ನವದೆಹಲಿ: ರೈತ ಹೋರಾಟದ ಬೆನ್ನಲ್ಲೇ ಕೇಂದ್ರ ಸಚಿವ ಸಂಪುಟದ ಅಧಿವೇಶನ ನಡೆದಿದ್ದು, ಕೆಲವು ಮಹತ್ತರ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ. ದೇಶದಲ್ಲಿ ಸಾರ್ವಜನಿಕ ವೈಫೈ ಸೌಲಭ್ಯ ಒದಗಿಸುವ ಪ್ರಸ್ತಾವನೆಗೆ ಪ್ರಧಾನಿಯವರ ಸಂಪುಟ ಒಪ್ಪಿಗೆ ಸೂಚಿಸಿದೆ.

ಇದನ್ನೂ ಓದಿ: ಒಂದತ್ತ ಹೋರಾಟ, ಇನ್ನೊಂದತ್ತ ಧರಣಿ! ಸಿಎಂ ಮನೆ ಮುಂದೆ ಧರಣಿ ಕುಳಿತ ಗೌತಮ್ ಗಂಭೀರ್
ಸಾರ್ವಜನಿಕ ವೈಫೈ ಬಲಪಡಿಸುವ ಉದ್ದೇಶದಿಂದ ದೇಶದಾದ್ಯಂತ ಸಾರ್ವಜನಿಕ ವೈಫೈ ನೆಟ್ವರ್ಕ್ಗಳನ್ನು ಸ್ಥಾಪಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಇದನ್ನು ಪಬ್ಲಿಕ್ ಡಾಟಾ ಆಫೀಸ್ ಅಗ್ರಿಗೇಟರ್ಸ್ (ಪಿಡಿಒಎ) ಮಾಡಲಿದೆ. ಎಲ್ಲೆಡೆ ಹರಡಿರುವ ಪಬ್ಲಿಕ್ ಡಾಟಾ ಆಫೀಸ್ (ಪಿಡಿಒ) ಮೂಲಕ ಸಾರ್ವಜನಿಕ ವೈಫೈ ಸೇವೆಯನ್ನು ಒದಗಿಸಲಾಗುತ್ತದೆ. ಈ ಯೋಜನೆಯನ್ನು ಪಿಎಂ-ವಾಣಿ ಎಂದು ಕರೆಯಲಾಗುವುದು. ಇದು ದೇಶದಲ್ಲಿನ ವೈಫೈ ಕ್ರಾಂತಿಯಾಗಲಿದೆ ಎಂದು ಕೇಂದ್ರ ಸಚಿವ ರವಿಶಂಕರ್ ತಿಳಿಸಿದ್ದಾರೆ.
ಇದನ್ನೂ ಓದಿ: ರೈತ ಹೋರಾಟಕ್ಕೆ ಮತ್ತೋರ್ವ ರೈತ ಬಲಿ! ಈವರೆಗೆ ಐದು ರೈತರ ಕೊನೆಯುಸಿರು
ದೇಶಾದ್ಯಂತ ಒಂದು ಕೋಟಿ ಪಿಡಿಒ ಕಚೇರಿಗಳನ್ನು ತೆರೆಯಲಾಗುವುದು. ಈ ಕಚೇರಿ ತೆರೆಯಲು ಯಾವುದೇ ಪರವಾನಗಿ ಅವಶ್ಯಕತೆ ಇಲ್ಲ. ನೋಂದಣಿ ಮತ್ತು ಶುಲ್ಕವಿಲ್ಲದೆಯೇ ಪಿಡಿಒ ತೆರೆಯಬಹುದು. ಸಣ್ಣ ಅಂಗಡಿ ಅಥವಾ ಸಾಮಾನ್ಯ ಸೇವಾ ಕೇಂದ್ರಗಳನ್ನೇ ಪಿಡಿಒಗಳಾಗಿ ಬದಲಾಯಿಸಬಹುದು ಎಂದು ಅವರು ಹೇಳಿದರು.
ಇದರ ಜತೆ ಲಕ್ಷದ್ವೀಪಕ್ಕೆ ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಒದಗಿಸಲು ಸಾಗರದೊಳಗಿಂದ ಜಲಾಂತರ್ಗಾಮಿ ಆಪ್ಟಿಕಲ್ ಫೈಬರ್ ಕೇಬಲ್ ಹಾಕಲು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಮುಂದಿನ 1000 ದಿನಗಳಲ್ಲಿ ಕೊಚ್ಚಿಯಿಂದ 11 ದ್ವೀಪಗಳಿಗೆ ಫೈಬರ್ ಕಲೆಕ್ಷನ್ ನೀಡಲಾಗುವುದು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)
ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ
ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