ಖೂಬಾ ಪರ ಪತ್ನಿ ಪ್ರಚಾರ

ವಿಜಯವಾಣಿ ಸುದ್ದಿಜಾಲ ಬಸವಕಲ್ಯಾಣ
ಲೋಕಸಭಾ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಪರವಾಗಿ ಅವರ ಪತ್ನಿ ಶೀಲಾವತಿ ಖೂಬಾ ನಗರದ ವಿವಿಧ ಬಡಾವಣೆಗಳಿಗೆ ತೆರಳಿ ಶುಕ್ರವಾರ ಮತಯಾಚಿಸಿದರು.

ಪಕ್ಷದ ಪ್ರಮುಖರು, ಕಾರ್ಯಕರ್ತರ ಜತೆ ಶ್ರೀ ಬಸವೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಶೀಲಾವತಿ ಅವರು ಶಾಪುರ ಗಲ್ಲಿ, ಕೈಕಾಡಿ ಗಲ್ಲಿ, ಗಂಗಾ ಕಾಲನಿ, ಬನಶಂಕರಿ ಗಲ್ಲಿ, ಹೊಸಪೇಟ ಗಲ್ಲಿ ಸೇರಿ ವಿವಿಧ ಬಡಾವಣೆಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದರು.

ದೇಶದ ಸಮಗ್ರ ಅಭಿವೃದ್ಧಿ ಹಾಗೂ ಸುರಕ್ಷತೆಗಾಗಿ ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡುವುದು ಅವಶ್ಯಕವಾಗಿದೆ. ಕಳೆದೈದು ವರ್ಷಗಳಲ್ಲಿ ಸಂಸದರಾಗಿ ಭಗವಂತ ಖೂಬಾ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಫಸಲ್ ಬಿಮಾ ಯೋಜನೆ ಮೂಲಕ ಬೀದರ್ ಅನ್ನು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಸೇರಿ ಅನೇಕ ಕೆಲಸ ಮಾಡಿದ್ದಾರೆ. ಅವರಿಗೆ ಮತ್ತೊಂದು ಅವಕಾಶ ಕೊಡಿ ಎಂದು ಕೊರಿದರು.

ಪ್ರಮುಖರಾದ ಪ್ರಸನ್ನಲಕ್ಷ್ಮೀ ದೇಶಪಾಂಡೆ, ಶೋಭಾ ತೇಲಂಗ, ಉಲ್ಕಾವತಿ ಬಿರಾದಾರ, ವೈಶಾಲಿ ಮಂಠಾಳೆ, ಮಹಾದೇವಿ ಬ್ಯಾಡಗೆ, ಮೀನಾಕ್ಷಿ ಪಾಟೀಲ್, ಶರಣಮ್ಮ ಹಿಪಳೆ, ವಿಮಲಾಬಾಯಿ ಪಾಟೀಲ್, ಜಯಶ್ರೀ ಖೂಬಾ, ಸೂರ್ಯಕಾಂತ ಚಿಲ್ಲಾಬಟ್ಟೆ, ವಿಜಯಕುಮಾರ ಮಂಠಾಳೆ, ಶಿವಪುತ್ರ ಗೌರ್, ದೀಪಕ ಗಾಯಕವಾಡ, ರಾಜು ಮಂಠಾಳೆ, ಅರವಿಂದ ಮುತ್ತೆ, ಉಜ್ವಲ ಶಾಸ್ತ್ರಿ, ಕೃಷ್ಣಾ ಗೋಣೆ, ಯುವರಾಜ ಜಾಧವ್, ಮನೋಜ ತಿಂಬುರಚಿ ಇತರರಿದ್ದರು

Leave a Reply

Your email address will not be published. Required fields are marked *