ಶಿವಮೊಗ್ಗ: ನರೇಂದ್ರ ಮೋದಿ ನವಭಾರತದ ಪ್ರವರ್ತಕ ಎನಿಸಿದ್ದಾರೆ. ಶತ್ರು ರಾಷ್ಟ್ರಗಳೊಂದಿಗೆ ವ್ಯವಹರಿಸುವಾಗ ದೇಶದ ನಿಲುವನ್ನು ಸ್ಪಷ್ಟವಾಗಿ ಪ್ರತಿಪಾದಿಸುತ್ತಿರುವುದು ಅವರ ವಿಶೇಷ ಎಂದು ಬಿ.ವೈ.ರಾಘವೇಂದ್ರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಡಿಯಲ್ಲಿ ಚೀನಾ ಕಿರಿಕಿರಿ ಮಾಡಿದಾಗ ಕೈಗೊಂಡ ರಾಜತಾಂತ್ರಿಕ ನಿರ್ಣಯ, ಪಾಕಿಸ್ತಾನದ ಮೇಲಿನ ಸರ್ಜಿಕಲ್ ಸ್ಟ್ರೈಕ್, ತೀರಾ ಇತ್ತೀಚೆಗೆ ಆಪರೇಷನ್ ಸಿಂಧೂರ್‌ನಲ್ಲಿ ಭಾರತದ ಸಾಮರ್ಥ್ಯವನ್ನು ಶತ್ರುರಾಷ್ಟ್ರಕ್ಕೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಮೋದಿ ಅವರಿಗೆ ಸೇರುತ್ತದೆ ಎಂದರು.
ಕೇಂದ್ರ ಸರ್ಕಾರ ಈ ಬಾರಿಯ ಬಜೆಟ್‌ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದೆ. ಮೂಲಸೌಕರ್ಯ ಅಭಿವೃದ್ಧಿಯಿಂದ ಆರ್ಥಿಕವಾಗಿ ಸಶಕ್ತವಾಗಲು ಸಾಧ್ಯ ಎಂಬುದನ್ನು ಮೋದಿ ಮನಗಂಡಿದ್ದಾರೆ. ಕರೊನಾ ನಿರ್ವಹಣೆಯಲ್ಲಿ ಕೇಂದ್ರದ ಪಾತ್ರ ಶ್ಲಾಘನೀಯವಾಗಿತ್ತು. ಅಂತಹ ಬಿಕ್ಕಟ್ಟಿನ ಸಂದರ್ಭದಲ್ಲೂ ದೇಶದ ಆರ್ಥಿಕ ಪ್ರಗತಿಗೆ ಹಿನ್ನಡೆಯಾಗದಂತೆ ನೋಡಿಕೊಂಡಿದ್ದು ಕೇಂದ್ರದ ಸಾಧನೆ ಎಂದು ಬಿವೈಆರ್ ಅಭಿಪ್ರಾಯಪಟ್ಟರು.