ನಾಥುರಾಮ್​ ಗೋಡ್ಸೆ ಕೂಡ ಆರ್​ಎಸ್​ಎಸ್​ಗೇ ಸೇರಿದವ ಎಂದ ಎಸ್​ಪಿ ಮುಖಂಡ ಅಜಂ ಖಾನ್​

ರಾಂಪುರ: ಸ್ವತಂತ್ರ ಭಾರತದ ಮೊದಲ ಹಿಂದು ಭಯೋತ್ಪಾದಕ ನಾಥುರಾಮ್ ಗೋಡ್ಸೆ ಎಂದು ನಟ ಕಮಲ್​ ಹಾಸನ್​ ಹೇಳಿ ವಿವಾದ ಸೃಷ್ಟಿಸಿದ್ದರು. ಅದಕ್ಕೆ ಪ್ರತಿಯಾಗಿ ಭೋಪಾಲ್​ ಬಿಜೆಪಿ ಲೋಕಸಭಾ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್​ ಠಾಕೂರ್​ ಅವರು, ನಾಥೂರಾಮ್​ ಗೋಡ್ಸೆ ಭಯೋತ್ಪಾದಕನಲ್ಲ ಅವನೊಬ್ಬ ದೇಶ ಭಕ್ತ ಎಂದು ಹೇಳಿ ಮತ್ತೊಂದು ವಿವಾದ ಮಾಡಿದ್ದರು.

ಈಗ ಸಮಾಜವಾದಿ ಪಕ್ಷದ ಮುಖಂಡ ಅಜಂ ಖಾನ್​ ಇದೇ ನಾಥುರಾಮ್​ ಗೋಡ್ಸೆ ವಿಚಾರವಾಗಿ ಇನ್ನೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಗಾಂಧೀಜಿಯವರನ್ನು ಹತ್ಯೆಗೈದ ಗೋಡ್ಸೆಯನ್ನು ದೇಶಭಕ್ತ ಎಂದಿರುವ ಪ್ರಜ್ಞಾ ಸಿಂಗ್​ ಹೇಳಿಕೆಯನ್ನು ಬಲವಾಗಿ ಖಂಡಿಸುತ್ತೇನೆ. ಗೋಡ್ಸೆ ಆರ್​ಎಸ್​ಎಸ್​ನ ಒಂದು ಗುರುತು. ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಖಾಕಿ ಚಡ್ಡಿ ಹೇಗೆ ಅಸ್ಮಿತೆಯೋ ಹಾಗೇ ಗೋಡ್ಸೆ ಕೂಡ ಆರ್​ಎಸ್​ಎಸ್​ನ ಒಂದು ಭಾಗ. ಈಗ ನಮ್ಮ ದೇಶ ಗಾಂಧೀಜಿಯವರ ಹೆಸರಲ್ಲಿ ಗುರುತಿಸಿಕೊಳ್ಳಬೇಕೋ, ನಾಥುರಾಮ್​ ಗೋಡ್ಸೆ ಹೆಸರಲ್ಲೋ ಎಂಬುದನ್ನು ನಿರ್ಧರಿಸುವ ಜವಾಬ್ದಾರಿ ಜನರ ಮೇಲೆ ಇದೆ. ಮಾನವೀಯತೆ ಬೇಕೋ, ಖಾಕಿ ಚಡ್ಡಿ ಬೇಕೋ ಎಂದು ಪ್ರಶ್ನಿಸಿದ್ದಾರೆ.

ಪ್ರಜ್ಞಾ ಹೇಳಿಕೆಯ ವಿರುದ್ಧ ಪ್ರತಿಪಕ್ಷಗಳ ಮುಖಂಡರೆಲ್ಲ ತಿರುಗಿಬಿದ್ದಿದ್ದರು. ಅದಾದ ಬಳಿಕ ಸಾಧ್ವಿ ಪ್ರಜ್ಞಾ ಕೂಡ ಕ್ಷಮೆ ಕೋರಿದ್ದಾರೆ. (ಏಜೆನ್ಸೀಸ್​)

One Reply to “ನಾಥುರಾಮ್​ ಗೋಡ್ಸೆ ಕೂಡ ಆರ್​ಎಸ್​ಎಸ್​ಗೇ ಸೇರಿದವ ಎಂದ ಎಸ್​ಪಿ ಮುಖಂಡ ಅಜಂ ಖಾನ್​”

  1. It was the Congress which was existing at that time could not protect our Great Mahatma. If they could have protected the Great Mahatma No Nathruram Godse or any body else could have touched Sri Mahatma Gandhi. When they could not protect the father of the nation how can they manage to protect the nation. This is truly the lapse of Protection and now to divert people’s mind they keep commenting unrelated stories which every one should be aware of including SP leaders.

Leave a Reply

Your email address will not be published. Required fields are marked *