ಚುನಾವಣೆ ನಂತರ ಸಮ್ಮಿಶ್ರ ಸರ್ಕಾರ ಪತನ

ಕೆರೂರ: ಐದು ವರ್ಷದ ನರೇಂದ್ರ ಮೋದಿ ಆಡಳಿತ ಸುವರ್ಣ ಯುಗವಾಗಿದ್ದು, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳು ತಲುಪುವಂತೆ ಮಾಡಿದ ದೇಶದ ಮೊಟ್ಟಮೊದಲ ಸರ್ಕಾರವಾಗಿದೆ ಎಂದು ಮಾಜಿ ಸಚಿವ ಬಿ. ಶ್ರೀರಾಮಲು ಹೇಳಿದರು.

ಕೆರೂರ ಪಟ್ಟಣದಲ್ಲಿ ತರಕಾರಿ ಮಾರುಕಟ್ಟೆಯಲ್ಲಿ ಬುಧವಾರ ಸಾರ್ವಜನಿಕ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಚುನಾವಣೆ ಬಳಿಕ ರಾಜ್ಯದ ಸಮ್ಮಿಶ್ರ ಸರ್ಕಾರ ಪತನವಾಗಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಾರೆ. ಅವರ ಸಚಿವ ಸಂಪುಟದಲ್ಲಿ ನಾನು ಹಾಗೂ ಮುರುಗೇಶ ನಿರಾಣಿ ಸಚಿವರಾಗುತ್ತೇವೆಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಮಾತನಾಡಿ, ಜಿಲ್ಲಾ ಪುನರ್ವಿಂಗಡನೆ ಸಮಿತಿ ಅಧ್ಯಕ್ಷನಾಗಿ, ವಿಧಾನ ಪರಿಷತ್ ಸದಸ್ಯನಾಗಿ ಮಾಡಿದ ಪ್ರಾಮಾಣಿಕ ಸೇವೆ ಕಂಡು ಕ್ಷೇತ್ರದ ಜನರು ಮೂರು ಬಾರಿ ಲೋಕಸಭೆಗೆ ಕಳಿಸಿದ್ದಾರೆ. ಈ ಅವಧಿಯಲ್ಲಿ ಜನಪರ ಕಾರ್ಯ ಮಾಡಿದ್ದು, ಮತ್ತೊಮ್ಮೆ ಆಶೀರ್ವದಿಸಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಮುರುಗೇಶ ನಿರಾಣಿ ಮಾತನಾಡಿದರು. ಮಾಜಿ ಶಾಸಕರಾದ ಎಂ.ಕೆ. ಪಟ್ಟಣಶೆಟ್ಟಿ, ರಾಜಶೇಖರ ಶೀಲವಂತರ, ಮಲ್ಲಿಕಾರ್ಜುನ ಬನ್ನಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಹಾಂತೇಶ ಮಮದಾಪೂರ, ಪ.ಪಂ. ಮಾಜಿ ಅಧ್ಯಕ್ಷ ಲಾಕೋಪತಿ ಹೊಸಪೇಟೆ, ಸದಾನಂದ ಮದಿ ಹಾಗೂ ಗಣ್ಯರಾದ ಗಂಗಾಧರ ಘಟ್ಟದ, ಅಶೋಕ ಜಿಗಳೂರ, ಚಿನ್ನಪ್ಪ ಶರೋಳ, ಪರಶುರಾಮ ಮಲ್ಲಾಡದ, ಪ್ರಮೋದ ಪೂಜಾರ, ಸಿದ್ದು ಕೊಣ್ಣೂರ, ಕಾಂತೇಶ ವಿಜಾಪೂರ, ಅರುಣ ಕಟ್ಟಿಮನಿ, ಶರಣು ಸಜ್ಜನ, ರಮೇಶ ಕೊಣ್ಣೂರ ಮತ್ತಿತರಿದ್ದರು.