ನರಗುಂದ: ಪಟ್ಟಣದ ಲಯನ್ಸ್ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲೆ, ಲಯನ್ಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಜ. 12ರಂದು ಬೆಳಗ್ಗೆ 10 ಗಂಟೆಗೆ ದಂಡಾಪೂರ ನಾಯ್ಕರ್ ಲೇಔಟ್ನಲ್ಲಿರುವ ಸಮೃದ್ಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಮನೋ ರೋಗ ತಜ್ಞ ಡಾ. ಆನಂದ ಪಾಂಡುರಂಗಿ ಮುಖ್ಯ ಅತಿಥಿಗಳಾಗಿ ಭಾಗಿಯಾಗುವರು. ಲಯನ್ಸ್ ಶಿಕ್ಷಣ ಸಂಸ್ಥೆ ಚೇರ್ಮನ್, ಶಾಸಕ ಸಿ.ಸಿ. ಪಾಟೀಲ ಅಧ್ಯಕ್ಷತೆ ವಹಿಸುವರು.
ಅತಿಥಿಗಳಾಗಿ ಲಯನ್ಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಜಿ.ಟಿ. ಗುಡಿಸಾಗರ, ಪ್ರಾಚಾರ್ಯ ಎಸ್.ಜಿ. ಜಕ್ಕಲಿ, ಲಯನ್ಸ್ ಆಂಗ್ಲ ಮಾಧ್ಯಮ ಶಾಲಾ ಮುಖ್ಯೋಪಾಧ್ಯಾಯ ವೈ.ಪಿ. ಕಲ್ಲನಗೌಡ್ರ, ಶೃದ್ಧಾ ಪಟ್ಟಣಶೆಟ್ಟಿ, ವಿದ್ಯಾಲಕ್ಷ್ಮೀ ಕವಲೂರ, ಶ್ರೇಯಸ್ ವರ್ಣೆಕರ್, ಜಿ.ಬಿ. ಕುಲಕರ್ಣಿ, ಬಿ.ಕೆ. ಗುಜಮಾಗಡಿ, ಡಾ.ಬಿ.ಎಂ. ಜಾಬಣ್ಣವರ, ಎಸ್.ಎಸ್. ಪಾಟೀಲ, ಸಿ.ಎಸ್. ಸಾಲೂಟಗಿಮಠ, ಜಿ.ವಿ. ಕಂಠಿ, ಟಿ.ಎಸ್. ರೋಖಡೆ, ಡಾ. ಪಿ.ಎಂ. ನಂದಿ, ಆರ್.ವಿ. ಆನೇಗುಂದಿ, ವಿ.ಬಿ. ಬೆಲೇರಿ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.