ಹಳಿಯಾಳ: ಪಟ್ಟಣದ ಕೆಎಲ್ಎಸ್ ವಿಡಿಐಟಿ ಮಹಾವಿದ್ಯಾಲಯದಲ್ಲಿ ಮಾ. 11ಮತ್ತು 12ರಂದು ರಾಷ್ಟ್ರಮಟ್ಟದ ಹ್ಯಾಕಥಾನ್ ಸ್ಪರ್ಧೆ ಕೋಡ್ ಬ್ಯಾಟಲ್-2025 ಆಯೋಜಿಸಲಾಗಿದೆ ಎಂದು ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, 11ರಂದು ಉದ್ಘಾಟನೆಗೊಳ್ಳಲಿರುವ ಹ್ಯಾಕಥಾನ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ನೂತನ ತಂತ್ರಜ್ಞಾನಗಳ ಮೂಲಕ ಸಮಾಜದಲ್ಲಿನ ಪ್ರಮುಖ ಸವಾಲುಗಳಾದ ಮಹಿಳಾ ಸಬಲೀಕರಣ, ಸೈಬರ್ ಸೆಕೂರಿಟಿ, ವಿಪತ್ತು ನಿರ್ವಹಣೆ, ಆರೋಗ್ಯ ರಕ್ಷಣೆ ಹಾಗೂ ಸ್ಮಾರ್ಟ್ ಭವಿಷ್ಯಕ್ಕಾಗಿ ಎ ಐ ಕುರಿತಾಗಿ 24 ಗಂಟೆಗಳಲ್ಲಿ ಪರಿಹಾರ ನೀಡುವ ಪ್ರಯತ್ನವನ್ನು ಮಾಡಲಿದ್ದಾರೆ. ಕಾರ್ಯಕ್ರಮವನ್ನು ಅಡೊಬ್ ಇಂಡಿಯಾ ಸಂಸ್ಥೆಯ ನಿರ್ದೇಶಕ ಶ್ರೀಪಾದ ಕೃಷ್ಣಮೂರ್ತಿ ಉದ್ಘಾಟಿಸುವರು. ಸಮಾರೋಪ ಸಮಾರಂಭಕ್ಕೆ ಡಾ. ಎಸ್. ವಿದ್ಯಾಶಂಕರ ಆಗಮಿಸಲಿದ್ದಾರೆ. ರಾಜ್ಯ ಹಾಗೂ ಹೊರ ರಾಜ್ಯದ 16 ಮಹಾವಿದ್ಯಾಲಯಗಳ 296 ವಿದ್ಯಾರ್ಥಿಗಳ 60 ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸುತ್ತಿವೆ. ಐಇಇಇ ವಿದ್ಯಾರ್ಥಿ ಘಟಕ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಡಾ. ಅರುಣ್ ಕಾಖಂಡಕಿ ಮತ್ತು ಪ್ರೊ. ಸೂರಜ ಕಡ್ಲೆ ಸಂಯೋಜಿಸುತ್ತಿದ್ದಾರೆ ಎಂದು ತಿಳಿಸಲಾಗಿದೆ.
