ಅಳವಂಡಿ: ಗ್ರಾಮಗಳ ಅಭಿವೃದ್ಧಿಯಲ್ಲಿ ನರೇಗಾ ಯೋಜನೆ ತುಂಬಾ ಸಹಕಾರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೋಡೆಲ್ ಅಧಿಕಾರಿ ಟಿ.ಎಸ್.ಶಂಕರಯ್ಯ ಹೇಳಿದರು.
ಗ್ರಾಮದ ಗ್ರಾಪಂ ಆವರಣದಲ್ಲಿ ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುವ ಕುರಿತು ಆಯೋಜಿಸಿದ್ದ ಗ್ರಾಮ ಸಭೆಯನ್ನು ಉದ್ದೇಶಿಸಿ ಸೋಮವಾರ ಮಾತನಾಡಿದರು.
ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವಾರ್ಡ್ ಸಭೆ ನಡೆಸಿ ಬೇಡಿಕೆ ಪಟ್ಟಿ ಸ್ವೀಕರಿಸಲಾಗಿದೆ. ಉಳಿದವರು ಸಹ ಕಾಮಗಾರಿಗಳ ಬೇಡಿಕೆ ಸಲ್ಲಿಸಬೇಕು.ಎಲ್ಲ ಬೇಡಿಕೆಗಳನ್ನು ಕ್ರೋಢೀಕರಿಸಿ ಕ್ರಿಯಾ ಯೋಜನೆ ತಯಾರಿಸಲಾಗುವುದು ಎಂದರು.
ರಾಜೀವಗಾಂಧಿ ಪಂಚಾಯಿತಿರಾಜ ೆಲೋ ಸೌಜನ್ಯಾ ಮಾತನಾಡಿ, ನರೇಗಾ ಯೋಜನೆಯಡಿ ದನದ ಶೆಡ್, ಕುರಿ, ಕೋಳಿ ಶೆಡ್, ಎರೆಹುಳ ತೊಟ್ಟಿ, ಹಂದಿ ಶೆಡ್, ಕೃಷಿ ಹೊಂಡ, ಕಂದಕ ಬದು ನಿರ್ಮಾಣ, ಕೊಳವೆ ಭಾವಿ ಮರುಪೂರಣ, ಮೀನು ಕೃಷಿ ಮಾಡಬಹುದು ಎಂದರು.
ನರೇಗಾ ಯೋಜನೆಯಡಿ ಮಾನವ ದಿನಗಳನ್ನು 150 ದಿನಕ್ಕೆ ಹೆಚ್ಚಿಸುವಂತೆ ಹಾಗೂ ಮೇಟಿಗಳಿಗೆ ಸಂಬಳ ಪಾವತಿಸುವಂತೆ ಬೇಡಿಕೆ ಸಲ್ಲಿಸಿದರು.
ಗ್ರಾಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ, ಪಿಡಿಒ ಕೊಟ್ರಪ್ಪ ಅಂಗಡಿ, ಪ್ರಮುಖರಾದ ಗುರುಬಸವರಾಜ ಹಳ್ಳಿಕೇರಿ, ಅನ್ವರ ಗಡಾ, ರೇಣುಕಪ್ಪ, ಹನುಮಂತ ಮೂಲಿಮನಿ, ಹನುಮಂತ, ಮಲ್ಲಪ್ಪ ಬೆಣಕಲ್, ತೋಟಯ್ಯ ಅರಳೆಲೆಮಠ, ಖಾಜಪ್ಪ, ವಿಶ್ವನಾಥ, ದಾವಲಸಾಬ, ಶಿವಮೂರ್ತಿ, ದೇವೆಂದ್ರರಡ್ಡಿ, ಗೀತಾ, ಮಾರುತಿ, ಚನ್ನಮ್ಮ, ಶರಣಪ್ಪ, ಪ್ರವೀಣ, ಮಂಜುನಾಥ, ಏಕಯ್ಯ ಇತರರಿದ್ದರು.