ಅವೈಜ್ಞಾನಿಕ ಸುಂಕದ ಕಟ್ಟೆಗೆ ದರ ಕೇಡು

Latest News

ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂದು ತನ್ವೀರ್​ ಸೇಠ್​ ಹತ್ಯೆಗೆ ಯತ್ನ: ಆರೋಪಿಯ ಗೊಂದಲದ ಹೇಳಿಕೆ

ಮೈಸೂರು: ಉದ್ಯೋಗ ಕೊಡಿಸಲು ಸಹಾಯ ಮಾಡಲಿಲ್ಲ ಎಂಬ ಕಾರಣಕ್ಕೆ ಶಾಸಕ ತನ್ವೀರ್​ ಸೇಠ್​ ಅವರನ್ನು ಹತ್ಯೆ ಮಾಡಲು ಯತ್ನಿಸಿದ್ದಾಗಿ ಆರೋಪಿ ಫರಾನ್​ ಪಾಷಾ...

ಕನಕದಾಸ ಸರ್ಕಲ್​ ನಾಮಫಲಕ ತೆರವು ಹಿನ್ನೆಲೆಯಲ್ಲಿ ನಡೆದ ಶಾಂತಿ ಸಭೆಯಲ್ಲಿ ಎರಡು ಸಮುದಾಯಗಳ ನಡುವೆ ಗಲಾಟೆ

ತುಮಕೂರು: ಕನಕದಾಸ ಸರ್ಕಲ್​ ಹೆಸರಿನ ನಾಮಫಲಕ ತೆರವು ವಿಚಾರವಾಗಿ ನಡೆದ ಗಲಾಟೆ ಹಿನ್ನೆಲೆಯಲ್ಲಿ ಎರಡು ಸಮುದಾಯದ ನಡುವೆ ಏರ್ಪಡಿಸಿದ್ದ ಶಾಂತಿ ಸಭೆಯಲ್ಲಿ ಮತ್ತೊಮ್ಮೆ...

ಜಮ್ಮು ಮತ್ತು ಕಾಶ್ಮೀರದ ಅಖ್ನೂರ್​ ವಲಯದಲ್ಲಿ ಶಂಕಾಸ್ಪದ ಸ್ಫೋಟ: 1 ಯೋಧ ಹುತಾತ್ಮ, ಇನ್ನಿಬ್ಬರಿಗೆ ಗಂಭೀರ ಗಾಯ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅಖ್ನೂರ್​ ವಲಯದಲ್ಲಿ ಭಾನುವಾರ ಸಂಜೆ ಸಂಭವಿಸಿದ ಶಂಕಾಸ್ಪದ ಸ್ಫೋಟದಲ್ಲಿ ಭಾರತೀಯ ಸೇನಾಯಪಡೆಯ ಒಬ್ಬ ಯೋಧ ಹುತಾತ್ಮರಾಗಿದ್ದು, ಇನ್ನಿಬ್ಬರು...

ಆಸ್ಟ್ರೇಲಿಯಾದ ಮಹಿಳೆಯೊಬ್ಬರು ದಿನಕ್ಕೊಂದು ಮೀಸೆ ಧರಿಸುತ್ತಿದ್ದಾರೆ, ಇದಕ್ಕೆ ಕಾರಣ ಇಲ್ಲಿದೆ ನೋಡಿ

ನವದೆಹಲಿ: ನವೆಂಬರ್​ ಬಂತೆಂದರೆ ಪುರುಷರು ನೋ ಶೇವ್​ ನವೆಂಬರ್​ ಅಭಿಯಾನ ಆರಂಭಿಸುತ್ತಾರೆ. ಒಂದು ತಿಂಗಳು ಅವರು ಯಾವುದೇ ಕಾರಣಕ್ಕೂ ಗಡ್ಡ, ಮೀಸೆ ಬೋಳಿಸದೆ,...

