ಕಾಂಗ್ರೆಸ್ ಸರ್ಕಾರವು ಮಕ್ಕಳು ಮತ್ತು ಗರ್ಭಿಣಿಯರ ಹಣ ಲೂಟಿ ಮಾಡಿದೆ: ಸಿಎಂ ಕುಮಾರಸ್ವಾಮಿ ದೇಶದ ಯೋಧರನ್ನು ಅವಮಾನಿಸಿದ್ದಾರೆ ಎಂದ ಪ್ರಧಾನಿ ಮೋದಿ

ಗಂಗಾವತಿ: ಈ ಹಿಂದೆ ನಾನು ಪಿಎಂ ಆದ್ರೆ ರಾಜಕಿಯ ಸನ್ಯಾಸ ತಗೋತಿನಿ ಅಂತಾ ಸ್ವತಃ ದೇವೇಗೌಡ ಹೇಳಿದ್ರು. ಆದರೆ, ರಾಜಕೀಯ ಸನ್ಯಾಸ ತೊಳ್ಳಲಿಲ್ಲ, ಕುಟುಂಬದ ಎಲ್ಲರಿಗೂ ಟಿಕೆಟ್ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ. ಈ ಮೊದಲು 10 ಪರಸೆಂಟ್ ಸರ್ಕಾರ ಇತ್ತು. ಇವಾಗ ಮತ್ತೊಂದು 10 ಪರಸೆಂಟ್ ಸೇರಿ 20 ಪರಸೆಂಟ್ ಸರ್ಕಾರ ಆಗಿದೆ.

ಮತ್ತೆ ಆಶೀರ್ವಾದ ಕೇಳಲು ಬಂದಿದ್ದೇನೆ. ನನಗೆ ಈ ಮೂರು ಲೋಕಸಭೆಯಿಂದ ಇಡೀ ಕರ್ನಾಟಕದಿಂದ ಆಶೀರ್ವಾದ ಸಿಗುತ್ತೆ. ನಿಮ್ಮ ಪ್ರೀತಿ ನನ್ನ ತಲೆ ಮೇಲಿರತ್ತೆ. ನಿಮ್ಮ ಪ್ರೀತಿ ದೆಹಲಿಯಲ್ಲಿ ಕುಳಿತಿರೋ ಜನರ ನಿದ್ರೆ ಕದ್ದಿದೆ. ಅವರು ಹತಾಶರಾಗಿದ್ದಾರೆ.

ಕಾಂಗ್ರೆಸ್ ಸರ್ಕಾರವು ಮಕ್ಕಳು ಮತ್ತು ಗರ್ಭಿಣಿಯರ ಹಣ ಲೂಟಿ ಮಾಡಿದೆ. ದೆಹಲಿಯಲ್ಲಿ ತುಗಲಕ್ ರೋಡ್ ಇದೆ. ಅಲ್ಲಿ ಒಬ್ಬ ನಾಯಕನ ಮನೆ ಇದೆ. ಮಧ್ಯಪ್ರದೇಶ ಸರ್ಕಾರ ಬಡ ಮಕ್ಕಳ ಹಣ ನುಂಗಿ ಹಾಕಿದೆ. ಬಡ ಮಕ್ಕಳ ಅನ್ನದಲ್ಲೂ ಭ್ರಷ್ಟಾಚಾರ ಮಾಡಲಾಗಿದೆ.

ಕರ್ನಾಟಕದ ಸಿಎಂ ಹೇಳಿದ್ದಾರೆ, ದಿನಕ್ಕೆ ಎರಡು ಹೊತ್ತು ಊಟ ಸಿಗದವರು ಸೇನೆಗೆ ಹೋಗ್ತಾರಂತೆ. ಏನ್ ರೀ ಕುಮಾರಸ್ವಾಮಿ, ದೇಶದ ಸೈನ್ಯಕ್ಕೆ ಇಂಥ ದೊಡ್ಡ ಅಪಮಾನ ಮಾಡ್ತಿರಾ?

ಇವರಿಗೆ ಟಿಪ್ಪು ಸುಲ್ತಾನ ಜಯಂತಿಗೆ ಹಣ ಇದೆ. ಹಂಪಿ ಉತ್ಸವ ಮಾಡಲು ಹಣ ಇಲ್ಲವಂತೆ. ಕಿಸಾನ್ ಸಮ್ಮಾನ ಯೋಜನೆಗಾಗಿ ಈ ಸರ್ಕಾರ ರೈತರ ಲಿಸ್ಟ್ ಕಳಿಸ್ತಿಲ್ಲ. ಮತ್ತೇ ಮೋದಿ ಸರ್ಕಾರ ಬಂದ್ರೆ ಕಿಸಾನ್ ಸಮ್ಮಾನ ಯೋಜನೆ ಹಣ ನಿಮ್ಮ ಖಾತೆಗೆ ಬರಲಿದೆ.

ಮುಂದಿನ ಐದು ವರ್ಷದಲ್ಲಿ ನೀರಿಗಾಗಿ ಕೆಲಸ ಮಾಡಲಾಗುವುದು. ನೀರಿನ ಪ್ರತ್ಯೇಕ ಸಚಿವಾಲಯ ಮಾಡಲಾಗುವುದು. ತುಂಗಭದ್ರಾ ಯೋಜನೆಯ ಪೂರ್ಣಗೊಳಿಸಲು ಸರ್ಕಾರ ಬದ್ಧ ಎಂದರು.

Leave a Reply

Your email address will not be published. Required fields are marked *