More

    ಪೌರತ್ವ ಕಾಯ್ದೆ ವಿರೋಧಿಗಳಿಗೆ ಗುರುದ್ವಾರ ದಾಳಿಯೇ ಉತ್ತರ

    ಪಾಕಿಸ್ತಾನದ ಲಾಹೋರ್​ನಲ್ಲಿರುವ ಗುರುದ್ವಾರದ ಮೇಲೆ ನಡೆದಿರುವ ದಾಳಿಯನ್ನು ಉಲ್ಲೇಖಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಎ ವಿರೋಧಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಭಾನುವಾರ ದೆಹಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ನನಕಾನಾ ಸಾಹಿಬ್​ನಲ್ಲಿ ಉದ್ರಿಕ್ತ ಗುಂಪೊಂದು ಗುರುದ್ವಾರ ಮೇಲೆ ದಾಳಿ ನಡೆಸಿದೆ.

    ನೆರೆ ದೇಶದಲ್ಲಿ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳನ್ನು ಕಣ್ಣು ಬಿಟ್ಟು ನೋಡಿ ಎಂದು ಪ್ರತಿಪಕ್ಷಗಳನ್ನು ಕುಟುಕಿದರು. ‘ಸಿಎಎ ವಿರೋಧಿಸುತ್ತಿರುವ ಎಲ್ಲರಿಗೂ ಇದೊಂದು ಉತ್ತರವಾಗಿದೆ. ಗುರುದ್ವಾರ ನನಕಾನಾ ಸಾಹಿಬ್​ನಲ್ಲಿ ಹಲ್ಲೆಗೊಳಗಾದ ಸಿಖ್ಖರು ಭಾರತಕ್ಕಲ್ಲದೆ ಬೇರೆಲ್ಲಿ ಹೋಗಲು ಸಾಧ್ಯ?’ ಎಂದು ಪ್ರಶ್ನಿಸಿದರು. ಸಿಎಎ ಬಗ್ಗೆ ಪ್ರತಿಪಕ್ಷಗಳು ಸುಳ್ಳುಗಳ ಕಂತೆಗಳನ್ನೇ ಹರಿಬಿಡುತ್ತಿದ್ದಾರೆ ಎಂದು ಆಪಾದಿಸಿದರು.

    ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಪೌರತ್ವ ತಿದ್ದುಪಡಿ ಕಾನೂನು (ಸಿಎಎ) ವಿಚಾರದಲ್ಲಿ ಜನರನ್ನು ತಪು್ಪ ದಾರಿಗೆಳೆದು ‘ಗಲಭೆಗಳಿಗೆ’ ಪ್ರಚೋದಿಸುತ್ತಿದ್ದಾರೆ ಎಂದು ಅಮಿತ್ ಷಾ ಆರೋಪಿಸಿದ್ದಾರೆ. ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಕೂಡ ಇದರಿಂದ ಹೊರತಲ್ಲ. ಅಲ್ಪಸಂಖ್ಯಾತರ ನಾಗರಿಕತ್ವ ಕಿತ್ತುಕೊಳ್ಳುವ ಯಾವುದೇ ಉದ್ದೇಶ ಈ ಕಾನೂನಿಗಿಲ್ಲ ಎಂದು ಅವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಸಿನಿಮಾ

    Latest Posts