ತನ್ವೀರ್​ ಸೇಠ್​ ಆರೋಗ್ಯಸ್ಥಿತಿ ಬಗ್ಗೆ 48 ಗಂಟೆ ಏನು ಹೇಳಲು ಸಾಧ್ಯವಿಲ್ಲ ಎಂದ ವೈದ್ಯರು: 5 ತಾಸು ಶಸ್ತ್ರಚಿಕಿತ್ಸೆ ಬಳಿಕ ಹೃದಯ ಮತ್ತು ಕತ್ತಿನ ಎರಡು ನರಗಳ ಮರುಜೋಡಣೆ

ಮೈಸೂರು: ತೀವ್ರ ಹಲ್ಲೆಗೆ ಒಳಗಾಗಿರುವ ಶಾಸಕ ತನ್ವೀರ್​ ಸೇಠ್​ ದೇಹದ ಸ್ಥಿತಿ ಗಂಭೀರವಾಗಿದೆ. ಅವರ ಆರೋಗ್ಯಸ್ಥಿತಿ ಬಗ್ಗೆ 48 ಗಂಟೆ ಏನು ಹೇಳಲು...

ಪರಶುರಾಮ ಭಾಸಗಿ ವಿಜಯಪುರ

ರಾಷ್ಟ್ರೀಯ ಹೆದ್ದಾರಿಗಳ ಸುಂಕ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಅವೈಜ್ಞಾನಿಕ ಹೆದ್ದಾರಿಗೆ ದರ ಬೇರೆ ಕೇಡು ಎಂಬ ಅಪವಾದ ಕೇಳಿ ಬಂದಿದೆ.

ಹೌದು, ಇಲ್ಲಿನ ರಾಷ್ಟ್ರೀಯ ಹೆದ್ದಾರಿ 50ರ ವಿಜಯಪುರ- ಸೊಲ್ಲಾಪುರ- ಬೆಂಗಳೂರು ರಸ್ತೆಯಲ್ಲಿ ನಿರ್ವಿುಸಿದ ಸುಂಕದ ಕಟ್ಟೆಯೇ ಅವೈಜ್ಞಾನಿಕವಾಗಿದೆ. ಐತಿಹಾಸಿಕ ನಗರದ ಕೇವಲ ನಾಲ್ಕು ಕಿಮೀ ಅಂತರದಲ್ಲಿ ಸುಂಕದ ಕಟ್ಟೆ ನಿರ್ಮಾಣ ಮಾಡಲಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ಜನ ಹೆದ್ದಾರಿ ಬಳಸದಿದ್ದರೂ ಸುಂಕ ಕಟ್ಟಬೇಕಾದ ಅನಿವಾರ್ಯತೆ ಇದೆ. ಅಲ್ಲದೆ, ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳು ಸುತ್ತು ಬಳಸಿ ಗ್ರಾಮ ಸೇರುವಂತಾಗಿದೆ. ನಗರ ವಿಸ್ತಾರಗೊಳ್ಳುತ್ತಿದ್ದು, ಟೋಲ್ ಗೇಟ್ ನಗರದ ಒಳಭಾಗಕ್ಕೆ ಬಂದಂತಾಗಿದೆ. ಸುತ್ತಲೂ ಶಾಲೆ- ಕಾಲೇಜ್​ಗಳು ನಿರ್ವಣಗೊಂಡಿದ್ದು, ಖಾಸಗಿ ಆಸ್ಪತ್ರೆಗಳು ತಲೆ ಎತ್ತುತ್ತಿವೆ. ಅಲ್ಲದೇ, ಕೃಷಿ ಮಹಾವಿದ್ಯಾಲಯ ನಗರದ ಅನತಿ ದೂರದಲ್ಲಿದ್ದು, ಅಲ್ಲಿಗೆ ಹೋಗಲು ಅನಿವಾರ್ಯವಾಗಿ ಪ್ರತಿದಿನ ಸುಂಕ ಕಟ್ಟಬೇಕಿದೆ. ಹೆದ್ದಾರಿ ಬಳಸದಿದ್ದರೂ ಸುಂಕ ಕಟ್ಟುವುದು ಯಾವ ನ್ಯಾಯ? ಎಂಬುದು ಸ್ಥಳೀಯ ನಿವಾಸಿಗಳ ದೂರು. ಪ್ರಸ್ತುತ ಟೋಲ್​ಗೇಟ್ ಅಂತರ ಹೆಚ್ಚಿಸಬೇಕೆಂಬುದು ಬಹು ದಿನದ ಬೇಡಿಕೆಯಾಗಿದೆ. ಈಗಾಗಲೇ ಇದರ ಬಗ್ಗೆ ಯೋಜನೆ ಸಹ ರೂಪಿಸಲಾಗಿತ್ತಾದರೂ, ಅದು ನನೆಗುದಿಗೆ ಬಿದ್ದಿದೆ. ಟೋಲ್​ಗೇಟ್​ನಿಂದಾಗಿ ಹತ್ತಿರದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ವಾಹನಗಳ ಹೊಗೆ, ಶಬ್ದ ಮಾಲಿನ್ಯ ಸೇರಿದಂತೆ ಅಪಘಾತಗಳ ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.

