ತಾಂತ್ರಿಕ ಕಾರಣಗಳಿಂದ ನಾಸಾ ಸೂರ್ಯಶಿಕಾರಿ ಮುಂದೂಡಿಕೆ

ಟ್ಯಾಂಪಾ: ಸೂರ್ಯನ ಸಮೀಪಕ್ಕೆ ತೆರಳಿ ಅಧ್ಯಯನ ನಡೆಸುವ ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ)ಯ ‘ದಿ ಪಾರ್ಕರ್​ ಸೋಲಾರ್​ ಪ್ರೋಬ್​’ ಗಗನ ನೌಕೆ ಉಡಾವಣೆ ತಾಂತ್ರಿಕ ಕಾರಣದಿಂದಾಗಿ ಮುಂದೂಡಲ್ಪಟ್ಟಿದೆ.

ಶನಿವಾರ ಬೆಳಗಿನ ಜಾವ 3.33 ಕ್ಕೆ (ಸ್ಥಳೀಯ ಕಾಲಮಾನ) ಡೆಲ್ಟಾ 4 ರಾಕೆಟ್​ ಗಗನ ನೌಕೆಯನ್ನು ಹೊತ್ತು ನಭಕ್ಕೆ ಚಿಮ್ಮಬೇಕಿತ್ತು. ಆದರೆ, ಕೊನೇ ಕ್ಷಣದಲ್ಲಿ ಕಾಣಿಸಿಕೊಂಡ ತಾಂತ್ರಿಕ ಕಾರಣದಿಂದಾಗಿ ಉಡಾವಣೆ ಸ್ಥಗಿತಗೊಂಡಿದೆ. ಭಾನುವಾರ ಬೆಳಗಿನ ಜಾವ 3.31 ಕ್ಕೆ (ಸ್ಥಳೀಯ ಕಾಲಮಾನ) ಗಗನ ನೌಕೆ ಉಡಾವಣೆ ಮಾಡಲಾಗುವುದು. ವಾತಾವರಣ ಶೇ. 60 ರಷ್ಟು ಅನುಕೂಲಕರವಾಗಿದೆ ಎಂದು ನಾಸಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸುಮಾರು 10,334 ಕೋಟಿ ರೂ. (1.5 ಬಿಲಿಯನ್​ ಡಾಲರ್​) ವೆಚ್ಚದಲ್ಲಿ ನಿರ್ಮಿಸಲಾಗಿರುವ ಅತ್ಯಾಧುನಿಕ ಅಧ್ಯಯನ ಗಗನ ನೌಕೆಯ ಉಡಾವಣೆಗೆ ನಾಸಾ ಇಂಜಿನಿಯರ್​ಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಿದ್ದಾರೆ. ಇದೊಂದು ಅತ್ಯಂತ ಮಹತ್ವದ ಯೋಜನೆಯಾಗಿದೆ ಎಂದು ನಾಸಾ ತಿಳಿಸಿದೆ. (ಏಜೆನ್ಸೀಸ್​)

ಸೂರ್ಯನ ಅಧ್ಯಯನಕ್ಕೆ ‘ಪಾರ್ಕರ್​’ ಶೋಧ ನೌಕೆ ಉಡಾವಣೆಗೆ ಕ್ಷಣಗಣನೆ ಆರಂಭ