ಬೋಳಂತೂರು ಸಮೀಪದ ನಾರ್ಶದ ಉದ್ಯಮಿ ಸುಲೈಮಾನ್ ಹಾಜಿ ಮನೆಯಲ್ಲಿ ಜಾರಿ ನಿರ್ದೇಶನಾಲಯ ಅಽಕಾರಿಗಳ ಸೋಗಿನಲ್ಲಿ ದರೋಡೆ ನಡೆಸಿದ ಪ್ರಕರಣದಲ್ಲಿ ಭಾಗಿಯಾದ ಕೇರಳ ಎಎಸ್‌ಐ ಸಹಿತ ನಾಲ್ವರನ್ನು ಪೊಲೀಸರು ಬಂಽಸಿದ್ದಾರೆ. ಹಣ ಕೇಳಿದ್ದಕ್ಕೆ ನೀಡದ ಸಿಟ್ಟಿಗೊಂಡು ಕೃತ್ಯ ನಡೆಸಲಾಗಿದೆ ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.
ಕೃತ್ಯದ ಸೂತ್ರದಾರ ಕೊಡಂಗಲ್ಲೂರು ಠಾಣೆ ಸಹಾಯಕ ಪೊಲೀಸ್ ಉಪನಿರೀಕ್ಷಕ ಶಫೀರ್ ಬಾಬು(೪೮), ಕೊಳ್ನಾಡು ನಿವಾಸಿ ಸಿರಾಜುದ್ದೀನ್(೩೭), ಬಂಟ್ವಾಳ ನಿವಾಸಿ ಮೊಹಮ್ಮದ್ ಇಕ್ಬಾಲ್(೩೮), ಪಡೀಲ್ ನಿವಾಸಿ ಮೊಹಮ್ಮದ್ ಅನ್ಸಾರ್(೨೭) ಎಂಬುವರನ್ನು ಬಂಽಸಲಾಗಿದೆ.
ಸುಲೈಮಾನ್ ಹಾಜಿ ಅವರ ಬೀಡಿ ಉದ್ಯಮದಲ್ಲಿ ಸಿರಾಜುದ್ದೀನ್ ಮೂರು ವರ್ಷದ ಹಿಂದೆ ಕಾರ್ಮಿಕನಾಗಿದ್ದು, ಹಣ ಕೇಳಿ ಸಿಗದಿದ್ದಕ್ಕೆ ಕೋಪಗೊಂಡಿದ್ದನು. ಮಾಲೀಕನ ಕೈಯಿಂದ ಹೇಗಾದರೂ ಹಣ ವಸೂಲು ಮಾಡಿಯೇ ಸಿದ್ಧ ಎಂದು ಶಪಥ ತೊಟ್ಟಿದ್ದಲ್ಲದೆ, ಜಾರಿ ನಿರ್ದೇಶನಾಲಯಕ್ಕೆ ದೂರು ನೀಡುವುದಾಗಿಯೂ ಹಲವರಲ್ಲಿ ಹೇಳಿಕೊಂಡಿದ್ದನು ಎನ್ನಲಾಗಿದೆ. ಈ ವಿಷಯವನ್ನು ತಿಳಿದ ಸ್ಥಳೀಯರು, ಕೇರಳದ ಪೊಲೀಸ್ ಅಽಕಾರಿ ಜತೆಗೆ ಸಿರಾಜುದ್ದೀನ್ ಸಂಪರ್ಕ ಮಾಡಿಸಿದ್ದರು.
ಎಎಸ್‌ಐ ಶಫೀರ್ ಬಾಬು ಇ.ಡಿ ತಂಡ ಕಟ್ಟಿಕೊಂಡು ಮಂಗಳೂರಿಗೆ ಬಂದು ಯಾವ ರೀತಿ ಯೋಜನೆ ರೂಪಿಸಬೇಕೆಂದು ಮಾರ್ಗದರ್ಶನ ಮಾಡುತ್ತಿದ್ದನು. ಜಾರಿ ನಿರ್ದೇಶನಾಲಯದ ಅಽಕಾರಿಗಳಂತೆ ನಟಿಸಲು ಮತ್ತು ದರೋಡೆ ನಡೆಸಲು ತರಬೇತಿ ನೀಡಿದ್ದಲ್ಲದೆ, ತಪ್ಪಿಸಿಕೊಳ್ಳಲು ಬೇಕಾದ ಸಮಗ್ರ ಮಾಹಿತಿಯನ್ನು ಕಳ್ಳರಿಗೆ ನೀಡಿದ್ದನು. ಇದಕ್ಕಾಗಿ ಕೆಲದಿನ ಕರ್ತವ್ಯಕ್ಕೆ ರಜೆ ಹಾಕಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಽಸಿ ಈಗಾಗಲೇ ಕೇರಳದ ಕೊಟ್ಟಾಯಂ ನಿವಾಸಿ ಅನಿಲ್ -ರ್ನಾಂಡಿಸ್, ಸಚಿನ್ ಮತ್ತು ಶಬಿನ್ ಎಂಬುವರನ್ನು ಪೊಲೀಸರು ಬಂಽಸಿದ್ದಾರೆ. ಇದೀಗ ನಾಲ್ವರನ್ನು ಬಂಽಸಲಾಗಿದ್ದು, ಬಂಽತರ ಸಂಖ್ಯೆ ೭ಕ್ಕೆ ಏರಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಇಡಿ ಅಽಕಾರಿಯಂತೆ ನಟಿಸಿದ ಪ್ರಮುಖ ವ್ಯಕ್ತಿಗೆ ಶೋಧ ನಡೆಯುತ್ತಿದೆ.
ಇಲಾಖೆಯಲ್ಲಿದ್ದುಕೊಂಡೇ ಕೃತ್ಯ
ಎಎಸ್‌ಐ ಶಫೀರ್ ಬಾಬು ಕೃತ್ಯ ನಡೆದ ಬಳಿಕ ತನ್ನ ಪಾಲಿನ ಮೊತ್ತ ಪಡೆದುಕೊಂಡು ಊರಿಗೆ ಹಿಂತಿರುಗಿ ಎಂದಿನಂತೆ ಪೊಲೀಸ್ ಕೆಲಸಕ್ಕೆ ಹಾಜರಾಗುತ್ತಿದ್ದನು. ವಿಟ್ಲ ಪೊಲೀಸರು ತಂಡ ರಚಿಸಿ, ಖಚಿತ ಮಾಹಿತಿಯೊಂದಿಗೆ ಕೇರಳಕ್ಕೆ ತೆರಳಿ ದಾಳಿ ಮಾಡುವ ಮಾಹಿತಿ ಆತನಿಗೆ ತಿಳಿದು, ದರೋಡೆಕೋರರು ಪರಾರಿಯಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದನು. ಜತೆಗೆ ಪೊಲೀಸರ ತನಿಖೆಯ ಹಾದಿ ತಪ್ಪಿಸಲು ಬೇಕಾದ ಎಲ್ಲ ಪ್ರಯತ್ನಗಳನ್ನು ಇಲಾಖೆಯಲ್ಲಿದ್ದುಕೊಂಡೇ ಮಾಡಿದ್ದನು.