ನಿಯಮ ಉಲ್ಲಂಘನೆ: ಹೆದ್ದಾರಿಯುದ್ದಕ್ಕೂ ಅನಧಿಕೃತ ಬಾರ್ ಹಾಗೂ ದಾಬಾಗಳ ದರ್ಬಾರ್ ಹೆಚ್ಚಿದ್ದು, ಅಮಲಿನಲ್ಲಿ ಇಹಲೋಕ ತ್ಯಜಿಸುವವರ ಸಂಖ್ಯೆ ಹೆಚ್ಚಿದೆ. ಸುಂಕದ ಕಟ್ಟೆಗಳ ಸುತ್ತಲಿನ ದಾಬಾಗಳಲ್ಲಿ ವೇಶ್ಯೆಯರ ಬಿಂಕ ಬಿನ್ನಾಣಗಳು ಹೆಚ್ಚುತ್ತಿವೆ. ಮಾತ್ರವಲ್ಲ, ಡಾಬಾಗಳಲ್ಲಿ ಗಾಂಜಾ, ಅಫೀಮ್ಳ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬರುವ ನಿಡಗುಂದಿ, ಆಲಮಟ್ಟಿ, ಹುನಗುಂದ ಸೇರಿದಂತೆ ಹಲವು ಕಡೆ ಅನಧಿಕೃತ ಡಾಬಾಗಳು ತಲೆ ಎತ್ತಿವೆ. ಅಲ್ಲದೇ, ಹೆದ್ದಾರಿಯಿಂದ 200 ಮೀಟರ್ ಅಂತರದಲ್ಲಿ ಯಾವುದೇ ಬಾರ್ ಮತ್ತು ರೆಸ್ಟೋರೆಂಟ್ ಇರಕೂಡದು ಎಂಬ ನಿಯಮ ಗಾಳಿಗೆ ತೂರಲಾಗಿದೆ.

ಮೂಲಸೌಕರ್ಯಗಳು ಮರೀಚಿಕೆ

ಪ್ರಸ್ತುತ ಹೆದ್ದಾರಿಯಲ್ಲಿ ಬರುವ ಟೋಲ್​ನಿಂದ ಸುಮಾರು 10 ಕಿ.ಮೀ. ಅಂತರದಲ್ಲಿ ಮೇಲ್ಸೇತುವೆ ನಿರ್ವಿುಸಲಾಗಿದೆ. ಇದರಿಂದ ಗ್ರಾಮೀಣ ಜನ ಹೊಲಗದ್ದೆಗಳಿಗೆ ಹೋಗಲು ಅನವಶ್ಯಕವಾಗಿ 10 ಕಿ.ಮೀ. ಸಂಚರಿಸಬೇಕಿದೆ. ಹಿಟ್ನಳ್ಳಿ ಬಳಿ ಮೇಲ್ಸೇತುವೆ ನಿರ್ವಿುಸಲಾಗಿದ್ದು, ಕೆಳಭಾಗದಲ್ಲಿ ಪಾದಚಾರಿಗಳು ಹಾಗೂ ಚಕ್ಕಡಿ ಸೇರಿದಂತೆ ಇನ್ನಿತರ ವಾಹನ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆಯಾದರೂ ಇಷ್ಟೊಂದು ದೂರದಲ್ಲಿ ಸೇತುವೆ ನಿರ್ವಿುಸಿರುವುದು ತೊಂದರೆದಾಯಕವಾಗಿದೆ. ಇನ್ನು ಹೆದ್ದಾರಿಯುದ್ದಕ್ಕೂ ನಿರ್ವಿುಸಿದ ತಾತ್ಕಾಲಿಕ ತಂಗುದಾಣಗಳು ಕುಡುಕರ ತಾಣಗಳಾಗಿವೆ. ಗ್ರಾಮೀಣ ಪ್ರದೇಶಕ್ಕೆ ಅಂಟಿಕೊಂಡಂತೆ ಅನೇಕ ಬಸ್ ನಿಲ್ದಾಣಗಳು ಹಾಳಾಗಿವೆ. ಅಲ್ಲಲ್ಲಿ, ನಿರ್ವಿುಸಿದ ಶೌಚಗೃಹಗಳು ಸಂಪೂರ್ಣ ಹಾಳಾಗಿವೆ. ಹೀಗಾಗಿ ಪ್ರಯಾಣಿಕರು ಹದ್ದಾರಿಯಲ್ಲೇ ವಾಹನ ನಿಲ್ಲಿಸಿ ದೇಹಬಾಧೆ ತೀರಿಸಿಕೊಳ್ಳುವ ಅನಿವಾರ್ಯತೆ ಇದೆ.

