More

  ಇಂದಿನಿಂದ ರಾಷ್ಟ್ರೀಯ ವಿಚಾರಗೋಷ್ಠಿ

  ಮೇಲುಕೋಟೆ: ಭಗವದ್ರಾಮಾನುಜ ರಾಷ್ಟ್ರೀಯ ಸಂಶೋಧನಾ ಸಂಸತ್‌ನಲ್ಲಿ ನ.6 ಹಾಗೂ 7ರಂದು ಎರಡು ದಿನಗಳ ರಾಷ್ಟ್ರೀಯ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ.


  ನವದೆಹಲಿಯ ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಸಹಯೋಗದಲ್ಲಿ ‘ಉಪವೇದಾನಾಮ್ ಉಪಯೋಗಿತಾ’ ವಿಷಯ ಆಧರಿಸಿ ಎರಡು ದಿನಗಳ ಕಾಲ 7 ವಿಚಾರ ಗೋಷ್ಠಿಗಳನ್ನು ಆಯೋಜಿಸಲಾಗಿದೆ. ನ.6ರಂದು ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ವಿಚಾರ ಗೋಷ್ಠಿಯನ್ನು ನವದೆಹಲಿಯ ೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ ಅನುದಾನ ವಿಭಾಗದ ಕಾರ್ಯದರ್ಶಿ ಪ್ರೊ.ಮವೀಶ್ ಆರ್.ಜೋಷಿ ಉದ್ಘಾಟಿಸಲಿದ್ದಾರೆ. ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಆಚಾರ್ಯ ಶ್ರೀನಿವಾಸ ವರಖೇಡಿ, ಕರ್ನಾಟಕ ಸಂಸ್ಕೃತ ವಿವಿ ಕುಲಪತಿ ಡಾ.ಅಹಲ್ಯಾ, ಭಗವದ್ರಾಮಾನುಜ ಕೇಂದ್ರದ ಕುಲಸಚಿವ ವಿದ್ವಾನ್ ಎಸ್.ಕುಮಾರ್ ಭಾಗವಹಿಸಲಿದ್ದಾರೆ.


  ಧನುರ್ವೇದದಲ್ಲಿ ಯುದ್ದಬೇಧ ಮತ್ತು ಆಯುಧ ಭೇದಗಳು, ಅವುಗಳ ಉಪಯೋಗ, ಪ್ರಶ್ನಾಷ್ಟಕದಿಂದ ಆಯುರ್ವೇದದ ಉಪಯೋಗ, ನಾಟ್ಯತತ್ವಾನುಶೀಲನಮ್, ಶಿಲ್ಪವಿಜ್ಞಾನ ಹಸ್ತಪ್ರತಿ ಶಾಸ್ತ್ರ ಕುರಿತ ವಿಚಾರಗೋಷ್ಠಿಗಳು ಹಾಗೂ ಸಂಗೀತ ಕಾರ್ಯಕ್ರಮಗಳು ನಡೆಯಲಿದೆ. ಬೆಂಗಳೂರು ಪೂರ್ಣಪ್ರಜ್ಞಾ ವಿದ್ಯಾಪೀಠದ ಪ್ರಾಚಾರ್ಯ ಡಾ.ಎಚ್.ಸತ್ಯನಾರಾಯಣರಾವ್, ಸಂಸ್ಕೃತ ವಿವಿ ಕುಲಪತಿ ಡಾ.ಅಹಲ್ಯಾ, ಮೈಸೂರು ಸಾಮವೇದ ಮಹಾಮಂಡಲದ ಅಧ್ಯಕ್ಷ ಪ್ರೊ. ಮಂಜುನಾಥ ಶ್ರೌತಿ, ಬೆಂಗಳೂರಿನ ಡಾ.ಭಾಸ್ಕರ ಭಟ್ ಜೋಷಿ, ಪ್ರೊ.ಗೀರೀಶ್ ಚಂದ್ರ ಸೇರಿದಂತೆ ರಾಜ್ಯ ಮತ್ತು ಹೊರರಾಜ್ಯಗಳ ಖ್ಯಾತ ವಿದ್ವಾಂಸರು ವಿಚಾರ ಮಂಡಿಸಲಿದ್ದಾರೆ.


  7 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭವಿದ್ದು ಅಧ್ಯಕ್ಷತೆಯನ್ನು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ವಹಿಸಲಿದ್ದಾರೆ. ಇದೇ ವೇಳೆ ಸ್ವರ್ಣವಲ್ಲಿ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಶಂಕರ ಭಟ್ಟ, ಉಡುಪಿಯ ಹರಿದಾಸಭಟ್ಟ, ವಿದ್ವಾನ್ ಡಿ.ಎಂ ಮಲ್ಲಿಕಾರ್ಜುನಯ್ಯ ಅವರನ್ನು ಅಭಿನಂದಿಸಲಾಗುತ್ತದೆ ಎಂದು ಕುಲಸಚಿವ ವಿದ್ವಾನ್ ಕುಮಾರ್, ಕಾಲೇಜು ಅಧ್ಯಕ್ಷ ನಾಗೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts