ಅರಟಾಳ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ 2.50 ಕೋಟಿ ರೂ. ವೈಯಕ್ತಿಕ ಕಾಮಗಾರಿ ಮಾಡಿಕೊಳ್ಳಲು ಅನುದಾನವಿದೆ. ಜಿಲ್ಲೆಯಲ್ಲಿ ಅತೀ ಹೆಚ್ಚು ನರೇಗಾ ಕೆಲಸವನ್ನು ಪಂಚಾಯಿತಿಯಿಂದ ಕೈಗೊಂಡಿದ್ದೇವೆ ಎಂದು ಗ್ರಾಪಂ ಪಿಡಿಒ ಎ.ಜಿ.ಎಡಕೆ ಹೇಳಿದರು.
ಗ್ರಾಮದ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಸಭಾಭವನದಲ್ಲಿ ಗ್ರಾಪಂ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ನರೇಗಾ ಯೋಜನೆ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು. ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ ಮಾತನಾಡಿದರು.
ಗ್ರಾಪಂ ಉಪಾಧ್ಯಕ್ಷ ಶಂಕರ ಕೆಂಚಗೊಂಡ, ತಾಪಂ ಮಾಜಿ ಸದಸ್ಯ ಶಿವಪ್ಪ ಹಟ್ಟಿ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಶಿವಾನಂದ ನೇಮಗೌಡ, ರೇವಪ್ಪ ತೇಲಿ, ಮಹಾದೇವ ಡಂಗಿ, ಶಿವಾನಂದ ಪಾಟೀಲ, ಸದಾಶಿವ ಹೊನಗೌಡ, ಶಿವಾನಂದ ಖ್ಯಾಡಿ, ಮಹಾದೇವ ಪೂಜಾರಿ, ರಾಮಪ್ಪ ಭಂಡಾರಿ, ಡಾ.ಬಸವರಾಜ ಕೆಂಚಗೊಂಡ, ಹನುಮಂತ ಹಟ್ಟಿ, ಕಾಂತಾಬಾಯಿ ಹಟ್ಟಿ, ಗಂಗವ್ವ ಅರ್ಜುಣಗಿ, ಸರಸ್ವತಿ ಕಾಂಬಳೆ, ಭಾರತಿ ನಾಯಕ, ಕಾಸವ್ವ ಹೊನಗೌಡ, ಬಂಗಾರೆವ್ವ ಐಗಳಿ, ಮುತ್ತವ್ವ ಪೂಜಾರಿ, ಶಾಂತಾ ಕಟ್ಟಿಮನಿ, ಮಾಲಾ ಕಾಂಬಳೆ ಇತರರು ಇದ್ದರು.