ಈಗಾಗಲೇ ಪೆಟ್ರೋಲ್, ಡಿಸೇಲ್ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ಅಂಥದರಲ್ಲಿ ಟೋಲ್ ಫೀ ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರದ ಬೊಕ್ಕಸ ತುಂಬಲು ಕೈಗೊಂಡಿರುವ ಈ ನಿರ್ಣಯ ಸಾರ್ವಜನಿಕರ ಮೇಲೆ ಮತ್ತಷ್ಟು ಪರಿಣಾಮ ಬೀರಲಿದೆ. ಒಂದು ಕೈಯಿಂದ ಕೊಟ್ಟಂತೆ ಮಾಡಿ ಇನ್ನೊಂದು ಕೈಯಿಂದ ಕಸಿದುಕೊಳ್ಳುವುದು ಯಾವ ನ್ಯಾಯ.

| ಅರುಣ ಹುಂಡೇಕರ ಪೆಟ್ರೋಲಿಯಂ ಅಸೋಸಿಯೇಶನ್ ಅಧ್ಯಕ್ಷರು

ವಿಜಯಪುರದಿಂದ ಹುನಗುಂದ 425 ರೂ. ಸುಂಕ ತೆಗೆದುಕೊಳ್ಳುತ್ತಾರೆ. 500 ರೂ. ಸಿಗುವ ಭತ್ಯೆಯೂ ಇದಕ್ಕೇ ಹಾಕಬೇಕಿದೆ. ಟೋಲ್ ಫೀ ಸಲುವಾಗಿ ಸಾಕಾಗಿದೆ. ಸುಮ್ಮನೆ ಕೂಲಿ ಮಾಡುವುದು ಒಳಿತು. ಟೋಲ್ ಶೋಷಣೆಯಿಂದ ಸಾಕಷ್ಟು ಜನ ಬೇಸತ್ತಿದ್ದಾರೆ. ಟೋಲ್ ಹತ್ತಿರ ಎರಡ್ಮೂರು ಕಿಮೀ ರಸ್ತೆ ಸರಿಯಾಗಿರುತ್ತದೆ. ಇನ್ನುಳಿದ ಕಡೆ ಹದಗೆಟ್ಟಿರುತ್ತದೆ. ಮೂತ್ರಿಗಳು ಸಂಪೂರ್ಣ ಹದಗೆಟ್ಟಿವೆ. ಸೌಲಭ್ಯ ಮರೀಚಿಕೆ.

| ಆಂಜನೇಯ ಲಾರಿ ಚಾಲಕ, ಗಂಗಾವತಿ

ಟೋಲ್ ಕಟ್ಟುವುದರಲ್ಲಿಯೇ ಜೀವನ ಸವೆಯುತ್ತಿದೆ. ಕರ್ನಾಟಕದಲ್ಲಿ ಇರುವಷ್ಟು ಟೋಲ್ ಫೀ ಎಲ್ಲೂ ಇಲ್ಲ. ಬೆಂಗಳೂರಿನಿಂದ ವಿಜಯಪುರಕ್ಕೆ ಬರುವುದರೊಳಗೆ 3500 ಟೋಲ್ ಫೀ ಹೋಗುತ್ತೆ. ಇದರಿಂದ ಲಾರಿ ಮಾಲೀಕರಿಗೆ ಭಾರಿ ತೊಂದರೆಯಾಗುತ್ತಿದೆ. ಸಾರಿಗೆ ಶುಲ್ಕ, ವಾಹನದ ಶುಲ್ಕ ಎಲ್ಲ ಕಟ್ಟಿ ಆದಾಯ ಗಳಿಸೋದು ಕಷ್ಟಕರ.

| ಏಗಂಬರ ಲಾರಿ ಮಾಲೀಕ ವೆಲ್ಲೂರ ತಮಿಳುನಾಡು

 

- Advertisement -

Stay connected

278,553FansLike
570FollowersFollow
609,000SubscribersSubscribe

ವಿಡಿಯೋ ನ್ಯೂಸ್

VIDEO| ಲೋಕಸಭಾಧ್ಯಕ್ಷ ಓಂ...

