ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಕಾಂಗ್ರೆಸ್​ ಸಂಸದ ಶಶಿ ತರೂರ್​: ನೆಟ್ಟಿಗರ ಆಕ್ರೋಶ

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳುವ ಕಾಂಗ್ರೆಸ್​ ಸಂಸದ ಶಶಿ ತರೂರ್​ ಈಗ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಅವರು ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿದ 2 ಫೋಟೋಗಳು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿವೆ.

30 ವರ್ಷ ಹಳೆಯ ಪ್ರಕರಣವೊಂದರಲ್ಲಿ ಶಿಕ್ಷೆಗೆ ಗುರಿಯಾಗಿರುವ ಗುಜರಾತ್​ನ ಮಾಜಿ ಐಪಿಎಸ್​ ಅಧಿಕಾರಿ ಸಂಜೀವ್​ ಭಟ್​ ಅವರ ಕುಟುಂಬ ಸದಸ್ಯರು ಶಶಿ ತರೂರ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಇವರ ಭೇಟಿಯ ಫೋಟೋವನ್ನು ಶಶಿ ತರೂರ್​ ತಮ್ಮ ಟ್ವಿಟರ್​ ಖಾತೆಯಲ್ಲಿ ಪೋಸ್ಟ್​ ಮಾಡಿ, ನಾನು ನಿನ್ನೆ ಸಂಜೀವ್​ ಭಟ್​ ಪತ್ನಿ ಶ್ವೇತಾ ಭಟ್​ ಹಾಗೂ ಅವರ ಪುತ್ರ ಶಾಂತನೂನನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ನ್ಯಾಯ ಸಿಗಲೇ ಬೇಕು ಎಂದು ತಿಳಿಸಿದ್ದರು.

ಆದರೆ ಇವರು ಫೋಟೋ ಪೋಸ್ಟ್​ ಮಾಡಿದ ತಕ್ಷಣವೇ ಟ್ವಿಟರ್​ ಬಳಕೆದಾರರು ಶಶಿ ತರೂರ್​ ವಿರುದ್ಧ ಮುಗಿಬಿದ್ದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಶಿ ತರೂರ್​ ಅವರ ಕಚೇರಿಯಲ್ಲಿ ಟೇಬಲ್​ ಮೇಲೆ ಇರಿಸಿರುವ ರಾಷ್ಟ್ರಧ್ವಜ ತಲೆಕೆಳಗಾಗಿದೆ. ಮೇಲ್ಭಾಗದಲ್ಲಿ ಹಸಿರು ಬಣ್ಣ ಬರುವಂತೆ ರಾಷ್ಟ್ರ ಧ್ವಜ ಇರಿಸಲಾಗಿದೆ. ಈ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ನೆಟ್ಟಿಗರು ಮೊದಲು ರಾಷ್ಟ್ರಧ್ವಜಕ್ಕೆ ಗೌರವ ಕೊಡುವುದನ್ನು ಕಲಿತುಕೊಳ್ಳಿ ಎಂದು ಕಿಡಿ ಕಾರಿದ್ದಾರೆ. (ಏಜೆನ್ಸೀಸ್​)

One Reply to “ರಾಷ್ಟ್ರ ಧ್ವಜಕ್ಕೆ ಅಗೌರವ ತೋರಿದ ಕಾಂಗ್ರೆಸ್​ ಸಂಸದ ಶಶಿ ತರೂರ್​: ನೆಟ್ಟಿಗರ ಆಕ್ರೋಶ”

Comments are closed.