ರಾಷ್ಟ್ರಮಟ್ಟದ ಅಂಗವಿಕಲರ ಕಬಡ್ಡಿ ಕರ್ನಾಟಕ ಚಾಂಪಿಯನ್

ವಿಜಯವಾಣಿ ಸುದ್ದಿಜಾಲ ಮಂಗಳೂರು
ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ಮುಕ್ತಾಯಗೊಂಡ ಎರಡು ದಿನಗಳ ಅಂಗವಿಕರ (ಪುರುಷರು) ಪ್ರಥಮ ರಾಷ್ಟ್ರೀಯ ಮಟ್ಟದ ಕಬಡ್ಡಿಯಲ್ಲೇ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಫೈನಲ್‌ನಲ್ಲಿ ಕನಾರ್ಟಕ ಎದರು ಪರಾಜಯಗೊಂಡ ಮಹಾರಾಷ್ಟ್ರ ತಂಡ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಡೆದುಕೊಂಡಿದೆ. ಅಂತಿಮ ಸುತ್ತಿನ ಪಂದ್ಯದಲ್ಲಿ 37- 14 ಅಂಕಗಳ ಅಂತರದಲ್ಲಿ ಏಕಮುಖವಾಗಿ ಸಾಗಿದ್ದು, ಕರ್ನಾಟಕ ನಿರಾಯಾಸ ಗೆಲುವು ಸಾಧಿಸಿತು. ಕರ್ನಾಟಕ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತೆಲಂಗಾಣ, ಗೋವಾ, ಜಾರ್ಖಂಡ್, ತಮಿಳುನಾಡು, ಮಧ್ಯಪ್ರದೇಶ, ಪಾಂಡಿಚೇರಿ, ರಾಜಸ್ಥಾನ, ಕೇರಳ ಸಹಿತ ರಾಷ್ಟ್ರದ ವಿವಿಧೆಡೆಗಳಿಂದ 12 ತಂಡಗಳು ಕೂಟದಲ್ಲಿ ಭಾಗವಹಿಸಿದ್ದವು.

ಕರ್ನಾಟಕದ ಪರಮಾನಂದ ಕೆ.ಜಿ.ಉತ್ತಮ ರೈಡರ್, ಸುರೇಶ್ ಹಿಡಿತಗಾರ ವೈಯುಕ್ತಿಕ ಬಹುಮಾನ ಗೆದ್ದುಕೊಂಡರು. ಆಲ್‌ರೌಂಡರ್ ಗೌರವವನ್ನು ಮಹಾರಾಷ್ಟ್ರದ ಸಚಿನ್ ತೆಂಡಲ್, ವಿಶೇಷ ಪುರಸ್ಕಾರವನ್ನು ಕರ್ನಾಟಕ ತಂಡದ ನಾಯಕ ರಾಘವೇಂದ್ರ ಪಡೆದುಕೊಂಡರು.

ಸಮಾರೋಪ: ಸಮಾರೋಪ ಸಮಾರಂಭದಲ್ಲಿ ಶಾಸಕ ಡಿ.ವೇದವ್ಯಾಸ ಕಾಮತ್ ಮಾತನಾಡಿದರು. ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ರಾಜ್ಯಾಧ್ಯಕ್ಷ ಬಸೂರು ರಾಜೀವ್ ಶೆಟ್ಟಿ, ಜಿಲ್ಲಾ ಅಧ್ಯಕ್ಷ ಶಾಂತಾರಾಮ ಶೆಟ್ಟಿ, ಗಾಯಕಿ ಮಲ್ಲಿಕಾ ಶೆಟ್ಟಿ, ಕಾನೂನು ಸೇವಾ ಪ್ರಾಧಿಕಾರ ದಕ್ಷಿಣ ಕನ್ನಡ ಸದಸ್ಯ ಕಾರ್ಯದರ್ಶಿ ಮಲ್ಲಣ್ಣ ಗೌಡ ಪಾಟೀಲ್, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಯುವಜನ ಕ್ರೀಡಾ ಇಲಾಖೆ ಉಪನಿರ್ದೇಶಕ ಪ್ರದೀಪ್ ಡಿಸೋಜ, ಕೂಟದ ಸಂಘಟನಾ ಕಾರ್ಯದರ್ಶಿ ಡಿ.ಫರ್ನಾಂಡಿಸ್, ಚಂದ್ರಶೇಖರ ರೈ, ಮಹೇಶ್ ಗೌಡ ಉಪಸ್ಥಿತರಿದ್ದರು.