More

  ನತಾಶಾ ಜತೆ ವಿಚ್ಛೇದನದ ವದಂತಿಗಳ ನಡುವೆ ವಿದೇಶದಲ್ಲಿ ಜಾಲಿ ಮೂಡ್​​ನಲ್ಲಿ ಹಾರ್ದಿಕ್ ಪಾಂಡ್ಯ

  ನವದೆಹಲಿ: ಮುಂಬೈ ತಂಡದ ನಾಯಕನಾಗಿ ಕಾಣಿಸಿಕೊಂಡಿದ್ದ ಪಾಂಡ್ಯ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ ಎದ್ದಿದೆ.ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ನತಾಸಾ ಸ್ಟಾಂಕೋವಿಕ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ಕುರಿತಾಗಿ ದಂಪತಿ ಎಲ್ಲೂ ಕೂಡಾ ಮಾತನಾಡಿಲ್ಲ. ಆದರೆ ಕೆಲವು ವಂದತಿಗಳು ಹರಡಿವೆ.

  ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ಸ್ಟಾಂಕೋವಿಕ್ 2020 ರಲ್ಲಿ ವಿವಾಹವಾದರು. ಇದರ ನಂತರ, ನತಾಶಾ ಐಪಿಎಲ್‌ನ ಪ್ರತಿ ಸೀಸನ್‌ನಲ್ಲಿ ಕಾಣಿಸಿಕೊಂಡರು. ಆದರೆ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಪಾಂಡ್ಯ ಪಾದಾರ್ಪಣೆ ಮಾಡಿದರೂ ನತಾಶಾ ಕಾಣಿಸಿಕೊಂಡಿರಲಿಲ್ಲ. ಅಲ್ಲದೆ, ಯಾವುದೇ ಪಂದ್ಯ ವೀಕ್ಷಿಸಲು ಬಂದಿರಲಿಲ್ಲ. ಅಲ್ಲದೆ ಮಾರ್ಚ್ 4 ರಂದು ನತಾಶಾ ಅವರ ಜನ್ಮದಿನವಾಗಿದೆ. ಅಂದು ಹಾರ್ದಿಕ್ ಪಾಂಡ್ಯ ತಮ್ಮ ಪತ್ನಿಗೆ ಒಂದೇ ಒಂದು ಹುಟ್ಟುಹಬ್ಬದ ಶುಭಾಶಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿರಲಿಲ್ಲ.

  ನತಾಶಾ ಸ್ಟಾಂಕೋವಿಕ್ ತನ್ನ ಇನ್​ಸ್ಟಾಗ್ರಾಮ್​ ಖಾತೆಯಿಂದ ಪಾಂಡ್ಯ ಹೆಸರನ್ನು ತೆಗೆದುಹಾಕಿದ್ದಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ದಂಪತಿ ಜೊತೆಗಿನ ಒಂದೇ ಒಂದು ಫೋಟೋವನ್ನು ಹಾರ್ದಿಕ್ ಹಂಚಿಕೊಂಡಿಲ್ಲ. ಇದರಿಂದಾಗಿ ಇದೀಗ ಇವರಿಬ್ಬರು ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ. ವಿಚ್ಛೇದನದ ವೇಳೆ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗುತ್ತದೆ ಎಂದು ವದಂತಿಗಳಿವೆ. ಏಕೆಂದರೆ ಪಾಂಡ್ಯ ಪತ್ನಿ ಸರ್ಬಿಯನ್. ಆದ್ದರಿಂದ, ಅವರು ಸರ್ಬಿಯನ್ ದಿನಾರ್‌ಗಳಲ್ಲಿ ಜೀವನಾಂಶವನ್ನು ಪಡೆಯುವ ಸಾಧ್ಯತೆಯಿದೆ. ಈ ಎಲ್ಲಾ ಕಾರಣಗಳಿಂದ ಪಾಂಡ್ಯ ಕುಟುಂಬ ಈ ಬಗ್ಗೆ ಮಾತನಾಡುತ್ತಿಲ್ಲ ಎಂದು ವರದಿಯಾಗಿದೆ.

   
   
   
   
   
  View this post on Instagram
   
   
   
   
   
   
   
   
   
   
   

   

  A post shared by Hardik Himanshu Pandya (@hardikpandya93)

  ಕಳೆದ ಕೆಲವು ದಿನಗಳಿಂದ ಟೀಂ ಇಂಡಿಯಾ ಅಭಿಮಾನಿಗಳನ್ನು ಕಾಡುತ್ತಿರುವ ಪ್ರಶ್ನೆ.. ಹಾರ್ದಿಕ್ ಪಾಂಡ್ಯ ಎಲ್ಲಿ? ಎಂದು T20 ವಿಶ್ವಕಪ್‌ಗಾಗಿ, ನಾಯಕ ರೋಹಿತ್ ಶರ್ಮಾ ನೇತೃತ್ವದ ಮೊದಲ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ನ್ಯೂಯಾರ್ಕ್‌ಗೆ ತೆರಳಿದರು. ಆದರೆ.. ತಂಡದ ಉಪನಾಯಕರಾಗಿರುವ ಹಾರ್ದಿಕ್ ಪಾಂಡ್ಯ ಈ ತಂಡದಲ್ಲಿ ಕಾಣಿಸಿಕೊಂಡಿರಲಿಲ್ಲ. ಅದೇ ಸಮಯದಲ್ಲಿ, ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗಿತ್ತು.
  ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳಿವೆ. ಈ ಅನುಕ್ರಮದಲ್ಲಿ ಹಾರ್ದಿಕ್ ಅಮೆರಿಕದ ವಿಮಾನ ಹತ್ತದಿರುವುದು ಈ ವದಂತಿಗೆ ಇನ್ನಷ್ಟು ಬಲ ತುಂಬಿತು. ವಿಚ್ಛೇದನದ ವದಂತಿಗಳಿಗೆ ಇದುವರೆಗೂ ಹಾರ್ದಿಕ್ ಅಥವಾ ನತಾಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಿಜವಾದ ಹಾರ್ದಿಕ್ ಪಾಂಡ್ಯ ಎಲ್ಲಿದ್ದಾರೆ? ಟಿ20 ವಿಶ್ವಕಪ್‌ಗೆ ಅವರು ಯಾಕೆ ವಿಮಾನ ಹತ್ತಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.

