ಗಂಡಸ್ತನ ಇದ್ದರೆ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಹೇಳಲಿ: ನಾರಾಯಣಗೌಡ ಸವಾಲು

ಮಂಡ್ಯ: ಸಿನಿಮಾ ನಟರು ಗೌರವದಿಂದ ಮನೆಯಲ್ಲಿರಬೇಕು. ಹೊರಗೆ ಬಂದು ಜೆಡಿಎಸ್​ ಪಕ್ಷ ಹಾಗೂ ಜೆಡಿಎಸ್​ ನಾಯಕರ ವಿರುದ್ಧ ಮಾತನಾಡಿದರೆ ಅದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದ ಕೆ.ಆರ್​.ಪೇಟೆ ಶಾಸಕ ಕೆ.ಸಿ. ನಾರಾಯಣಗೌಡ ಮತ್ತೊಮ್ಮೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿದ್ದಾರೆ.

ಜೆಡಿಎಸ್​ ಅಭ್ಯರ್ಥಿ ನಿಖಿಲ್​ ಮತ್ತು ಸಿಎಂ ಕುಮಾರಸ್ವಾಮಿ ಅವರು ಪ್ರಚಾರಕ್ಕೆ ನನ್ನನ್ನು ಕರೆಯಲಿಲ್ಲ. ಹಾಗಾಗಿ ನಾನು ಈ ಚುನಾವಣೆಯಲ್ಲಿ ತಟಸ್ಥನಾಗಿದ್ದೆ ಎಂದು ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್​ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಾರಾಯಣ ಗೌಡ ಅವರು, ಗಂಡಸ್ತನ ಇದ್ದರೆ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಹೇಳಲಿ ಎಂದು ಸವಾಲು ಹಾಕಿದರು.

ಚಂದ್ರಶೇಖರ್​ ಅವರನ್ನು ಸ್ವತಃ ರೇವಣ್ಣ ಅವರು ಕರೆದಿದ್ದಾರೆ. ನಿಖಿಲ್​ ಪರ ಪ್ರಚಾರ ಮಾಡಲು ಇಷ್ಟವಿಲ್ಲದ ಇವರು ಕಾಂಟ್ರವರ್ಸಿ ಮಾಡಲು ಮಾತನಾಡುತ್ತಾರೆ. ಇವರು ಸುಮಲತಾ ಪರ ಪ್ರಚಾರ ಮಾಡಿದ್ದನ್ನು ಎಲ್ಲರೂ ನೋಡಿದ್ದಾರೆ. ಸುಮಲತಾ ಪರ ಹಣ ಹಂಚಿಕೆ ಮಾಡಿದ್ದು, ಪಟಾಕಿ ಹೊಡೆಯಲು ವ್ಯವಸ್ಥೆ ಮಾಡಿದ್ದಾರೆ. ಧೈರ್ಯ ಇದ್ದರೆ ಇವರು ನೇರವಾಗಿ ಚುನಾವಣೆ ಎದುರಿಸಬೇಕು. ಸುಮ್ಮನೆ ಸುಳ್ಳು ಹೇಳಬಾರದು. ಮಾಡುವುದು ಒಂದು ಹೇಳುವುದು ಒಂದು ಆದರೆ ಜನ ಇವರನ್ನು ನಂಬುವುದಿಲ್ಲ ಎಂದು ನಾರಾಯಣಗೌಡ ಕಿಡಿ ಕಾರಿದರು.

One Reply to “ಗಂಡಸ್ತನ ಇದ್ದರೆ ಸುಮಲತಾ ಅಂಬರೀಷ್​ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಹೇಳಲಿ: ನಾರಾಯಣಗೌಡ ಸವಾಲು”

  1. Ee Narayana gowdrige enu gothu swami, nikil Kumar swami en film actor Alva, Ramya actress Alva, ivarige take rajakiya beku antha kelakkagalva? Adbittu sumalatha madam ge support madidavarige heltha iddare, education idre saldu, buddi annodu irbeku Narayana gowda sir avare

Leave a Reply

Your email address will not be published. Required fields are marked *