ಜೈಪುರ: ಬಾಲಿವುಡ್​ ನಟಿ ರಾಣಿ ಮುಖರ್ಜಿ ಅವರ ಮುಂದಿನ ಚಿತ್ರ ಮರ್ದಾನಿ-2ಗೆ ಬಿಡುಗಡೆ ಮುನ್ನವೇ ವಿರೋಧದ ಕೂಗು ಕೇಳಿಬಂದಿದೆ. ಚಿತ್ರದ ವಿರುದ್ಧ ರಾಜಸ್ಥಾನದ ಕೋಟಾ ನಗರದ ನಿವಾಸಿಗಳು ಲೋಕಸಭಾ ಸ್ಪೀಕರ್​...

VIDEO| ಭಾರಿ ಭದ್ರತೆಯೊಂದಿಗೆ...

ಶಬರಿಮಲೆ: ವಿವಾದದ ನಡುವೆಯೇ ಭಾರಿ ಭದ್ರತೆಯೊಂದಿಗೆ ಅಯ್ಯಪ್ಪ ದೇವಸ್ಥಾನದ ಮುಖ್ಯ ದ್ವಾರವನ್ನು ಶನಿವಾರ ಸಂಜೆ ತೆರೆಯಲಾಯಿತು. ಸುದೀರ್ಘ ಎರಡು ತಿಂಗಳ ಮಂಡಲ-ಮಕರವಿಳಕ್ಕು ಪೂಜೆಗಾಗಿ ದೇವಸ್ಥಾನ ಬಾಗಿಲನ್ನು ಇಂದು ತೆರೆಯಲಾಗಿದೆ. ದೇವಸ್ಥಾನದ ಪ್ರಧಾನ...

VIDEO| ಹಿರಿಯ ಗಾಯಕಿ...

ಬೆಂಗಳೂರು: ಹಿರಿಯ ಗಾಯಕಿ ಲತಾ ಮಂಗೇಶ್ಕರ್ (90) ಅನಾರೋಗ್ಯದಿಂದ ಬಳಲುತ್ತಿದ್ದು ಕಳೆದ ಆರು ದಿನಗಳಿಂದ ಮುಂಬೈನಲ್ಲಿರುವ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ನಡುವೆ ಕಳೆದೆರಡು ದಿನಗಳಿಂದ...

VIDEO: ನೆಟ್ಟಿಗರ ಪ್ರೀತಿಯನ್ನು...

ನವದೆಹಲಿ: ಈ ನಾಲ್ಕು ತಿಂಗಳ ಪುಟಾಣಿ ಕಪ್ಪುಬೆಕ್ಕಿಗೆ ಎರಡು ಮುಖ ! ಅದರ ವಿಲಕ್ಷಣ ರೂಪಕ್ಕೆ ನೆಟ್ಟಿಗರು ಮನಸೋತಿದ್ದಾರೆ. ಎರಡು ಮುಖದ ಬೆಕ್ಕಿನ ಮರಿ ತುಂಬ ಆರೋಗ್ಯಕರವಾಗಿ ಬೆಳೆಯುತ್ತಿದ್ದು ಅದನ್ನು...

VIDEO: ಸುಮ್ಮಸುಮ್ಮನೆ ಟ್ರಾನ್ಸ್​ಫರ್​...

ನವದೆಹಲಿ: ಸರ್ಕಾರಿ ಕೆಲಸದಲ್ಲಿ ಇರುವವರಿಗೆ ವರ್ಗಾವಣೆ ಸಾಮಾನ್ಯ. ಆದರೆ ಕೆಲವು ಸಲ ಮೇಲಧಿಕಾರಿಗಳ ಸರ್ವಾಧಿಕಾರಿ ಧೋರಣೆಯಿಂದ ಅಧೀನ ಅಧಿಕಾರಿಗಳು ಸುಮ್ಮನೆ ವರ್ಗಾವಣೆಯಾಗುತ್ತಾರೆ. ಸಣ್ಣ ತಪ್ಪಿಗೂ ಬೇರೆ ಕಡೆ ವರ್ಗಗೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ. ಹಾಗೆ ವರ್ಗಾವಣೆಗೊಂಡ...

