ನರೇಂದ್ರ ಮೋದಿಯವರ ಸಂದರ್ಶನ ಮಾಡಿದ ಅಕ್ಷಯ್ ಕುಮಾರ್​ ಅವರ ವಿರುದ್ಧ ನಟ ಸಿದ್ಧಾರ್ಥ್​ ಕೋಪ…

ಮುಂಬೈ: ನರೇಂದ್ರ ಮೋದಿಯವರೊಂದಿಗೆ ರಾಜಕೀಯೇತರ ಮಾತುಕತೆ ನಡೆಸಿದ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ವಿರುದ್ಧ ತಮಿಳು ನಟ ಸಿದ್ಧಾರ್ಥ್ ತೀವ್ರ ಅಸಾಮಾಧಾನ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿಯವರು ಅಕ್ಷಯ್​ ಕುಮಾರ್​ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಬಾಲ್ಯ, ಕುಟುಂಬದ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದರು. ಅದನ್ನು ನೋಡಿದ ಬಳಿಕ ಅನೇಕ ಜನರು, ಹಲವು ಅಭಿಪ್ರಾಯಗಳನ್ನು ​ಹಂಚಿಕೊಂಡಿದ್ದರು. ಹಾಗೇ ನಟ ಸಿದ್ಧಾರ್ಥ್​ ಕೂಡ ಈ ಬಗ್ಗೆ ವಾಗ್ದಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಅಕ್ಷಯ್​ ಕುಮಾರ್​ ಅವರು ಓರ್ವ ಖಳನಾಯಕರಂತಾಗಿ ತುಂಬ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಸಿದ್ಧಾರ್ಥ್​ ಅವರ ಟ್ವೀಟ್​ಗೆ ತುಂಬ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ಸಿದ್ಧಾರ್ಥ ಅವರು ತಮ್ಮ ಅಸೂಯೆಯಿಂದ ಹೊರಬರಬೇಕು ಎಂದು ಹೇಳಿದ್ದಾರೆ. ಅಲ್ಲದೆ ಅಕ್ಷಯ್​ಕುಮಾರ್​ ಅವರ ಡೈಲಾಗ್​ ಇರುವ ಮೆಮೆಗಳನ್ನೂ ಪೋಸ್ಟ್​ ಮಾಡುವ ಮೂಲಕ ಸಿದ್ಧಾರ್ಥ್​ ವಿರುದ್ಧ ಕಿಡಿಕಾರಿದ್ದಾರೆ.

ಸಿದ್ಧಾರ್ಥ್​ ತಮ್ಮ ಮನಸಿಗೆ ಬಂದಿದ್ದನ್ನು ಮಾತನಾಡುವವರು. ನರೇಂದ್ರ ಮೋದಿಯವರ ಬಯೋಪಿಕ್​ ಸಿನಿಮಾ ‘ಪಿಎಂ ನರೇಂದ್ರ ಮೋದಿ’ ಟ್ರೇಲರ್​ ಬಿಡುಗಡೆಯಾದಾಗ ಕೂಡ ಅದರ ವಿರುದ್ಧ ಹರಿಹಾಯ್ದಿದ್ದರು.
ನರೇಂದ್ರ ಮೋದಿಯವರ ಬಯೋಪಿಕ್ ಸಿನಿಮಾ ಟ್ರೇಲರ್​ನಲ್ಲಿ ಬಹುಶ್ಯಃ ಮೋದೀಜಿಯವರು ಏಕವ್ಯಕ್ತಿಯಾಗಿ ಬ್ರಿಟಿಷರನ್ನು ಸೋಲಿಸಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದು ತೋರಿಸಿಲ್ಲ ಎನಿಸುತ್ತದೆ. ಹಾಗೊಮ್ಮೆ ತೋರಿಸಿದ್ದರೆ ಪ್ರಗತಿಪರರ, ನಕ್ಸಲರ, ಕಮ್ಯೂನಿಸ್ಟರ ಹಾಗೂ ನೆಹರೂ ಅವರಿಗೆ ಟಾಂಗ್​ ಕೊಡಬಹುದಿತ್ತು. ಈ ಟ್ರೇಲರ್​ ಒಂದು ಚೀಪ್​ ಗಿಮಿಕ್​ ಎನಿಸುತ್ತದೆ ಎಂದು ವ್ಯಂಗ್ಯವಾಗಿ ಟ್ವೀಟ್​ ಮಾಡಿದ್ದರು.

2 Replies to “ನರೇಂದ್ರ ಮೋದಿಯವರ ಸಂದರ್ಶನ ಮಾಡಿದ ಅಕ್ಷಯ್ ಕುಮಾರ್​ ಅವರ ವಿರುದ್ಧ ನಟ ಸಿದ್ಧಾರ್ಥ್​ ಕೋಪ…”

Leave a Reply

Your email address will not be published. Required fields are marked *