VIDEO | ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ? ಬೆಟ್ಟದ ದೇವೀರಮ್ಮನ ಹೂವಿನ ಭವಿಷ್ಯ ಹೀಗಿದೆ…

ಚಿಕ್ಕಮಗಳೂರು: ಬೆಟ್ಟದ ಶಕ್ತಿ ದೇವತೆ ದೇವೀರಮ್ಮ ದೇವಿ ನರೇಂದ್ರ ಮೋದಿಯವರಿಗೆ ಆಶೀರ್ವಾದ ಮಾಡಿದ್ದಾಳೆ. ಅವರು ಮತ್ತೆ ಪ್ರಧಾನಿಯಾಗಲಿ ಎಂದು ಹರಸಿದ್ದಾಳೆ. ಹೇಗೇ ಅಂತೀರಾ? ಈ ವಿಡಿಯೋವನ್ನು ನೀವೇ ನೋಡಿ.

ಬೆಟ್ಟದ ಮೇಲಿರುವ ದೇವೀರಮ್ಮ ದೇವಿ ಮಹಾಮಹಿಮಳು, ಭವಿಷ್ಯ ನುಡಿಯುತ್ತಾಳೆ ಎಂಬ ಪ್ರತೀತಿ ಇದೆ. ಇಲ್ಲಿ ಪ್ರತಿ ನರಕ ಚತುರ್ದಶಿಯಂದು ಜಾತ್ರೆ, ದೀಪೋತ್ಸವ ಕೂಡ ನಡೆಯುತ್ತದೆ.

ಈಗ ದೇವೀರಮ್ಮ ನರೇಂದ್ರ ಮೋದಿಯವರಿಗೆ ಬಲಗಡೆಯ ಹೂವು ಕೊಡುವ ಮೂಲಕ ಮತ್ತೆ ಪ್ರಧಾನಿಯಾಗುವಂತೆ ಆಶೀರ್ವಾದ ಮಾಡಿದ್ದಾಳೆ ಎಂದು ಅಲ್ಲಿ ಪೂಜೆ ಮಾಡುವ ಅರ್ಚಕರೇ ತಿಳಿಸಿದ್ದಾರೆ.
ಈವರೆಗೆ ದೇವಿಯ ಬಳಿ ಯಾವುದೇ ವರ ಬೇಡಿಕೊಂಡು ಹೂವು ಕೇಳಿದಾಗ ಅವಳು ಬಲಗಡೆಯಿಂದ ಹೂವು ಕೊಟ್ಟಾಗ ಇಷ್ಟಾರ್ಥಗಳು ಈಡೇರಿವೆ. ಅಂದುಕೊಂಡಿದ್ದು ಆಗಿದೆ. ಎಡಗಡೆಯಿಂದ ಹೂವು ಕೊಟ್ಟಾಗ ನೆರವೇರಿಲ್ಲ. ಹಾಗೇ ಈ ಬಾರಿ ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರೆ ಎಂದಾದರೆ ಹೂವು ಕೊಡು ಎಂದು ಅರ್ಚಕರು ಕೋರಿಕೆ ಇಡುತ್ತಿದ್ದಂತೆ ದೇವಿ ಬಲಗಡೆಯಿಂದ ಹೂವು ನೀಡಿದ್ದಾಳೆ. ಈ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ.

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ ಎಂಬ ಅರ್ಚಕರ ಪ್ರಶ್ನೆಗೆ ಬಲಗಡೆಯಿಂದ ಹೂವು ಕೊಟ್ಟ ದೇವಿ…

ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗುತ್ತಾರಾ ಎಂಬ ಅರ್ಚಕರ ಪ್ರಶ್ನೆಗೆ ಬಲಗಡೆಯಿಂದ ಹೂವು ಕೊಟ್ಟು ಹರಸಿದ ದೇವಿ..

Vijayavani ಅವರಿಂದ ಈ ದಿನದಂದು ಪೋಸ್ಟ್ ಮಾಡಲಾಗಿದೆ ಶನಿವಾರ, ಏಪ್ರಿಲ್ 20, 2019

Leave a Reply

Your email address will not be published. Required fields are marked *