕ್ಕಳು) ಗರಿಷ್ಠ 2 ಲಕ್ಷದವರೆಗೆ ಬೆಳೆ ಸಾಲ ಮನ್ನಾ ಪಡೆಯಲು ಅರ್ಹರಿರುತ್ತಾರೆ. (ಇದಕ್ಕಾಗಿ 05-07-2018ಕ್ಕಿಂತ ಮುಂಚಿತವಾಗಿ ಪಡೆದ ರೇಷನ್ ಕಾರ್ಡ್​ ಪ್ರತಿ ಕಡ್ಡಾಯವಾಗಿ ಸಲ್ಲಿಸುವುದು).
ಯಾವ ರೈತ ವಾರ್ಷಿಕ ಆದಾಯ ತೆರಿಗೆ ಪಾವತಿದಾರರೋ ಮತ್ತು ರಾಜ್ಯ, ಕೇಂದ್ರ ಸರ್ಕಾರಿ, ಅರೆ ಸರ್ಕಾರಿ, ಸರ್ಕಾರದ ಅನುದಾನಕ್ಕೆ ಒಳಪಡುವ ಸಂಸ್ಥೆಗಳಲ್ಲಿ, ಸಾರ್ವಜನಿಕ ಸ್ವಾಮ್ಯದಲ್ಲಿ (ಪಿಎಸ್ಯು-ಪಬ್ಲಿಕ್ ಸೆಕ್ಟರ್ ಅಂಡರ್ಟೇಕಿಂಗ್) ಕಾರ್ಯನಿರ್ವಹಿಸುತ್ತಿರುವ ನೌಕರರು ಈ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ತಿಂಗಳು 15,000ಕ್ಕಿಂತ ಹೆಚ್ಚು ಪಿಂಚಣಿ ಪಡೆಯುವ ನಿವೃತ್ತ ನೌಕರರು ಈ ಯೋಜನೆಯಡಿ ಅರ್ಹರಿರುವುದಿಲ್ಲ. (ಈ ಮಿತಿ ಮಾಜಿ ಸೈನಿಕರಿಗೆ ಅನ್ವಯಿಸುವುದಿಲ್ಲ.) ಸಹಕಾರಿ ಬ್ಯಾಂಕ್ಗಳಲ್ಲಿನ ಬೆಳೆಸಾಲ ಮನ್ನಾ ಫಲಾನುಭವಿಗಳು ವಾಣಿಜ್ಯ ಬ್ಯಾಂಕ್ ಬೆಳೆಸಾಲ ಮನ್ನಾ ಯೋಜನೆಯಡಿ ಅರ್ಹರಿರುವುದಿಲ್ಲ. ಪ್ರತಿ ಬ್ಯಾಂಕ್ ಶಾಖೆಗೆ ಒಬ್ಬ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ. ರೈತರು ಯೋಜನೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.

ಸಂದೇಹಗಳಿದ್ದರೆ ಸಂಪಕರ್ಸಿ: ರೈತರಿಗೆ ಯಾವುದೇ ಗೊಂದಲ, ಸಂದೇಹಗಳಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಹಾಯವಾಣಿ(ಕಂಟ್ರೋಲ್ ರೂಂ) ಸಂಖ್ಯೆ: 08482-229688, 1077, ಲೀಡ್ ಬ್ಯಾಂಕ್ ಮ್ಯಾನೇಜರ್ ಬಿ.ಎಂ.ಕಮತಗಿ: 9448991947. ಸಂದೀಪ ಪಾಟೀಲ್: 9880782939, ಜಿಲ್ಲೆಯ ಕಂದಾಯ ನಿರೀಕ್ಷಕರು ಬೀದರ್: ಶಿವರಾಜ-9448890554, ಔರಾದ್: ಅನಂತ ಜೋಶಿ-9482739410. ಹುಮನಾಬಾದ್: ಮಹಾರುದ್ರ-7899839587. ಬಸವಕಲ್ಯಾಣ: ಉಮೇಶ-8762178043. ಭಾಲ್ಕಿ: ಸಂಜೀವ ಕೆರೆನೋರ-9591566521 ಅವರನ್ನು ಸಂಪರ್ಕಿಸಿ ಸಮಸ್ಯೆ ಪರಿಹರಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.