ಸ್ವಚ್ಛತೆ ಒಂದೇ ದಿನಕ್ಕೆ ಸೀಮಿತವಾಗದಿರಲಿ

blank

ಕೊಡೇಕಲ್: ನಾರಾಯಣಪುರದ ಬಸವಸಾಗರ ಜಲಾಶಯ ಹೆಮ್ಮೆಯ ತಾಣವಾಗಿದ್ದು, ಪ್ರವಾಸಿಗರು ಜಲಾಶಯ ಪರಿಸರ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು ಎಂದು ಕೃಷ್ಣಾ ಭಾಗ್ಯ ಜಲನಿಗಮದ ಅಣೆಕಟ್ಟು ವಲಯದ ಮುಖ್ಯ ಅಭಿಯಂತರ ಆರ್.ಮಂಜುನಾಥ ಹೇಳಿದರು.

blank

ಸ್ವಚ್ಛತಾ ಹೀ ಸೇವಾ ಆಂದೋಲನ ನಿಮಿತ್ತ ಬಸವಸಾಗರ ಜಲಾಶಯ ಬಳಿ ಭಾನುವಾರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ ಅವರು. ಕಳೆದ ಸೆ.೫ರಿಂದ ಅ.೨ರವರೆಗೆ ಜಲಾಶಯ, ನಿಗಮದ ಕಚೇರಿಗಳ ಆವರಣ, ವಸತಿಗೃಹ ಸಮುಚ್ಚಯ ಹಾಗೂ ನಿಗಮ ವ್ಯಾಪ್ತಿಯ ಎಲ್ಲ ಕಡೆ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಇದು ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು. ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದರು.

ಅಧಿಕಾರಿಗಳು ಜಲಾಶಯ ಆವರಣದಲ್ಲಿನ ಮುಳ್ಳು-ಕಂಟಿ ಸೇರಿ ಇನ್ನಿತರ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿ ಸ್ವಚ್ಛತೆಗೊಳಿಸಿದರು.

ಅಧೀಕ್ಷಕ ಅಭಿಯಂತರ ರಮೇಶ ಪವಾರ್, ಎಇ ಅಶೋಕರೆಡ್ಡಿ ಪಾಟೀಲ್, ಸುರೇಂದ್ರ ರಡ್ಡಿ, ತಂಬಿದೋರಿ, ಅಜಿತಕುಮಾರ, ರಮೇಶ ಜಾಧವ್, ಎಇಇ ಪ್ರಭಾಕರ, ಶಂಕರ ಹಡಲಗೇರಿ, ಮಹಾಲಿಂಗಪ್ಪ, ವಿಜಯಕುಮಾರ ಅರಳಿ, ಬಾಲಸುಬ್ರಮಣ್ಯಂ, ಶಿವರಾಜ ಪಾಟೀಲ್ ಹಾಗೂ ಹುಣಸಗಿ, ರೋಡಲಬಂಡಾ ಕಚೇರಿ ಸಿಬ್ಬಂದಿ, ಪಿಡಿಒ ಶರಣಗೌಡ ಬಿರಾದಾರ ಇತರರಿದ್ದರು.

Share This Article
blank

ತೂಕ ಇಳಿಸಿಕೊಳ್ಳಬೇಕೆಂದರೆ ಸಂಜೆ 7 ಗಂಟೆಯ ಮೊದಲು ಮಾತ್ರ ಊಟ ಮಾಡಿ! dinner

dinner :  ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕಾಗಿ ಅವರು ವ್ಯಾಯಾಮ…

ಹೊಳೆಯುವ ಚರ್ಮಕ್ಕಾಗಿ ಬಾಳೆಹಣ್ಣಿನ ಸಿಪ್ಪೆ! banana peel ಬಳಸುವ ಸರಳ ಮಾರ್ಗಗಳು ಇಲ್ಲಿವೆ…

 banana peel : ಬಾಳೆಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಅನೇಕ ಜನರು ಬಾಳೆಹಣ್ಣಿನಿಂದ ವಿವಿಧ ರುಚಿಕರವಾದ ಸಿಹಿತಿಂಡಿಗಳನ್ನು ಸಹ…

blank