  See also  ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನುಮತಿ ನೀಡಿದ ದೆಹಲಿ ಕೋರ್ಟ್; ದುಬೈಗೆ ಹಾರಲು ಡಿಕೆಶಿ ಸಜ್ಜು

  ಕ್ರಿಕ್‌ಬಜ್ ವರದಿ ಪ್ರಕಾರ.. ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಕಥೆ ಮುಗಿದ ತಕ್ಷಣ ಹಾರ್ದಿಕ್ ಪಾಂಡ್ಯ ದೇಶ ತೊರೆದಿದ್ದಾರೆ. ಐಪಿಎಲ್‌ನಿಂದಾಗಿ ಅವರು ಸಾಕಷ್ಟು ಒತ್ತಡದಲ್ಲಿದ್ದ ಕಾರಣ ಅವರು ರಿಫ್ರೆಶ್ ಮಾಡಲು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಈ ಕ್ರಮದಲ್ಲಿ ಅವರು ವಿದೇಶಕ್ಕೆ ತೆರಳಿದ್ದರು. ಅವರು ಅಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಅನುಕ್ರಮದಲ್ಲಿ ಅವರು ನ್ಯೂಯಾರ್ಕ್‌ಗೆ ತೆರಳಲು ಸಾಧ್ಯವಾಗಿಲ್ಲ. ಅವರು ನ್ಯೂಯಾರ್ಕ್‌ನಲ್ಲಿ ಮೊದಲ ಅಭ್ಯಾಸದ ಅವಧಿಯಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ.

  ಐಪಿಎಲ್ 2024ರ ಸೀಸನ್ ಆರಂಭಕ್ಕೂ ಮುನ್ನ ಹಾರ್ದಿಕ್ ಸುದ್ದಿಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡಕ್ಕೆ ಐದು ಬಾರಿ ಟ್ರೋಫಿ ನೀಡಿದ ರೋಹಿತ್ ಶರ್ಮಾ ಬದಲಿಗೆ ಹಾರ್ದಿಕ್ ಅವರನ್ನು ನಾಯಕರನ್ನಾಗಿ ನೇಮಿಸಿದೆ. ಈ ನಿರ್ಧಾರವನ್ನು ಅಭಿಮಾನಿಗಳು ಇಷ್ಟಪಡಲಿಲ್ಲ. ಇದರಿಂದಾಗಿ ಕ್ರೀಡಾಂಗಣದಲ್ಲಿ ಹಾರ್ದಿಕ್ ಅಪಹಾಸ್ಯದ ರೂಪದಲ್ಲಿ ತೀವ್ರ ಟೀಕೆ ಎದುರಿಸಬೇಕಾಯಿತು. 14 ಪಂದ್ಯಗಳಲ್ಲಿ 10ರಲ್ಲಿ ಸೋತಿದೆ. ಹಾಗೂ ಆಲ್ ರೌಂಡರ್ ಆಗಿರುವ ಹಾರ್ದಿಕ್ ಎಲ್ಲಾ ವಿಭಾಗಗಳಲ್ಲೂ ವಿಫಲರಾಗಿದ್ದರು. ಈ ಎಲ್ಲಾ ಸಂಕಷ್ಟಗಳ ನಡುವೆಯೂ ರಿಫ್ರೆಶ್ ಮಾಡಿಕೊಳ್ಳಲು ಹಾರ್ದಿಕ್ ವಿಹಾರಕ್ಕೆ ತೆರಳಿದ್ದಾರೆ ಎನ್ನಲಾಗಿದೆ. ಆದರೆ, ಅವರು ಎಲ್ಲಿಗೆ ಹೋದರು ಎಂಬುದು ಗೊತ್ತಾಗಿಲ್ಲ.  

  ಕಾರಿನಿಂದ ಮನೆಯ ತನಕ ಹಾರ್ದಿಕ್​ ಎಲ್ಲಾ ಆಸ್ತಿಯೂ ಅಮ್ಮನ ಹೆಸರಿನಲ್ಲಿದೆ; ನತಾಶಾಗೆ 70% ಅಲ್ಲ 7% ಕೂಡಾ ಸಿಗಲ್ಲ…

  ಗೌತಮ್ ಗಂಭೀರ್​ನ ತಬ್ಬಿಕೊಂಡು ಹಣೆಗೆ ಮತ್ತಿಟ್ಟ ಎಸ್​​ಆರ್​ಕೆ; ಕೆಕೆಆರ್ ಗೆಲವು ಸಂಭ್ರಮಿಸಿದ ಕಿಂಗ್​ ಖಾನ್​

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts