ಲಯನ್ಸ್ ಕ್ಲಬ್ ವಿಶ್ವ ಸೇವಾ ದಿನಾಚರಣೆ

blank

ನಾಪೋಕ್ಲು: ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷೆ ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ ಹೇಳಿದರು.
ನಾಪೋಕ್ಲು ಮಹಿಳಾ ಸಮಾಜದ ಆವರಣದಲ್ಲಿ ಶನಿವಾರ ಲಯನ್ಸ್ ಕ್ಲಬ್, ಗಾಯತ್ರಿ ಮಹಿಳಾ ಸಂಘದ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ವಿಶ್ವ ಸೇವಾ ದಿನಾಚರಣೆ ಕಾರ್ಯಕ್ರಮದಲ್ಲಿ ಶ್ರಮದಾನ ನಡೆಸಿ ಅವರು ಮಾತನಾಡಿದರು. ನೈರ್ಮಲ್ಯ ಕಾಪಾಡದಿದ್ದರೆ ವಿವಿಧ ರೀತಿಯ ರೋಗಗಳು ಬರುತ್ತವೆ. ಈ ನಿಟ್ಟಿನಲ್ಲಿ ಶುದ್ಧತೆ ಪಾಲನೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದರು.
ವಿವಿಧ ಸಂಘ, ಸಂಸ್ಥೆ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಹಲವಾರು ಸಾಮಾಜಿಕ ಚಟುವಟಿಕೆ ಮತ್ತು ಸೇವಾ ಕಾರ್ಯಗಳನ್ನು ಮಾಡುತ್ತಿದೆ. ಇದಕ್ಕೆ ನಾಗರಿಕರ ಸಹಕಾರವೂಬಹು ಮುಖ್ಯ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಹಿಳಾ ಸಮಾಜದ ಆವರಣದಲ್ಲಿ ಬೆಳೆದಿದ್ದ ಗಿಡ, ಗಂಟಿ ತೆರವುಗೊಳಿಸಿ , ಪ್ಲಾಸ್ಟಿಕ್ ಮತ್ತು ಕಸ, ಕಡ್ಡಿ ಗುಡಿಸಿ ಶುಚಿ ಮಾಡಲಾಯಿತು.
ಸಂಸ್ಥೆ ಕಾರ್ಯದರ್ಶಿ, ಕುಂಚೆಟ್ಟಿರ ರೇಷ್ಮಾ ಉತ್ತಪ್ಪ, ಕುಂಡ್ಯೋಳಂಡ ಗಣೇಶ ಮುತ್ತಪ್ಪ, ಅಪ್ಪಾರಂಡ ಶುಭಾಷ ತಿಮ್ಮಯ್ಯ, ಮಾದೆಯಂಡ ಡಿ ಕುಟ್ಟಪ್ಪ ,ಗಾಯತ್ರಿ ಮಹಿಳಾ ಸಂಘದ ಅಧ್ಯಕ್ಷೆ ಧರಣಿ ಗಣಪತಿ, ಕಾರ್ಯದರ್ಶಿ ಕೇಲೆಟಿರ ಮಾಲಾ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕುಲ್ಲೇಟಿರ ಹೇಮಾ, ಬೊಪಂಡ ಬೊಳ್ಳಮ್ಮ ಸೇರಿದಂತೆ ಮಹಿಳಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು .

Share This Article

Skin Care | ಚಳಿಗಾಲದಲ್ಲಿ ತ್ವಚೆ ಆರೈಕೆಗಾಗಿ ಅಲೋವೆರಾ ಫೇಸ್​ಪ್ಯಾಕ್​​; ನೀವೊಮ್ಮೆ ಟ್ರೈ ಮಾಡಿ

ಚಳಿಗಾಲ ಆರಂಭವಾಯಿತು ಎಂದರೆ ಸಾಕು ತ್ವಚೆಯಲ್ಲಿ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳುವುದನ್ನು ನಾವು ನೊಡಬಹುದು. ಇನ್ನು ಮುಖದ…

15 ನಿಮಿಷದಲ್ಲಿ ತಯಾರಿಸಿ ಟೊಮೆಟೊ ಸಾಸ್​​; ಇಲ್ಲಿದೆ ನೋಡಿ ಮಾಡುವ ಸಿಂಪಲ್​​ Recipe

ಕೆಲವು ಪದಾರ್ಥಗಳು ಅಂಗಡಿಯಿಂದ ತಂದರೆ ಮಾತ್ರ ರುಚಿಯಾಗಿರುತ್ತದೆ ಎಂದು ಹೇಳಲಾಗುತ್ತದೆ. ಅದರಲ್ಲಿ ಟೊಮೆಟೊ ಸಾಸ್ ಕೂಡ…

ಕಿಡ್ನಿ ಸ್ಟೋನ್​​​ನಿಂದ ಬಳಲುತ್ತಿದ್ದೀರಾ?; ಹಾಗಾದ್ರೆ ಈ ಆಹಾರ ಪದಾರ್ಥಗಳಿಂದ ಅಂತರ ಕಾಯ್ದುಕೊಳ್ಳಿ | Health Tips

ನಿಮಗೆ ಮೂತ್ರಪಿಂಡದಲ್ಲಿ ನೋವು ಕಾಣಿಸಿಕೊಂಡರೆ ಅದು ಕಲ್ಲುಗಳ ಸಂಕೇತವಾಗಿರಬಹುದು. ವೈದ್ಯರ ಬಳಿ ತಪಾಸಣೆ ಮಾಡಿಸಿದರೆ ಒಳಿತು.…