ಕಾಂಗ್ರೆಸ್​ಗೆ ಐಟಿ ಆಘಾತ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ ಸಂಬಂಧ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಐಟಿ ಸಂಕಷ್ಟ ಎದುರಾಗಿದೆ. 2011-12ರಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿ.ನ ಆದಾಯಗಳ ವಿವರಗಳನ್ನು ಆದಾಯ ತೆರಿಗೆ ಮರುಪಾವತಿಯಲ್ಲಿ ಬಚ್ಚಿಟ್ಟಿದ್ದರೆಂದು ಆರೋಪಿಸಿ ಇಬ್ಬರಿಗೂ 100 ಕೋಟಿ ರೂ. ದಂಡ ಪಾವತಿಗೆ ಸೂಚಿಸಿ ಐಟಿ ಇಲಾಖೆ ನೋಟಿಸ್ ಜಾರಿ ಮಾಡಿದೆ. ಈ ಅವಧಿಯಲ್ಲಿ ರಾಹುಲ್ ಆದಾಯ 154.96 ಕೋಟಿ ರೂ.ಗಳಿದ್ದರೆ, ಘೋಷಣೆ ಮೊತ್ತ ಕೇವಲ 68.12 ಲಕ್ಷ ರೂ.ಗಳಾಗಿತ್ತು.

ಸೋನಿಯಾ ಗಾಂಧಿ ಕೂಡ 155.41 ಕೋಟಿ ರೂ. ಆಸ್ತಿ ಮಾಹಿತಿ ನೀಡಿರಲಿಲ್ಲ. ಹೀಗಾಗಿ ಸುಮಾರು 300 ಕೋಟಿ ರೂ.ಗಳ ಆಸ್ತಿ ಮರೆಮಾಚಿರುವ ಹಿನ್ನೆಲೆಯಲ್ಲಿ 100 ಕೋಟಿ ರೂ. ದಂಡ ಪಾವತಿಸಬೇಕು ಎಂದು ಸಿಬಿಡಿಟಿ ಸೂಚಿಸಿದೆ.

ಸೋನಿಯಾ ಕುಟುಂಬದ ವಕೀಲರು ಈ ಆರೋಪ ಅಲ್ಲಗಳೆದಿದ್ದು, ‘ಲಾಭರಹಿತ ಸರ್ಕಾರೇತರ ಸಂಸ್ಥೆಯ ಆದಾಯವನ್ನು ಗಾಂಧಿ ಕುಟುಂಬದ ಆದಾಯ ಎಂದು ಹೇಗೆ ಪರಿಗಣಿಸಲಾಗುತ್ತದೆ? ರಾಜಕೀಯ ಕಾರಣಗಳಿಗೆ ಈ ಪ್ರಕರಣ ಮರು ವಿಚಾರಣೆಗೆ ಬರುತ್ತಿದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಆದಾಯ ತೆರಿಗೆ ಇಲಾಖೆ ಎಫ್​ಐಆರ್ ದಾಖಲಿಸಿದ್ದು, ಸೋನಿಯಾ ಹಾಗೂ ರಾಹುಲ್ ಜಾಮೀನು ಪಡೆದಿದ್ದಾರೆ. ಎಫ್​ಐಆರ್ ರದ್ದು ಕೋರಿ ಅಧೀನ ಹಾಗೂ ಹೈಕೋರ್ಟ್​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲಾಗಿದೆ.

Leave a Reply

Your email address will not be published. Required fields are marked *