ನವದೆಹಲಿ: ಭಾರತದ ಇಸ್ರೊ ಮತ್ತು ಅಮೆರಿಕದ ನಾಸಾ ಪಾಲುದಾರಿಕೆಯ ನಿಸಾರ್ ಉಪಗ್ರಹ ಉಡಾವಣೆ 2023ರಲ್ಲಿ ನಡೆಯಲಿದೆ. ಭಾರತ ಮತ್ತು ಅಮೆರಿಕ ನಡುವೆ ಈ ಸಂಬಂಧ 2014ರಲ್ಲಿ ಒಪ್ಪಂದ ಏರ್ಪಟ್ಟಿತ್ತು ಎಂದು ಇಸ್ರೊ ಅಧ್ಯಕ್ಷ ಕೆ. ಶಿವನ್ ತಿಳಿಸಿದ್ದಾರೆ.
ಭಾರತ-ಅಮೆರಿಕ ಒಪ್ಪಂದ ಪ್ರಕಾರ ಎರಡು ರಾಡಾರ್ ಹೊಂದಿರುವ ಜಗತ್ತಿನ ಮೊದಲ ಭೂ ವೀಕ್ಷಣಾ ಉಪಗ್ರಹವನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಉಪಗ್ರಹವು ಹೈ ರೆಸೊಲ್ಯೂಷನ್ ಚಿತ್ರಗಳನ್ನು ಸೆರೆ ಹಿಡಿಯುವ ಸಾಮರ್ಥ್ಯ ಹೊಂದಿರಲಿದೆ. 2022ರ ಅಂತ್ಯಕ್ಕೆ ಉಪಗ್ರಹ ಸಂಪೂರ್ಣವಾಗಿ ಸಿದ್ಧವಾಗಲಿದೆ. 2023ರಲ್ಲಿ ಉಡಾವಣೆ ನಡೆಯಲಿದೆ.
ನಿಸಾರ್ ಎಂದರೆ…: ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೊ) ಎಸ್-ಬ್ಯಾಂಡ್ ಸಿಂಥೆಟಿಕ್ ಅಪರ್ಚರ್ ರಾಡಾರ್ (ಖಅ) ಅಭಿವೃದ್ಧಿಪಡಿಸಿದೆ. ಇದನ್ನು ಅಮೆರಿಕಕ್ಕೆ ಕೊಂಡೊಯ್ದು ಅಲ್ಲಿ ಎಲ್-ಬ್ಯಾಂಡ್ ಪೇಲೋಡ್ ಸೇರಿಸುವ ಕೆಲಸವನ್ನು ನಾಸಾ ಮಾಡುತ್ತಿದೆ. ನಂತರ ಇದನ್ನು ಮತ್ತೆ ಭಾರತಕ್ಕೆ ರವಾನಿಸಲಾಗುತ್ತದೆ. ಭಾರತದಲ್ಲಿ ಉಳಿದ ಭಾಗಗಳನ್ನು ಜೋಡಿಸುವ ಕೆಲಸ ನಡೆಯುತ್ತದೆ. ‘ಘಚಠಚಐಠ್ಟಟ ಖಅ’ ಉಪಗ್ರಹ ಎಂಬುದನ್ನು ಸಂಕ್ಷಿಪ್ತವಾಗಿ ‘ಘಐಖಅ’ ಎಂದು ಗುರುತಿಸಲಾಗುತ್ತಿದೆ. ನಿಸಾರ್ನ ತೂಕ 2,800 ಕಿಲೋ ಆಗಿರಲಿದ್ದು, ಜಗತ್ತಿನ ಅತ್ಯಂತ ದುಬಾರಿ ಇಮೇಜಿಂಗ್ ಉಪಗ್ರಹ ಎಂದು ಗುರುತಿಸಲ್ಪಟ್ಟಿದೆ.
ಉಪಗ್ರಹದ ಕಾರ್ಯವೇನು?: ನಿಸಾರ್ ಉಪಗ್ರಹವು ಎರಡು ರೇಡಿಯೋ ತರಂಗಾಂತರ ಹೊಂದಿದ್ದು, ಎಲ್ಲ ರೀತಿಯ ಹವಾಮಾನದಲ್ಲೂ ಹಗಲು ಮತ್ತು ರಾತ್ರಿ ವೇಳೆ ಭೂಮಿಯ ದತ್ತಾಂಶ ಸಂಗ್ರಹಿಸಿ ರವಾನಿಸುವ ಕೆಲಸ ಮಾಡುತ್ತದೆ. ಜಗತ್ತಿನಾದ್ಯಂತ ಇರುವ ಪ್ರಕೃತಿ ಸಂಪನ್ಮೂಲಗಳನ್ನು ಸಮರ್ಥವಾಗಿ ಬಳಸಿಕೊಳ್ಳುವುದಕ್ಕೆ ಮತ್ತು ಭೂಕಂಪ, ಸುನಾಮಿ, ಜ್ವಾಲಾಮುಖಿ ಮತ್ತು ಭೂಕುಸಿತ ಮುಂತಾದ ವಿಪತ್ತುಗಳ ನಿರ್ವಹಣೆಗೂ ಇದು ನೆರವಾಗಲಿದೆ. ಭೂಮಿಯ ಮೇಲ್ಮೈಯ ಬದಲಾವಣೆಯನ್ನು ಸೆಂಟಿಮೀಟರ್ಗೂ ಚಿಕ್ಕ ಪ್ರಮಾಣದ ಅಳತೆಯಲ್ಲೂ ದಾಖಲಿಸಬಲ್ಲ ಸಾಮರ್ಥ್ಯವನ್ನು ಅದು ಹೊಂದಿದೆ.