ನವದೆಹಲಿ: ಸುನೀಲ್ ನಾರಾಯಣ್ (27 ರನ್, 16 ಎಸೆತ, 2 ಬೌಂಡರಿ, 2 ಸಿಕ್ಸರ್ ಹಾಗೂ 29ಕ್ಕೆ 3) ಆಲ್ರೌಂಡ್ ನಿರ್ವಹಣೆಯ ಬಲದಿಂದ ಹಾಲಿ ಚಾಂಪಿಯನ್ ಕೋಲ್ಕತ ನೈಟ್ ರೈಡರ್ಸ್ ಐಪಿಎಲ್ 18ನೇ ಆವೃತ್ತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎದುರು 14 ರನ್‌ಗಳ ಗೆಲುವು ಒಲಿಸಿಕೊಂಡಿದೆ. ಇದರೊಂದಿಗೆ ಅಜಿಂಕ್ಯ ರಹಾನೆ ಪಡೆ ಟೂರ್ನಿಯ 4ನೇ ಗೆಲುವಿನೊಂದಿಗೆ ಪ್ಲೇಆ್ ಆಸೆ ಜೀವಂತವಿರಿಸಿದೆ.

ಫಿರೋಜ್ ಷಾ ಕೋಟ್ಲಾ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್‌ಗೆ ಇಳಿದ ಕೆಕೆಆರ್ ಭರ್ಜರಿ ಆರಂಭ ಪಡೆಯಿತು. ನಂತರ ಅಂಗಕ್ರಿಶ್ ರಘುವಂಶಿ ಹಾಗೂ ರಿಂಕು ಸಿಂಗ್ (36) ಜತೆಯಾಟದ ನೆರವಿನಿಂದ 9 ವಿಕೆಟ್‌ಗೆ 204 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ಪ್ರತಿಯಾಗಿ ಚೇಸಿಂಗ್‌ನಲ್ಲಿ ಉಪನಾಯಕ ್ಾ ಡುಪ್ಲೆಸಿಸ್ (62 ರನ್, 45 ಎಸೆತ, 7 ಬೌಂಡರಿ, 2 ಸಿಕ್ಸರ್) ಹಾಗೂ ನಾಯಕ ಅಕ್ಷರ್ ಪಟೇಲ್ (43 ರನ್, 23 ಎಸೆತ, 4 ಬೌಂಡರಿ, 3 ಸಿಕ್ಸರ್) ಜತೆಯಾಟದ ನೆರವಿನಿಂದ 4 ವಿಕೆಟ್‌ಗೆ 136 ರನ್‌ಗಳಿಸಿ ಸುಸ್ಥಿತಿಯಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್ ನಂತರ ದಿಢೀರ್ ಕುಸಿಯಿತು. ಅಂತಿಮವಾಗಿ 9 ವಿಕೆಟ್‌ಗೆ 190 ರನ್‌ಗಳಿಸಿ ಸೋಲೊಪ್ಪಿಕೊಂಡಿತು. ಕೊನೆಯಲ್ಲಿ ವಿಪ್ರಜ್ ನಿಗಮ್ (38) ಹೋರಾಟ ಸೋಲಿನ ಅಂತರ ತಗ್ಗಿಸಿತು. ಆಂಡ್ರೆ ರಸೆಲ್ ಎಸೆದ ಅಂತಿಮ ಓವರ್‌ನಲ್ಲಿ ಡೆಲ್ಲಿ ಗೆಲುವಿಗೆ 25 ರನ್ ಅವಶ್ಯವಿತ್ತು.