VIDEO: ಪುನೀತ್ ರಾಜ್​ಕುಮಾರ್​​...

ಬೆಂಗಳೂರು: ಪುನೀತ್​ ರಾಜ್​ಕುಮಾರ್ ಅವರ ಪಿಆರ್​ಕೆ ಸಂಸ್ಥೆಯಲ್ಲಿ ನಿರ್ಮಾಣವಾಗಿರುವ ಮಾಯಾ ಬಜಾರ್​-2016 ಸಿನಿಮಾದ ಟೀಸರ್​ ನಿನ್ನೆ (ನ.15)ರಂದು ಸಂಜೆ 7.30ಕ್ಕೆ ಬಿಡುಗಡೆಯಾಗಿದೆ. 56 ಸೆಕೆಂಡ್​​ಗಳ ಟೀಸರ್​ ಬಿಡುಗಡೆಯಾಗಿದೆ. ನವೆಂಬರ್​ 8, 2016ರಂದು 500 ರೂ.ಹಾಗೂ...

VIDEO| ಆಯುಷ್ಮಾನ್​ ಭವ...

ಬೆಂಗಳೂರು: ಹ್ಯಾಟ್ರಿಕ್​ ಹಿರೋ ಶಿವರಾಜ್​ಕುಮಾರ್​ ಹಾಗೂ ಡಿಂಪಲ್​ ಕ್ವೀನ್​ ರಚಿತಾ ರಾಮ್ ನಟನೆಯ "ಆಯುಷ್ಮಾನ್​ ಭವ" ಚಿತ್ರ ಇಂದು ತೆರೆಕಂಡಿದೆ. ವಿಶೇಷವೆಂದರೆ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕ ಗುರುಕಿರಣ್​...

VIDEO| ಐತಿಹಾಸಿಕ ಪಾತ್ರದಲ್ಲಿ...

ಮುಂಬೈ: ಇತ್ತೀಚೆಗೆ ಬಿಡುಗಡೆಯಾದ ಹೌಸ್​ಫುಲ್​-4 ಚಿತ್ರದ ಯಶಸ್ಸಿನಲ್ಲಿ ತೇಲುತ್ತಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ತಮ್ಮ ಮುಂದಿನ ಐತಿಹಾಸಿಕ ಪ್ರಾಜೆಕ್ಟ್​ಗೆ ತಯಾರಾಗುತ್ತಿದ್ದಾರೆ. ಪೃಥ್ವಿರಾಜ್​ ಹೆಸರಿನ ಇತಿಹಾಸ ಆಧಾರಿತ ಚಿತ್ರದ ಪೂಜಾ...

VIDEO| ಎಸ್ಸೆಸ್ಸೆಲ್ಸಿಯ ಎಲ್ಲ...

ವಡೋದರಾ: ರಿಮೋಟ್​ ಕಂಟ್ರೋಲ್​ನಿಂದ ಆಪರೇಟ್​ ಮಾಡಬಹುದಾದ 35 ದೇಶೀಯ ಹಗುರ ವಿಮಾನ ಮಾದರಿಗಳನ್ನು ತಯಾರಿಸುವ ಮೂಲಕ 17 ವರ್ಷದ ಹುಡುಗನೊಬ್ಬ ಎಲ್ಲರ ಹುಬ್ಬೇರಿಸಿದ್ದಾನೆ. ಪ್ರಿನ್ಸ್​ ಪಂಚಾಲ್ ವಿಮಾನ ಮಾದರಿ ತಯಾರಿಸಿದ ಹುಡುಗ....

ಒಸಮಾ ಬಿನ್​ ಲಾಡೆನ್​,...

ಇಸ್ಲಮಾಬಾದ್​: ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತೀಯ ಸೇನೆ ವಿರುದ್ಧ ಹೋರಾಡಲು ಕಾಶ್ಮೀರಿಗಳಿಗೆ ಉಗ್ರ ತರಬೇತಿ ನೀಡಲಾಗುತ್ತಿತ್ತು ಎಂಬುದನ್ನು ಪಾಕಿಸ್ತಾನದ ಮಾಜಿ ಅಧ್ಯಕ್ಷ, ಪಾಕ್​ ಸೇನೆಯ ಮಾಜಿ ಜನರಲ್​ ಫರ್ವೇಜ್​ ಮುಷರಫ್​ ಅವರು ಒಪ್ಪಿಕೊಂಡಿದ್ದಾರೆ....