ಡಿಕೆಶಿ ಎರಡನೇ ಸಿದ್ಧಾರ್ಥ ಆಗಬಾರದು, ಹೀಗಾಗಿ ಒಕ್ಕಲಿಗರ ಹೋರಾಟ ಅನಿವಾರ್ಯ: ನಂಜಾವಧೂತ ಸ್ವಾಮೀಜಿ

ಬೆಂಗಳೂರು: ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥನಂತಾಗಬಾರದು. ಹಾಗಾಗಿ ಒಕ್ಕಲಿಗರು ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ ಎಂದು ನಂಜಾವಧೂತ ಸ್ವಾಮೀಜಿ ತಿಳಿಸಿದ್ದಾರೆ.

ಬಂಧಿಸಿರುವುದನ್ನು ಖಂಡಿಸಿ, ಕೇಂದ್ರ ಸರ್ಕಾರದ ವಿರುದ್ಧ ವಿಶ್ವ ಒಕ್ಕಲಿಗರ ಒಕ್ಕೂಟ ಹಮ್ಮಿಕೊಂಡಿರುವ ರಾಜಭವನ ಚಲೋ ಪ್ರತಿಭಟನೆ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದ ಅವರು ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದರು. ‘ನಾಳೆಯೇ ಡಿಕೆಶಿಯನ್ನು ಬಿಡುಗಡೆ ಮಾಡಿ ಎಂದು ಕೇಳಲು ನಾವು ಇಲ್ಲಿ ಬಂದಿಲ್ಲ. ನ್ಯಾಯಾಂಗ ಡಿಕೆಶಿಯ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಈಗಾಗಲೇ ನಾವು ಕಳೆದುಕೊಂಡಿರುವ ಸಿದ್ಧಾರ್ಥ ಮತ್ತು ಇ.ಡಿ. ಬಂಧನದಲ್ಲಿರುವ ಡಿಕೆಶಿ ಜತೆ ನಮ್ಮ ಜನಾಂಗ ಇದೆ ಎಂದು ತೋರಿಸಲು ನಾವು ಇಲ್ಲಿಗೆ ಬಂದಿದ್ದೇವೆ ಎಂದು ತಿಳಿಸಿದರು.

ಇದೊಂದು ಪಕ್ಷಾತೀತವಾದ, ಯಾರ ವಿರುದ್ಧವೂ ಅಲ್ಲದ, ದುರುದ್ದೇಶದಿಂದ ಕೂಡಿರದ, ನಮ್ಮ ನೋವನ್ನು ವ್ಯಕ್ತಪಡಿಸಲು ಮಾಡಿರುವ ಶುದ್ಧ ಹೋರಾಟ. ಆದಿಚುಂಚನಗಿರಿ ಮಹಾಸ್ವಾಮಿಗಳು ಮೀಸಲಾತಿಯ ಉದ್ದೇಶ ಸರಿ ಆಗುತ್ತಿಲ್ಲವೆಂದಾಗ, ಚಿನ್ನಪ್ಪರೆಡ್ಡಿ ವರದಿ ಆಧಾರದ ಮೇಲೆ ಪ್ರತಿಭಟನೆಗೆ ಕರೆಕೊಟ್ಟಿದ್ದರು. ಆಗಿನ ಕರೆಗೆ ಸಾವಿರಾರು ಜನರು ಪ್ರತಿಭಟನೆಯಲ್ಲಿ ಸೇರಿದ್ದರು. ಆ ಪ್ರತಿಭಟನೆ ಹೊರತುಪಡಿಸಿದರೆ ಇಂದಿನದೇ ಅತಿ ದೊಡ್ಡ ಪ್ರತಿಭಟನೆ. ಸಮುದಾಯದ ಕಟ್ಟ ಕಡೆಯ ವ್ಯಕ್ತಿಗೆ ನೋವುಂಟಾದರೂ, ನಾವು ಒಟ್ಟಾಗಿ ನಿಲ್ಲುತ್ತೇವೆಂದು ನೀವು ಇಂದು ತೋರಿಸಿದ್ದೀರಿ ಎಂದು ನಂಜವಧೂತ ಸ್ವಾಮೀಜಿ ತಿಳಿಸಿದರು.

5 Replies to “ಡಿಕೆಶಿ ಎರಡನೇ ಸಿದ್ಧಾರ್ಥ ಆಗಬಾರದು, ಹೀಗಾಗಿ ಒಕ್ಕಲಿಗರ ಹೋರಾಟ ಅನಿವಾರ್ಯ: ನಂಜಾವಧೂತ ಸ್ವಾಮೀಜಿ”

  1. No other Swamiji is shamed a hindu religion than these types of Swamijis who supports corruption in a particular caste for corrupt people . Swamijis should be like God . Now a days swamiji are rapists, murderers and corrupt people. Vokkaligas cannot be like above. Swamiji Shame Shame Shame . In hindu such swamijis are not having place. Lalu Rabari Mulayam Devegowda Kumara are the best corrupt people

    1. A 6000 crore rupees corruption case was filed against YS Choudary a telangana MP by ED department after few days he joined BJP now ED has closed the case against him in the same way Bjp wants DKS to join BJP but he refused to join so they filed case against him although he never missed any interrogation whenever they issued summons he went abd answered to their questions but still they arrested him

  2. Namasthe swamijigale illi comgressnavaranthe jatirajakarana madilla or JDS type jathi rajakarana madilla nivu jathigagi mathu darmakkagi nimmanna misalirisikolli rajakiya beda annodu nanna bavane
    DKS sir thapithastharala andre vapas barthare illa andre allirthare thappu yare madudru shikshe aguthe

  3. Yake evaglu jaati beeja bitthi samajadalli Kettadagi vathavarna srusti madtha edira..pls jaathi bitthabedi olle marga manaveeyate eruva gunagala bagge ..namma samskruti bagge heli …tappu yare madidru adu tappe..kaanunu adanna nodkollutte…

Leave a Reply

Your email address will not be published. Required fields are marked *